Trending: ದ್ವಿಚಕ್ರ ವಾಹನದಲ್ಲಿ ಆರು ಮಂದಿಯ ಸಂಚಾರ: ರೂಲ್ಸ್ ಬ್ರೇಕರ್ಸ್​ ಯುವಕರ ದುಸ್ಸಾಹಸದ ವಿಡಿಯೋ ವೈರಲ್

| Updated By: Rakesh Nayak Manchi

Updated on: May 24, 2022 | 12:28 PM

ಸಂಚಾರ ನಿಯಮ ಉಲ್ಲಂಘಿಸಿ ಆರು ಮಂದಿ ಒಂದೇ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ವಿಡಿಯೋ ಆಧರಿಸಿ ಮುಂಬೈ ಟ್ರಾಫಿಕ್ ಪೊಲೀಸ್, ಪರಿಶೀಲಿಸುವಂತೆ ಡಿಎನ್​ ನಗರ ಸಂಚಾರ ವಿಭಾಗಕ್ಕೆ ನಿರ್ದೇಶಿಸಿದೆ.

Trending: ದ್ವಿಚಕ್ರ ವಾಹನದಲ್ಲಿ ಆರು ಮಂದಿಯ ಸಂಚಾರ: ರೂಲ್ಸ್ ಬ್ರೇಕರ್ಸ್​ ಯುವಕರ ದುಸ್ಸಾಹಸದ ವಿಡಿಯೋ ವೈರಲ್
ಆರು ಮಂದಿ ಒಂದೇ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿರುವುದು
Follow us on

ಭಾರತದಲ್ಲಿ ಸಂಚಾಯ ನಿಯಮಗಳಂತೆ ದ್ವಿಚಕ್ರ (Two wheelers) ವಾಹನಗಳಲ್ಲಿ ಇಬ್ಬರಿಗೆ ಸಂಚರಿಸುವ ಅವಕಾಶ ಇದೆ. ಅದಾಗಿಯೂ ಮೂರು ಮೂರಕ್ಕಿಂತ ಹೆಚ್ಚು ಮಂದಿಯನ್ನು ಕೂರಿಸುಕೊಂಡು ಹೋದರೆ, ಕಾನೂನು ಪ್ರಕಾರ ಶಿಕ್ಷಾರ್ಹ ಹಾಗೂ ದಂಡಕ್ಕೆ ಅರ್ಹವಾದ ಅಪರಾಧವಾಗಿದೆ. ಅದರಂತೆ ಮುಂಬೈ (Mumbai)ನ ರಸ್ತೆಯೊಂದರಲ್ಲಿ ಒಂದು ಹೋಂಡಾ ಆಕ್ಟಿವಾದಲ್ಲಿ ಆರು ಮಂದಿ ಸಂಚರಿಸುತ್ತಿರುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ. ಇದರ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ.

ಇದನ್ನೂ ಓದಿ: Viral Video: ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ಮನುಷ್ಯರಂತೆ ಕುರ್ಚಿ ಮೇಲೆ ಕುಳಿತ ತುಂಟ ನಾಯಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ವೈರಲ್ ವಿಡಿಯೋದಲ್ಲಿರುವಂತೆ, ದ್ವಿಚಕ್ರ ವಾಹನದಲ್ಲಿ ಐದು ಮಂದಿ ಸೀಟಿನಲ್ಲಿ ಕುಳಿಕೊಂಡರೆ ಓರ್ವ ವ್ಯಕ್ತಿ ಹಿಂಬದಿ ಸವಾರನ ಭುಜದ ಮೇಲೆ ಕುಳಿತುಕೊಂಡು ಹೋಗುವುದನ್ನು ಕಾಣಬಹುದು. ಯಾವ ಒಬ್ಬನ ಬಳಿಯೂ ಹೆಲ್ಮೆಟ್ ಕಾಣಿಸುತ್ತಿಲ್ಲ, ಲೈಸನ್ಸ್ ಇದೆಯಾ ಇಲ್ವಾ ಅವರಿಗೇ ಗೊತ್ತು. ಅಂಧೇರಿ ಪಶ್ಚಿಮದ ಸ್ಟಾರ್ ಬಜಾರ್ ಬಳಿಯ ಟ್ರಾಫಿಕ್ ನಡುವೆ ಕಾರಿನೊಳಗಿನಿಂದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮರಾ ಮೂಲಕ ಯುವಕರ ದುಸ್ಸಾಹಸದ ಸಂಚಾರವನ್ನು ಸೆರೆಹಿಡಿದಿದ್ದಾರೆ.

ಇದನ್ನೂ ಓದಿ: ತಮಿಳು ಅಕ್ಷರಗಳಲ್ಲಿ ಮೂಡಿದ ಆನಂದ ಮಹೀಂದ್ರಾ ಚಿತ್ರ, ವಿಡಿಯೋ ವೈರಲ್

ಈ ವಿಡಿಯೋವನ್ನು ರಮಣದೀಪ್ ಸಿಂಗ್ ಹೋರಾ ಎಂಬವರು ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡು ಮುಂಬೈ ಪೊಲೀಸ್ ಆಯುಕ್ತರ ಟ್ವಿಟರ್ ಹ್ಯಾಂಡಲ್ ಮತ್ತು ಮುಂಬೈ ಟ್ರಾಫಿಕ್ ಪೊಲೀಸರ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ.

ರೋಡ್ಸ್ ಆಫ್ ಮುಂಬೈ ಎಂಬ ಹೆಸರಿನ ಖಾತೆಯಿಂದ ವೈರಲ್ ವೀಡಿಯೊವನ್ನು ಮರುಹಂಚಿಕೆ ಮಾಡಲಾಗಿದ್ದು, ನಿಖರವಾದ ಸ್ಥಳವು ಅಂಧೇರಿ ವೆಸ್ಟ್‌ನಲ್ಲಿರುವ ಲಿಂಕ್ ರೋಡ್ ಎಂದು ಮುಂಬೈ ಟ್ರಾಫಿಕ್ ಪೊಲೀಸರಿಗೆ ತಿಳಿಸಿದೆ. ಟ್ವೀಟ್​ಗೆ ಪ್ರತಿಕ್ರಿಯಿಸಿದ ಮುಂಬೈ ಟ್ರಾಫಿಕ್ ಪೊಲೀಸ್, ಇದನ್ನು ಪರಿಶೀಲಿಸುವಂತೆ ಡಿಎನ್ ನಗರ ಸಂಚಾರ ವಿಭಾಗಕ್ಕೆ ನಿರ್ದೇಶಿಸಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸಂಚಾರ ನಡೆಸಿದ ಆರು ಮಂದಿಯನ್ನು ಪತ್ತೆಹಚ್ಚಲಾಗಿದೆಯಾ? ಇಲ್ವಾ? ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಅಪರೂಪದ ಬಿಳಿ ಕಾಂಗರೂ; ಇಲ್ಲಿದೆ ವೈರಲ್ ಫೋಟೋ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Tue, 24 May 22