Video: ಕೆನಡಾದಿಂದ ತಾಯ್ನಾಡಿಗೆ ಬಂದ ಮಗಳು, ಸರ್ಪ್ರೈಸ್ ವಿಸಿಟ್‌ಗೆ ಹೆತ್ತವರು ಭಾವುಕ
ಮಕ್ಕಳು ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ದೂರದ ಊರು ಅಥವಾ ವಿದೇಶಕ್ಕೆ ತೆರಳುತ್ತಾರೆ. ಹೀಗೆ ತೆರಳಿದ ಮಕ್ಕಳು ಮನೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟರೆ ಹೇಗಿರುತ್ತದೆ. ಇದೀಗ ಅಂತಹದ್ದೇ ಭಾವುಕ ವಿಡಿಯೋ ವೈರಲ್ ಆಗಿದೆ. ಕೆನಾಡದಿಂದ ಸರ್ಪ್ರೈಸ್ ವಿಸಿಟ್ ಕೊಟ್ಟ ಮಗಳನ್ನು ಕಂಡು ಮನೆ ಮಂದಿ ಭಾವುಕರಾಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಹೊರ ರಾಜ್ಯ, ಹೊರ ದೇಶಕ್ಕೆ ಓದಲು, ಉದ್ಯೋಗಕ್ಕಾಗಿ ಹೋದ ಮಕ್ಕಳು ಏಕಾಏಕಿ ಸರ್ಪ್ರೈಸ್ ವಿಸಿಟ್ ನೀಡಿದ್ರೆ ಆ ಕ್ಷಣ ಹೇಗಿರುತ್ತೆಂದು ಅನುಭವಿಸಿದವರಿಗೆ ಮಾತ್ರ ಗೊತ್ತು. ಯುವತಿಯೊಬ್ಬಳು ಮನೆ ಮಂದಿಗೆ ತಿಳಿಸಿದೇನೇ ಕೆನಡಾದಿಂದ (Canada) ಸರ್ಪ್ರೈಸ್ ವಿಸಿಟ್ ನೀಡಿದ್ದಾಳೆ. ಮಗಳನ್ನು ಕಂಡೊಡನೆ ಹೆತ್ತವರು ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ವಿದೇಶದಿಂದ ಬಂದ ಮಗಳನ್ನು ಕಂಡು ಹೆತ್ತವರು ಭಾವುಕ
ಹೋಮ್ ಕಮಿಂಗ್ (Home coming) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವತಿಯೊಬ್ಬಳು ಕೆನಡಾದಿಂದ ಸರ್ಪ್ರೈಸ್ ವಿಸಿಟ್ ನೀಡಿದ್ದಾಳೆ. ಮಗಳ ಆಗಮನಕ್ಕೆ ಹೆತ್ತವರು ಭಾವುಕರಾಗಿದ್ದಾರೆ. ಯುವತಿಯನ್ನು ಕಂಡೊಡನೆ ಮನೆ ಮಂದಿ ಶಾಕಿಂಗ್ ರಿಯಾಕ್ಷನ್ ನೀಡಿರುವುದನ್ನು ಕಾಣಬಹುದು. ಅದಲ್ಲದೇ, ಮನೆ ಮಂದಿ ಸೇರಿದಂತೆ ಆತ್ಮೀಯರು ಈ ಯುವತಿಯನ್ನು ತಬ್ಬಿಕೊಂಡು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ವಿದೇಶದಲ್ಲಿರೋಗಿಂತ ಊರಲ್ಲಿ ಇರೋರೇ ಲಕ್ಕಿ; ಅಸಲಿ ಕಾರಣ ಬಿಚ್ಚಿಟ್ಟ ಯುವತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವಿಡಿಯೋವನ್ನು ಎಷ್ಟು ಬಾರಿ ನೋಡಿದೆ ಎಂದು ನನಗೆ ತಿಳಿಯುತ್ತಿಲ್ಲ ಎಂದಿದ್ದಾರೆ. ಇನ್ನೊಬ್ಬರು, ತನ್ನ ಸುತ್ತ ಇಷ್ಟು ಒಳ್ಳೆಯ ಮನಸ್ಸಿನ ವ್ಯಕ್ತಿಗಳನ್ನು ಹೊಂದಿರುವುದೇ ಅದೃಷ್ಟ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ನೀವು ನಿಜಕ್ಕೂ ಅದೃಷ್ಟವಂತರು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




