ಕಳ್ಳ ನಾಗರಾಜ; ಯಾರಿಗಾಗಿ ಚಪ್ಪಲಿ ಕದ್ದುಕೊಂಡು ಹೋಗುತ್ತಿದ್ದೀಯೋ?

King Cobra : ನೋಡನೋಡುತ್ತಿದ್ದಂತೆಯೇ ಈ ನಾಗರಹಾವು ಚಪ್ಪಲಿಯನ್ನು ಕಚ್ಚಿಕೊಂಡು ಸರಸರನೆ ಹರಿದು ಹೋಗಿಬಿಟ್ಟಿದೆ. ಎಲ್ಲಾ ಬಿಟ್ಟು ಚಪ್ಪಲಿಯನ್ನೇಕೆ ಕದ್ದೊಯ್ಯುತ್ತಿದೆ ಎನ್ನುತ್ತಿರುವ ನೆಟ್ಟಿಗರು ತಮಗೆ ತಿಳಿದಂತೆ ಕಾರಣ ಕೊಡುತ್ತಿದ್ಧಾರೆ.

ಕಳ್ಳ ನಾಗರಾಜ; ಯಾರಿಗಾಗಿ ಚಪ್ಪಲಿ ಕದ್ದುಕೊಂಡು ಹೋಗುತ್ತಿದ್ದೀಯೋ?
ಯಾರಿಗೋಸ್ಕರ ಚಪ್ಪಲಿ ಕದ್ದುಕೊಂಡು ಹೋಗ್ತಿದೆಯೋ ನಾಗರಹಾವು?
Edited By:

Updated on: Nov 25, 2022 | 12:43 PM

Viral Video : ಮೈಸೂರಿನಲ್ಲಿ ಬೂಟಿನೊಳಗೆ ಅವಿತು ಕುಳಿತಿದ್ದ ನಾಗರಹಾವಿನ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದೀರಿ. ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರಹಾವಿಗೆ ಮುತ್ತು ಕೊಡಲು ಹೋಗಿ ಕಚ್ಚಿಸಿಕೊಂಡಿದ್ದನ್ನೂ ನೋಡಿದ್ದೀರಿ. ಉತ್ತರ ಪ್ರದೇಶ ಪೊಲೀಸ್ ಠಾಣೆಗೆ ಬಂದ ನಾಗರಾಜ ಪೊಲೀಸರನ್ನೇ ಗಡಗಡ ನಡುಗಿಸಿದ ವಿಡಿಯೋ ಕೂಡ ನೋಡಿದ್ದೀರಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ನಾಗರಹಾವು ಅದ್ಯಾರಿಗೆ ಚಪ್ಪಲಿ ಕದ್ದುಕೊಂಡು ಹೋಗುತ್ತಿದೆಯೋ ಗೊತ್ತಿಲ್ಲ. ನಿಮಗೇನಾದರೂ ಗೊತ್ತಾಗುತ್ತದೆಯಾ ನೋಡಿ.

ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಟ್ವೀಟ್ ಮಾಡಿದ್ಧಾರೆ. ಹೀಗೆ ನಾಗರಹಾವು ಚಪ್ಪಲಿಯನ್ನು ಬಾಯಲ್ಲಿ ಹಿಡಿದುಕೊಂಡು ನಿರಾಯಾಸವಾಗಿ ಹರಿದು ಹೋಗುವುದನ್ನು ನೋಡಿದ ಹೆಣ್ಣುಮಕ್ಕಳು ಕಿರುಚಾಡುತ್ತಿದ್ದಾರೆ. ಇದ್ಯಾವುದನ್ನೂ ಲೆಕ್ಕಿಸದೇ ಕದಿಯುವುದಷ್ಟೇ ನನ್ನ ಗುರಿ ಎಂಬಂತೆ ಅಷ್ಟು ದೊಡ್ಡ ಚಪ್ಪಲಿಯನ್ನು ಬಾಯಲ್ಲಿ ಕಚ್ಚಿಕೊಂಡು ಸರಸರನೆ ಹರಿದು ಹೋಗಿದೆ ಈನಾಗರಹಾವು.

ನೆಟ್ಟಿಗರು ಈ ದೃಶ್ಯವನ್ನು ನೋಡಿ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ಹಾವು ಚಪ್ಪಲಿಯನ್ನು ಏನು ಮಾಡುತ್ತದೆ? ಅವನಿಗಂತೂ ಕಾಲಿಲ್ಲ ಎಂದಿದ್ದಾರೆ ಒಬ್ಬರು. ರಬ್ಬರ್​ನ ರುಚಿ, ವಾಸನೆ ಹಾವುಗಳಿಗೆ ಇಷ್ಟ, ಅದಕ್ಕೆ ಇದು ಹೀಗೆ ಮಾಡಿದೆ ಎಂದಿದ್ದಾರೆ ಇನ್ನೊಬ್ಬರು. ತನ್ನ ಮರಿಗಳಿಗಾಗಿ ಬೆಚ್ಚಗಿನ ಗೂಡು ಕಟ್ಟಲು ನಾಗರಹಾವು ಹೀಗೆ ಚಪ್ಪಲಿ ಕದ್ದೊಯ್ಯುತ್ತಿರಬಹುದೇ? ಎಂದಿದ್ದಾರೆ ಮತ್ತೊಬ್ಬರು. ಅದು ಬೇಕೆಂದೇ ಚಪ್ಪಲಿ ತೆಗೆದುಕೊಂಡು ಹೋಗುತ್ತಿಲ್ಲ, ಬಹುಶಃ ಅದರ ಹಲ್ಲಿನಲ್ಲಿ ಚಪ್ಪಲಿ ಸಿಕ್ಕಿಹಾಕಿಕೊಂಡಿರಬಹುದು. ಭಯದಿಂದ ತಪ್ಪಿಸಿಕೊಳ್ಳಲು ಹಾಗೇ ಚಲಿಸುತ್ತಿರಬಹುದು ಎಂದಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:38 pm, Fri, 25 November 22