ಕೊವಿಡ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮಹಿಳೆಯೊಬ್ಬರಿಗೆ ದಂಡ ವಿಧಿಸಿದ ಅಧಿಕಾರಿಯೇ ಆಕೆಯಿಂದ ಒದೆ ತಿಂದಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಕೊವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿಲ್ಲ ಎಂದು ದಂಡ ವಿಧಿಸಿದ್ದಕ್ಕೆ ಆ ಅಧಿಕಾರಿಯ ಕೆನ್ನೆಗೆ ಹೊಡೆದು, ಕಾಲಿನಲ್ಲಿ ಒದ್ದು, ಆತನ ಕೂದಲನ್ನು ಹಿಡಿದು ಎಳೆದಾಡಿರುವ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಘಟನೆ ಸಂಬಂಧ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ.
ನವದೆಹಲಿಯಲ್ಲಿ ನಡೆದ ಈ ಘಟನೆಯ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ದೆಹಲಿಯ ಪೀರಾಗಢಿ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ಮೆಟ್ರೋದಲ್ಲಿ ಸಂಚರಿಸಲು ಸ್ಟೇಷನ್ ಒಳಗೆ ಹೋಗುತ್ತಿದ್ದ ಇಬ್ಬರು ಮಹಿಳೆಯರು ಮಾಸ್ಕ್ ಧರಿಸಿರಲಿಲ್ಲ. ದೆಹಲಿಯಲ್ಲಿ ಕೊವಿಡ್ ಕೇಸುಗಳು ಹೆಚ್ಚಾಗಿರುವುದರಿಂದ ಕೊರೊನಾ ನಿಯಮ ಪಾಲನೆ ಮಾಡದವರಿಗೆ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ, ಮಾಸ್ಕ್ ಧರಿಸದ ಆ ಮಹಿಳೆಯರಿಬ್ಬರಿಗೆ ಅಲ್ಲಿದ್ದ ಅಧಿಕಾರಿ ದಂಡ ವಿಧಿಸಿ, ಚಲನ್ ನೀಡಿದ್ದಾರೆ. ದಂಡ ವಿಧಿಸಿದ್ದಕ್ಕೆ ಕೋಪಗೊಂಡ ಮಹಿಳೆಯರು ಆ ಅಧಿಕಾರಿಯ ಜೊತೆ ಜಗಳವಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಅವರಲ್ಲೊಬ್ಬ ಮಹಿಳೆ ಅಧಿಕಾರಿಯ ಕೂದಲನ್ನು ಹಿಡಿದು ಎಳೆದಾಡಿ, ಹೊಡೆದು, ಕಾಲಿನಿಂದ ಒದ್ದು ಗಲಾಟೆ ಮಾಡಿದ್ದಾರೆ. ಇದ್ದಕ್ಕಿದ್ದಂತೆ ತನ್ನ ಮೇಲೆ ಹಲ್ಲೆ ಮಾಡಿದ್ದರಿಂದ ಆ ಅಧಿಕಾರಿಯೂ ಕಂಗಾಲಾಗಿದ್ದಾರೆ. ಅಲ್ಲಿದ್ದ ಜನರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
#JUSTIN: Two women have been arrested from Outer Delhi’s Peeragarhi metro station for allegedly assaulting a civil defence volunteer when she stopped one of them for not wearing mask. An FIR has been registered against both of them. @IndianExpress, @ieDelhi pic.twitter.com/t1ev3Cj9Tx
— Mahender Singh Manral (@mahendermanral) August 9, 2021
ಅಷ್ಟರಲ್ಲಿ ಆ ಮೆಟ್ರೋ ಸ್ಟೇಷನ್ನ ಇತರೆ ಸಿಬ್ಬಂದಿ ಆ ಮಹಿಳೆಯನ್ನು ಎಳೆದು ನಿಲ್ಲಿಸಿದ್ದಾರೆ. ತನ್ನ ಬಾಸ್ಗೆ ಫೋನ್ ಮಾಡಿದ ಆಕೆ ಆ ಅಧಿಕಾರಿ ವಿರುದ್ಧ ದೂರಿದ್ದಾಳೆ. ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ವಿಡಿಯೋವನ್ನು ಆಧರಿಸಿ ಪೊಲೀಸರು ಆ ಮಹಿಳೆಯರಿಬ್ಬರ ಮೇಲೆ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಇದನ್ನೂ ಓದಿ: Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್ನಲ್ಲಿ ದರೋಡೆ!
(Shocking Video Woman kicks slaps officials for Issuing Fine challan for Not Wearing Face Mask watch Viral Video)