Siblings: ಏನೇನೋ ಕಾರಣಗಳಿಂದ ಮತ್ತು ಅನಿವಾರ್ಯ ಸನ್ನಿವೇಶಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಒಡಹುಟ್ಟಿದವರು ಬೇರ್ಪಡುವ ಸಂದರ್ಭ ಒದಗಿರುತ್ತದೆ. ಹೀಗಿರುವಾಗ ಅಕ್ಕ, ಅಣ್ಣ, ತಮ್ಮ, ತಂಗಿ ಎಲ್ಲರೂ ಪರಸ್ಪರರ ಸ್ಮೃತಿಪಟಲದಲ್ಲಿ ಮಾತ್ರ ವಾಸವಾಗಿರುತ್ತಾರೆ. ಆದರೆ ಮುಂದೊಂದು ಸಂದರ್ಭದಲ್ಲಿ ಎದುರುಗೊಳ್ಳಲು ಅವಕಾಶ ಸಿಕ್ಕರೆ ಹೇಗಿರಬೇಡ? ಇತ್ತೀಚೆಗಷ್ಟೇ ಕರ್ತಾರ್ಪುರ್ ಕಾರಿಡಾರ್ನಲ್ಲಿ ವಯೋವೃದ್ಧ ಅಣ್ಣತಂಗಿಯರು 75 ವರ್ಷಗಳ ನಂತರ ಒಂದಾದ ವರದಿಯನ್ನು ಓದಿದ್ದೀರಿ. ಅದಕ್ಕೆ ಸಂಬಂಧಿಸಿದ ವಿಡಿಯೋ ಪೂರ್ವನಿಯೋಜಿತವಾಗಿತ್ತು. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. 22 ವರ್ಷಗಳ ನಂತರ ಈ ಒಡಹುಟ್ಟಿದವರು ಅಚ್ಚರಿ, ಸಂಭ್ರಮ ಮತ್ತು ಭಾವುಕತೆಯಿಂದ ಕರಗಿದ್ದನ್ನು…
ಸೋದರ ತನ್ನ ಮಗುವಿನೊಂದಿಗೆ ರೆಸ್ಟೋರೆಂಟ್ನಲ್ಲಿ ಕುಳಿತಿದ್ದಾನೆ. ಸೋದರಿ ಕಾಫಿ ಮತ್ತು ಜ್ಯೂಸ್ ತಂದು ಟೇಬಲ್ ಮೇಲಿಟ್ಟು ಎರಡೂ ಕೈಚಾಚಿ ಅಪ್ಪಿಕೊಳ್ಳಲು ಕಾಯುತ್ತಾಳೆ. ಯಾರೂ ಆಗಂತುಕರು ಹೀಗೇಕೆ ಮಾಡುತ್ತಿದ್ದಾರೆ ಎಂದು ಸೋದರ ಅನುಮಾನಿಸುತ್ತಾನೆ. ನಂತರ ಆಕೆ ಗುರುತನ್ನು ಹೇಳಿದಾಗ ಕೈಯಲ್ಲಿದ್ದ ಮಗುವನ್ನು ಬಿಟ್ಟು ಆಕೆಯನ್ನು ಅಪ್ಪಿಕೊಳ್ಳುತ್ತಾನೆ.
ಇದನ್ನೂ ಓದಿ : Viral Video: ಮಳೆಯ ಆಹ್ಲಾದಕ್ಕೆ ಮನಸೋತ ಮರಿಯಾಮೆಗಳ ವಿಡಿಯೋ
ಅಬ್ಬಾ ಯಾರದೋ ಬದುಕಿನ ಅತ್ಯಪೂರ್ವ ಗಳಿಗೆಗಳಿಗೆ ನಾನು ಸಾಕ್ಷಿಯಾದೆ. ಎಲ್ಲ ಸರಿ ಆದರೆ ಆ ಮಗುವನ್ನು ಹಾಗೇಕೆ ಅವ ಕೈಬಿಟ್ಟ. ನನ್ನ ಅಣ್ಣನನ್ನು ಅಪ್ಪಿಕೊಂಡು 8 ವರ್ಷಗಳೇ ಕಳೆದವು, ಮತ್ತೆ ಅವನನ್ನು ಹೀಗೆಯೇ ಅಪ್ಪಕೊಳ್ಳಲು ಕಾಯುತ್ತಿದ್ದೇನೆ. ಈ ದೃಶ್ಯ ತುಂಬಾ ಸುಂದರ ಮತ್ತು ಶಕ್ತಿಯಿಂದ ಕೂಡಿದೆ ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ : Viral: ನನ್ನನ್ನು ಮದುವೆಯಾಗುವೆಯಾ? ಡಬ್ಲಿನ್ ವಿಮಾನ ನಿಲ್ದಾಣದಲ್ಲಿ ಹೀಗೊಂದು ಪ್ರೇಮನಿವೇದನಾ ಪ್ರಸಂಗ
ಈ ವಿಡಿಯೋದೊಂದಿಗೆ ಇದರ ಹಿಂದಿರುವ ಕಥೆಯನ್ನೂ ಬರೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಒಡಹುಟ್ಟಿದವರಿಂದ ದೂರ ಉಳಿಯುವುದನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ, ಏಕೆಂದರೆ ಅವರೆಲ್ಲ ನನ್ನ ಅತ್ಯಂತ ಉತ್ತಮ ಸ್ನೇಹಿತರು ಎಂದು ಒಬ್ಬರು ಹೇಳಿದ್ಧಾರೆ. ನನಗಂತೂ ಅಳುವೇ ಬಂದಿತು ಈ ವಿಡಿಯೋ ನೋಡಿ, ನನಗೂ ಒಬ್ಬ ಅಣ್ಣನಿರಬೇಕಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.
ಬಂಧಗಳಿಲ್ಲದೆ ನಾವು ಎಂದಾದರೂ ಬದುಕಲು ಸಾಧ್ಯವೆ, ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:51 pm, Wed, 31 May 23