ಕೃಷಿಭೂಮಿಯೊಂದರಲ್ಲಿ ಇದ್ದಕ್ಕಿದ್ದಂತೆಯೇ ದೈತ್ಯಾಕಾರದ ಗುಂಡಿಯೊಂದು ಕಂಡು ಬಂದಿದೆ. ಪ್ರಾರಂಭದಲ್ಲಿ ಚಿಕ್ಕದಾಗಿದ್ದ ಗುಂಡಿ ಸಮಯ ಕಳೆಯುತ್ತಿದ್ದಂತೆಯೇ ದೈತ್ಯಾಕಾರದಲ್ಲಿ ವಿಸ್ತಾರಗೊಂಡಿದೆ. ಅಕ್ಕ-ಪಕ್ಕದಲ್ಲಿರುವ ಮನೆಗಳನ್ನೂ ನುಂಗುವಷ್ಟರ ಮಟ್ಟಿಗೆ ಗುಂಡಿ ವಿಸ್ತಾರಗೊಳ್ಳುತ್ತಲೇ ಇದೆ. ಒಂದು ಕ್ಷಣ ವಿಡಿಯೋ ನೋಡುತ್ತಿದ್ದಂತೆಯೇ ಆಶ್ಚರ್ಯದ ಜೊತೆಗೆ ಮೈ ಜುಂ ಅನ್ನುವುದಂತೂ ಸತ್ಯ.
ಮೆಕ್ಸಿಕೊದ ಪ್ಯೂಬ್ಲಾ ರಾಜ್ಯದ ಕೃಷಿಭೂಮಿಯಲ್ಲಿ ಸುಮಾರು 300 ಅಡಿ ವಿಸ್ತಾರದ ಬೃಹತ್ ಸಿಂಕ್ಹೋಲ್ ಕಂಡು ಬಂದಿದೆ. ಅಧಿಕಾರಿಗಳು ಸ್ಥಳದ ಪರಿಶೀಲನೆಗೆ ಬಂದಿದ್ದು ಈ ಸಿಂಕ್ಹೋಲ್ ಸುಮಾರು 60 ಅಡಿ ಆಳವಾಗಿದೆ ಎಂದು ಪರಿಶೀಲಿಸಿದ್ದಾರೆ. ಯಾರೂ ಕೂಡಾ ಸಿಂಕ್ಹೋಲ್ನ ಹತ್ತಿರಕ್ಕೆ ಹೋಗದಂತೆ ಸೂಚನೆ ನೀಡಿದ್ದಾರೆ.
ಶನಿವಾರ ನೋಡಿದಾಗ ಸಿಂಕ್ಹೋಲ್ ತುಂಬಾ ಚಿಕ್ಕದಾಗಿತ್ತು. ಆದರೆ ಕ್ರಮೇಣವಾಗಿ 70,000 ಚದರ ಅಡಿಯಷ್ಟು ವಿಸ್ತಾರಗೊಂಡಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಕೂಡಾ ಹಾನಿಯಾಗಿಲ್ಲ. ಇದೀಗ ಆ ಗುಂಡಿ ಅಂತರ್ಜಲದಿಂದ ಆವೃತವಾಗಿದೆ. ಸುತ್ತಲಿನ ಜನರನ್ನು ಸುರಕ್ಷಿತವಾಗಿರಿಸಲು ಬೇರೆ ಸ್ಥಳಗೆ ಕರೆದೊಯ್ಯಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
⚠️Un #socavon de al menos 60 metros de diámetro por 15 metros de profundidad, dentro del cual hay agua, se abrió en la comunidad de Zacatepec, municipio de Juan C. Bonilla #Puebla. ?
En vecino del lugar captó el momento en que el #Socavón se expande en terrenos de cultivo. pic.twitter.com/5hFON9Rcm0— Ana Laura Vásquez (@analita_vasquez) June 1, 2021
ಸಿಂಕ್ಹೋಲ್ ಕಾಣಿಸಿಕೊಳ್ಳುವ ಮೊದಲು ಜೋರಾದ ಗುಡುಗಿನ ಶಬ್ದ ಕೇಳಿದೆ. ಸುಮಾರು 6 ಗಂಟೆಯ ವೇಳೆಗೆ ಗುಡುಗಿನ ಶಬ್ದ ಕೇಳಿದ್ದೇವೆ. ಏನಾಯಿತು ಎಂದು ಹೊರಗಡೆ ಬಂದಾಕ್ಷಣ ಸಿಂಕ್ಹೋಲ್ ಕಾಣಿಸಿಕೊಂಡಿದೆ. ಸಮಯವಾಗುತ್ತಿದ್ದಂತೆ ವಿಸ್ತರಿಸುತ್ತಾ ದೊಡ್ಡದಾಗಿದೆ. ಇಂದರಿಂದ ಒಂದು ಕ್ಷಣ ಭಯಭೀತರಾದೆವು ಎಂದು ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಕಾಲಡಿ ಸಿಕ್ಕಿ ನರಳಾಡುತ್ತಿದ್ದ ಜಿರಳೆಯನ್ನು ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿ! ಮುಂದೇನಾಯ್ತು?
Viral Video: ಪಾನಿಪುರಿ ಮಹಿಮೆಯೆ ಹೀಗೆ.. ನೋಡಿದಾಕ್ಷಣ ಹಸುಗಳ ಬಾಯಲ್ಲೂ ನೀರು! ವಿಡಿಯೋ ನೋಡಿ