Viral Video: ಅಕ್ಕಿಯಲ್ಲಿ ಅರಳಿದ ಸೀತಾ ರಾಮ

ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಗೊಂಡಿದೆ. ರಾಮ ಭಕ್ತರ ಹೃದಯದಲ್ಲಿ ತಿಂಗಳುಗಳ ಹಿಂದೆಯೇ ಸಂಭ್ರಮ ಮನೆ ಮಾಡಿತ್ತು. ಇದಕ್ಕೆ ಉದಾಹರಣೆಯೆಂಬಂತೆ ಹಲವಾರು ರೋಮಾಂಚನಕಾರಿ ವಿಡಿಯೋಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆಲವೊಬ್ಬ ಭಕ್ತರು ಅಯೋಧ್ಯೆಗೆ ಪಾದಯಾತ್ರೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ತೋರಿಸಿದರೆ, ಇನ್ನೂ ಕೆಲವೊಬ್ಬ ಕಲಾವಿದರು ರಾಮ ಮಂದಿರ ಮತ್ತು ಶ್ರೀರಾಮನ ಮೂರ್ತಿಯನ್ನು ತಮ್ಮ ಕೈಯಾರೆ ರಚಿಸುವ ಮೂಲಕ ಭಕ್ತಿಯ ಪ್ರದರ್ಶನ ಮಾಡಿದ್ದಾರೆ.  ಅದೇ ರೀತಿ ಕಲಾವಿದರೊಬ್ಬರು ಅಕ್ಕಿಯನ್ನು ಬಳಸಿ ಸೀತಾ ರಾಮರ ಮೂರ್ತಿಯನ್ನು ತಯಾರಿಸಿದ್ದಾರೆ. 

Viral Video: ಅಕ್ಕಿಯಲ್ಲಿ ಅರಳಿದ  ಸೀತಾ ರಾಮ
Edited By:

Updated on: Jan 22, 2024 | 2:14 PM

ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೊಂಡಿದೆ. ಈಗಾಗಲೇ ರಾಮ ನಾಮ ಸ್ಮರಣೆಯು ಎಲ್ಲೆಡೆ ಮೊಳಗಿದ್ದು, ದೇಶದಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಪ್ರತಿಯೊಂದು ಊರುಗಳಲ್ಲೂ ಭಕ್ತರು ರಾಮನನ್ನು ವಿಶೇಷವಾಗಿ ಸ್ಮರಿಸುತ್ತಿದ್ದಾರೆ. ಅದಲ್ಲೂ ಕಲಾವಿದರಂತೂ ತಮ್ಮ ಕಲೆಯ ಮೂಲಕವೇ ರಾಮನಿಗೊಂದು ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಹೌದು ಅದೆಷ್ಟೋ ಕಲಾವಿದರು ತಮ್ಮ ಕೈಯಾರೆ ರಾಮ ಮಂದಿರದ ಮೂರ್ತಿ ಹಾಗೂ ಶ್ರೀರಾಮ ಮೂರ್ತಿಯನ್ನು ತಯಾರಿಸಿ ಸುದ್ದಿಯಲ್ಲಿದ್ದಾರೆ. ಅದೇ ರೀತಿ  ಕಲಾವಿದರೊಬ್ಬರು  ಅಕ್ಕಿಯನ್ನು ಬಳಸಿ  ಸೀತಾ ರಾಮರ ಸುಂದರ ಮೂರ್ತಿಯನ್ನು ತಯಾರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ನಕುಲ್ ಕದಮ್  (@nakulkkadam)  ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ನಕುಲ್ ಅವರು ಅಕ್ಕಿಯನ್ನು ಬಳಸಿ ಸೀತಾ  ರಾಮ ಮೂರ್ತಿಯನ್ನು ತಯಾರಿಸುವ ಸುಂದರ ದೃಶ್ಯವನ್ನು ಕಾಣಬಹುದು.


ವೈರಲ್ ವಿಡಿಯೋದಲ್ಲಿ ನಕುಲ್ ಅವರು ಒಂದೊಂದೇ ಅಕ್ಕಿಯನ್ನು ತೆಗೆದುಕೊಂಡು ಅಕ್ಕಿಯ ಮೇಲೆ ಅಕ್ಕಿಯನ್ನು ಗಮ್ ನಿಂದ ಅಂಟಿಸುತ್ತಾ, ಕೇವಲ 24 ಗಂಟೆಗಳಲ್ಲಿ ಸೀತಾ ರಾಮರ ಸುಂದರ ಮೂರ್ತಿಯನ್ನು ಅಕ್ಕಿಯನ್ನು ಬಳಸಿ ತಯಾರಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ಇದು ಎತ್ತಿನ ಗಾಡಿ ಅಲ್ಲ….. ಮತ್ತೇನು?; ವಿಡಿಯೋ ವೈರಲ್​

ಜನವರಿ 12ರಂದು ಹಂಚಿಕೊಳ್ಳಲಾದ ಈ ವಿಡಿಯೋ  ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 40 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ನೆಟ್ಟಿಗರು ಕಮೆಂಟ್ಸ್ ಮೂಲಕ ಕಲಾವಿದನಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಒಬ್ಬ ಬಳಕೆದಾರರು ʼಬಹಳ ಅದ್ಭುತವಾಗಿದೆ. ನಿಮ್ಮ ಪರಿಶ್ರಮಕ್ಕೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದ್ಭುತ ಕಲಾಕೃತಿʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಸೀತಾ ರಾಮರ ಮೂರ್ತಿ ಎಷ್ಟು ಸುಂದರವಾಗಿದೆ ಅಲ್ಲವೇʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಕ್ಕಿಯಲ್ಲಿ ಸೀತಾ ರಾಮರ ಮೂರ್ತಿಯನ್ನು ರಚಿಸಿದ ಕಲಾವಿದನಿಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ