Video: ನಾಲ್ಕು ವರ್ಷಗಳ ಬಳಿಕ ಕೆನಡಾದಿಂದ ಮರಳಿದ ಮಗ, ಸರ್ಪ್ರೈಸ್ ವಿಸಿಟ್‌ಗೆ ತಾಯಿ ಭಾವುಕ

ವಿದೇಶದಲ್ಲಿರುವ ಮಕ್ಕಳು ಮನೆಗೆ ಬರ್ತಾರೆ ಅಂದ್ರೆ ಹೆತ್ತವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಆದರೆ ನಾಲ್ಕು ವರ್ಷಗಳ ಬಳಿಕ ಕೆನಡಾದಿಂದ ಯಾವುದೇ ಸುಳಿವು ನೀಡದೇ ಬಂದ ಮಗನು ಸರ್ಪ್ರೈಸ್ ನೀಡಿದ್ದಾನೆ. ಮಗನನ್ನು ಕಂಡ ತಾಯಿ ಭಾವುಕಳಾಗಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ನಾಲ್ಕು ವರ್ಷಗಳ ಬಳಿಕ ಕೆನಡಾದಿಂದ ಮರಳಿದ ಮಗ, ಸರ್ಪ್ರೈಸ್ ವಿಸಿಟ್‌ಗೆ ತಾಯಿ ಭಾವುಕ
ಸಾಂದರ್ಭಿಕ ಚಿತ್ರ
Image Credit source: stock.adobe.com

Updated on: Nov 08, 2026 | 1:59 PM

ಯುವಕ ಯುವತಿಯರು ಜೀವನ ಕಟ್ಟಿಕೊಳ್ಳಲು ದೂರದ ಊರು, ದೇಶಕ್ಕೆ ತೆರಳುವುದು ಸಾಮಾನ್ಯ. ಮಕ್ಕಳನ್ನು ದೂರದ ಊರಿಗೆ ಕಳುಹಿಸಿಕೊಡುವಾಗ ಹೆತ್ತವರ ಮನಸ್ಸು ಭಾರವಾಗುತ್ತದೆ. ಒಂದಲ್ಲ ಎರಡಲ್ಲ ನಾಲ್ಕು ವರ್ಷಗಳ ಬಳಿಕ ಕೆನಡಾದಿಂದ (Canada) ಮಗನು ಮನೆಗೆ ಮರಳಿದ್ದಾನೆ. ಮಗನ ಸರ್ಪ್ರೈಸ್ ವಿಸಿಟ್ ಗೆ ಹೆತ್ತವಳು ಕಣ್ಣೀರಿಟ್ಟಿದ್ದಾಳೆ. ತಾಯಿ ಮಗನ ಬಾಂಧವ್ಯ ಸಾರುವ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣು ಒದ್ದೆಯಾಗಿದೆ.

ಮಗನ ಸರ್ಪ್ರೈಸ್ ವಿಸಿಟ್‌ಗೆ ತಾಯಿ ಭಾವುಕ

ಪೊಲೀಸ್‌ನಮಾ (policenamaa) ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ವೃದ್ಧ ಮಹಿಳೆ ಬೆಡ್ ಮೇಲೆ ಮಲಗಿದ್ದಾಳೆ. ಮೆಲ್ಲನೆ ಬಂದ ಮಗನು ತನ್ನ ತಾಯಿ ಪಕ್ಕ ಕುಳಿತು ಆಕೆಯನ್ನು ಎಬ್ಬಿಸಿದ್ದಾನೆ. ವಿದೇಶದಿಂದ ಸರ್ಪ್ರೈಸ್ ವಿಸಿಟ್ ಕೊಟ್ಟ ಮಗನನ್ನು ಕಂಡು ಹೆತ್ತವಳ ಕಣ್ಣು ಒದ್ದೆಯಾಗಿದೆ. ತಾಯಿ ಮುದ್ದಿನ ಮಗನನ್ನು ತಬ್ಬಿಕೊಂಡು ಮುತ್ತನ್ನಿಟ್ಟು ಭಾವುಕಳಾಗಿರುವುದನ್ನು ಕಾಣಬಹುದು.

Loading...

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕೆನಡಾದಿಂದ ತಾಯ್ನಾಡಿಗೆ ಬಂದ ಮಗಳು, ಸರ್ಪ್ರೈಸ್ ವಿಸಿಟ್‌ಗೆ ಹೆತ್ತವರು ಭಾವುಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಪ್ರೀತಿ ಬೆಲೆ ಕಟ್ಟಲು ಆಗಲ್ಲ ಎಂದಿದ್ದಾರೆ. ಇನ್ನೊಬ್ಬರು, ಕಣ್ಣು ತುಂಬಿ ಬಂತು ಎಂದು ಹೇಳಿದ್ದಾರೆ. ಮತ್ತೊಬ್ಬರು, ತಾಯಿ ಹೃದಯಕ್ಕೆ ಎಷ್ಟು ಖುಷಿಯಾಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Loading...
Unable to load recommendations.
Follow Us