Viral Video: ಸಿಂಗಲ್ ಪೇರೆಂಟ್​; ತಾಯಂದಿರ ದಿನಕ್ಕೆ ಅಮ್ಮನಂತೆ ವೇಷ ಧರಿಸಿ ಅಪ್ಪ ಶಾಲೆಗೆ ಬಂದ ಆ ದಿನ

|

Updated on: Oct 13, 2023 | 4:21 PM

Single Parent: ಮದರ್ಸ್​ ಡೇ ದಿನ ಅಮ್ಮನನ್ನು ಶಾಲೆಗೆ ಕರೆದುಕೊಂಡು ಬಾ ಎಂದಿದ್ದಾರೆ. ಅಮ್ಮನೇ ಇಲ್ಲದ ಮಗಳು ಎಲ್ಲಿಂದ ಆಕೆಯನ್ನು ಕರೆತಂದಾಳು?; ಮಗಳ ಮನಸ್ಸನ್ನು ಅರ್ಥ ಮಾಡಿಕೊಂಡ ತಂದೆ, ತಾನೇ ತಾಯಿಯಂತೆ ವೇಷ ಹಾಕಿಕೊಂಡು ಮಗಳ ಶಾಲೆಗೆ ಹೋಗಿದ್ದಾನೆ. ಅಪ್ಪನೊಳಗೆ ಅಮ್ಮನನ್ನೂ ಕಂಡ ಮಗಳು ಸಂತೋಷದಿಂದ ಆತನನ್ನು ಅಪ್ಪಿಕೊಂಡಿದ್ದಾಳೆ.

Viral Video: ಸಿಂಗಲ್ ಪೇರೆಂಟ್​; ತಾಯಂದಿರ ದಿನಕ್ಕೆ ಅಮ್ಮನಂತೆ ವೇಷ ಧರಿಸಿ ಅಪ್ಪ ಶಾಲೆಗೆ ಬಂದ ಆ ದಿನ
ಮದರ್ಸ್ ಡೇ ದಿನ ಮಗಳಿಗಾಗಿ ಅಮ್ಮನಂತೆ ವೇಷ ಹಾಕಿದ ಅಪ್ಪ
Follow us on

Father Love: ಸಮಾಜಕ್ಕಿಂತ ನೀವು ಮಗಳ ಬಗ್ಗೆ ಗಮನ ಕೊಟ್ಟಿದ್ದೀರಿ, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಯಾರಾದರೂ ತಂದೆಯಾಗಬಹುದು, ಆದರೆ ಇಂಥ ತಂದೆಯಾಗಬೇಕೆಂದರೆ ವಿಶೇಷ ವ್ಯಕ್ತಿತ್ವ ಇರಬೇಕು. ನನಗೆ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಗು ದೇವರಿಂದ ಆಶೀರ್ವದಿಸಲ್ಪಟ್ಟಿದೆ. ನಾನು ನೋಡಿದ ಈತನಕದ ವಿಡಿಯೋಗಳಲ್ಲಿ ಇದು ಅತ್ಯಂತ ಸುಂದರವಾಗಿದೆ. ಒಬ್ಬಂಟಿ ಪೋಷಕರಿಗೆ (Single Parent) ಇದೋ ಗೌರವ. ಮಕ್ಕಳಿಗಾಗಿ ಬದುಕನ್ನು ಮೀಸಲಿಡುವ ಸಿಂಗಲ್ ಪೇರೆಂಟ್​ಗೆ ಶುಭವಾಗಲಿ. ಈ ಮಗುವಿನ ತಾಯಿ ಸ್ವರ್ಗದಲ್ಲಿ ನಗುತ್ತಿರಬೇಕು. ಈ ಮಗು ತನ್ನ ಬದುಕಿನಲ್ಲಿ ಸರಿಯಾದ ವ್ಯಕ್ತಿಯನ್ನು ಪಡೆದಿದೆ… ಹೀಗೆ ನೆಟ್ಟಿಗರನೇಕರು ಈ ವಿಡಿಯೋದಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಅದೃಷ್ಟವಂತೆ ಬಾರ್ಬಿ; ಈಕೆಯನ್ನು ಮುದ್ದಿಸುತ್ತಿರುವ ಬೆಕ್ಕಿನ ತನ್ಮಯತೆ ಆಹಾ!

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 22ರಂದು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಗ್ರೇಟ್​ ಡ್ಯಾಡಿ ಎಂದಿದ್ದಾರೆ ನೆಟ್ಟಿಗರು. ಎಲ್ಲರಿಗೂ ಇಂಂಥ ಅಪ್ಪ ಸಿಗುವುದಿಲ್ಲ ಎಂದಿದ್ದಾರೆ ಒಬ್ಬರು. ಮಕ್ಕಳಿಗಾಗಿ ಏನನ್ನೂ ಮಾಡುವ ಇಂಥ ಅಪ್ಪನೋ ಅಮ್ಮನೋ ಇರುವುದು ಬಹಳ ವಿರಳ ಎಂದಿದ್ದಾರೆ ಇನ್ನೊಬ್ಬರು. ಇಂಥ ಅಪ್ಪಂದಿರ ತೋಳಲ್ಲಿರುವ ಮಕ್ಕಳು ಸದಾ ಸುರಕ್ಷಿತ ಎಂದಿದ್ದಾರೆ ಮತ್ತೊಬ್ಬರು.

ಮದರ್ಸ್​ ಡೇ; ಅಮ್ಮನಂತೆ ಅಲಂಕರಿಸಿಕೊಂಡು ಮಗಳ ಶಾಲೆಗೆ ಹೋದ ತಂದೆ

ಸಲಿಂಗಕಾಮಿ ಪುರುಷರು ಯಾವಾಗಲೂ ಕರುಣೆ ಮತ್ತು ಮೃದು ಸ್ವಭಾವದವರಾಗಿರುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಬಹುಶಃ ಈ ಮಗುವನ್ನು ಈ ಅಪ್ಪ ದತ್ತು ತೆಗೆದುಕೊಂಡಿರಬಹುದು ಎಂದು ಇನ್ನೊಬ್ಬರು ಹೇಳಿದ್ದಾರೆ. ಸಾಮಾನ್ಯ ಪುರುಷ ಮಗುವಿಗಾಗಿ ಅಮ್ಮನ ಹಾಗೆ ವೇಷ ಧರಿಸಿದರೆ ಅದಕ್ಕೆ ಇಷ್ಟೊಂದು ಅರ್ಥ ಕಲ್ಪಿಸುವುದೆ? ಎಂದು ಮತ್ತೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ : Viral Video: ಗೂಢಚಾರರಿದ್ದಾರೆ ಎಚ್ಚರಿಕೆ! ಮಹಿಳೆಯರಷ್ಟೇ ಇಂಥ ತಂತ್ರಗಳಲ್ಲಿ ಬುದ್ಧಿವಂತರೇ?

ಸಂಬಂಧವನ್ನು ಬದಿಗಿಡಿ, ಪರಸ್ಪರ ವ್ಯಕ್ತಿಯಂತೆ ಪರಿಗಣಿಸಿ ಎಂದಿದ್ದಾರೆ ಮಗದೊಬ್ಬರು. ಒಬ್ಬರಿಗೆ ಇನ್ನೊಬ್ಬರು ಆಗುವುದೇ ಸಂಬಂಧ ಮತ್ತು ಮಾನವೀಯತೆ ಎಂದಿದ್ದಾರೆ ಇನ್ನೂ ಒಬ್ಬರು. ಅಂತೂ ಅಮ್ಮಂದಿರ ದಿನಾಚರಣೆಗೆ ಅಪ್ಪ ಅಮ್ಮನಾಗಿ ಹೋಗಿದ್ದು ನೆಟ್ಟಿಗರಲ್ಲಿ ಸಾಕಷ್ಟು ವಿಚಾರಗಳನ್ನು ಹೊಮ್ಮಿಸಿದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:19 pm, Fri, 13 October 23