ತೂಗಿರೇ ರಂಗನ್ನ ತೂಗೀರೇ ಕೃಷ್ಣನ್ನ ನೋಡೀರೇ ಈ ಬೆಕ್ಕನ್ನ; ನಿಜ ತೂಗತಿದ್ದೀನಿ, ನನ್ನ ನಂಬಿ ಪ್ಲೀಸ್​

Cat : ಕಣ್​ ಯಾಕಿಷ್ಟು ದೊಡ್ಡದು ಅಂತೀದೀರಾ? ಕಂಗಾಲಾಗಿದೀನಿ. ಹಗಲೂ ರಾತ್ರಿ ಮಗುವನ್ನು ನೋಡ್ಕೊಂಡು. ಎಂಥಾ ನಿಷ್ಕರುಣಿಗಳು ನೀವು, ಒಮ್ಮೆಯಾದರೂ ನನ್ನ ಮುದ್ದು ಮಾಡಬೇಕು ಅನ್ನಿಸ್ತಿಲ್ವಾ?

ತೂಗಿರೇ ರಂಗನ್ನ ತೂಗೀರೇ ಕೃಷ್ಣನ್ನ ನೋಡೀರೇ ಈ ಬೆಕ್ಕನ್ನ; ನಿಜ ತೂಗತಿದ್ದೀನಿ, ನನ್ನ ನಂಬಿ ಪ್ಲೀಸ್​
ನಿಜವಾಗಲೂ ನಾನು ತೂಗ್ತಿದೀನಿ ನನ್ನ ನಂಬಿ!
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 25, 2022 | 2:44 PM

Viral Video : ನಾನು ಸೊಕ್ಕಿನ ಮುದ್ದು ಇರಬಹುದು, ಕಣ್ಣು ತೆಗೆದೇ ಹಾಲು ಕುಡಿಯೋ ಭಂಡಜೀವ ಇರಬಹುದು, ದಿನಕ್ಕೆ ಇಪ್ಪತ್ತು ತಾಸು ಗಡದ್ದಾಗಿ ನಿದ್ದೆ ಹೊಡಿಯೋವನೇ ಇರಬಹುದು. ಆದರೆ ನನಗೂ ಸ್ವಲ್ಪ ಜವಾಬ್ದಾರಿ ಅನ್ನೋದು ಇದೆ. ನಮ್ಮ ಅಮ್ಮ ಸ್ನಾನ ಮಾಡೋದಕ್ಕೆ ಹೋಗಿದಾಳೆ. ಮಗೂನ್ನ ಸ್ವಲ್ಪ ತೂಗು ಅಂದಿದಾಳೆ. ಹಾಗಾಗಿ ನಾನು ಬಿಟ್ಟೂಬಿಡದೇ ತೂಗ್ತಾ ಇದೀನಿ. ಆದರೆ ನೀವೆಲ್ಲ ತಲೆಗೊಂದೊಂದು ಮಾತಾಡ್ತಿದೀರಿ. ಪ್ರೀತಿ ಇದ್ದಲ್ಲಿ ಜವಾಬ್ದಾರಿ ಇರತ್ತೆ ಅದು ಗೊತ್ತಾ ನಿಮಗೆ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಸುಮ್ನಿರಪ್ಪಾ ನಿನ್ನ ಉಗುರು ಆ ಬೆಲ್ಟ್​ನಲ್ಲಿ ಸಿಕ್ಕಾಕ್ಕೊಂಡಿದೆ ಎಂದು ಕೆಲವರು ನಗುತ್ತಿದ್ದಾರೆ. ಓಹ್ ಬೇಬಿ ಸಿಟರ್ ಕ್ಯಾಟ್​ ಎಂದು ಕೆಲವರು ಹೊಗಳ್ತಿದಾರೆ. ಬಾಣಂತನ ಮಾಡ್ತಿದೆ ಈ ಬೆಕ್ಕು ಎಂದಿದ್ದಾರೆ ಮತ್ತಷ್ಟು ಜನ. ನಮ್ಮ ಮನೆಯ ಮಗುವಿಗೆ ನೀನೇ ಬೇಬಿ ಸಿಟರ್, ಅಲ್ಲಿಂದ ಬೇಗ ನಮ್ಮನೆಗೆ ಬಂದುಬಿಡು ಎಂದಿದ್ದಾರೆ ಯಾರೋ ಒಬ್ಬರು.

ಯಾರ್ಯಾರೂ ಏನೇನು ಅಂತೀರೋ ಅನ್ರಿ. ನಾನಂತೂ ನನ್ನ ಕೆಲಸ ಮಾಡ್ತೀನಿ. ಅಲ್ಲಾ ನಿಮಗೆ ಸ್ವಲ್ಪನೂ ಕರುಣೆನೇ ಇಲ್ಲವಾ? ನನಗೂ ಹೀಗೆ ಹಗಲು ರಾತ್ರಿ ಮಗುವನ್ನು ನೋಡಿಕೊಂಡು ಸುಸ್ತು, ಬೇಜಾರು ಆಗಿರತ್ತೆ. ಸ್ವಲ್ಪ ಆಚೆ ಕರೆದುಕೊಂಡು ಹೋಗಬೇಕು ಅನ್ಸಲ್ವಾ ನಿಮಗೆ? ಎರಡೂವರೆ ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದೀರಿ ಮತ್ತೆ.

ಮತ್ತೆ ಯಾಕೆ ಅಷ್ಟು ದೊಡ್ಡದೊಡ್ಡ ಕಣ್ಣು ಬಿಟ್ಟಿದೀಯಾ ಅಂತ ಬೇರೆ ಕೇಳ್ತಿದೀರಿ. ಕಂಗಾಲಾಗಿದೀನಿ! ಅರ್ಥ ಆಯ್ತಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್