Video: ವಿದೇಶದಲ್ಲಿರೋಗಿಂತ ಊರಲ್ಲಿ ಇರೋರೇ ಲಕ್ಕಿ; ಅಸಲಿ ಕಾರಣ ಬಿಚ್ಚಿಟ್ಟ ಯುವತಿ
ವಿದೇಶದಲ್ಲಿ ಜಾಬ್ ಕಷ್ಟವೇನಲ್ಲ. ಕೈ ತುಂಬಾ ಸಂಬಳ ಸಿಗುತ್ತೆ ಎಂದು ಭಾವಿಸುವವರೇ ಹೆಚ್ಚು. ಆದರೆ ಇದೀಗ ಯುವತಿ ವಿದೇಶಿ ಜೀವನ ಅಷ್ಟು ಸುಲಭವಲ್ಲ, ನಮಗೆ ವರ್ಷಕ್ಕೊಮ್ಮೆ ರಜೆ ಸಿಗೋದು ಊರಿಗೆ ಬರುವುದು. ಆದರೆ ನಿಮ್ಗೆ ಪ್ರತಿ ಹಬ್ಬಕ್ಕೂ ರಜೆ ಇರುತ್ತದೆ ಎಂದು ಅಸಲಿ ವಿಚಾರ ಹೇಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಚರ್ಚೆ ಹುಟ್ಟುಹಾಕಿದೆ.

ವಿದೇಶದಲ್ಲಿ (foreign) ಕೆಲಸ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎಂದು ಅಂದುಕೊಳ್ಳುವವರೇ ಹೆಚ್ಚು. ಆದರೆ ಹೆತ್ತವರು, ಮನೆ ಬಿಟ್ಟು ವಿದೇಶಕ್ಕೆ ತೆರಳಿ ಅಲ್ಲಿ ದುಡಿಯುವವರ ತ್ಯಾಗಗಳು ಯಾರಿಗೂ ಅರ್ಥ ಆಗಲ್ಲ. ಇದೀಗ ವಿದೇಶದಲ್ಲಿ ನೆಲೆಸಿರುವ ಯುವತಿಗೂ ನಮ್ಗೆ ಕೆಲ್ಸ ಬಿಟ್ರೆ ಬೇರೆ ಪ್ರಪಂಚವಿಲ್ಲ. ಊರಿನಲ್ಲಿರುವ ನೀವೇ ಅದೃಷ್ಟವಂತರು. ಫ್ಯಾಮಿಲಿ, ಫ್ರೆಂಡ್ ನಿಂದ ದೂರ ಇರ್ತೇವೆ. ಹಬ್ಬ ಹರಿದಿನಗಳ ಸ್ಟೇಟಸ್ ನೋಡಿಯೇ ಖುಷಿ ಪಡ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯುವತಿ ಹಂಚಿಕೊಂಡ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಫಾರಿನ್‌ನಲ್ಲಿರೋಗಿಂತ ಊರಲ್ಲಿರುವ ನೀವೇ ಲಕ್ಕಿ
ದೀಕ್ಷಾ ದೇವಾಡಿಗ (Deediaries Kannada) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಊರಿನಲ್ಲಿ ಇರುವವರು ಕಿವಿ ನೆಟ್ಟಗೆ ಮಾಡಿಕೊಂಡು ಕೇಳಿ. ನೀವು ನಿಮ್ಮ ಊರಿನಲ್ಲಿದ್ದುಕೊಂಡು ಕೆಲ್ಸ ಮಾಡ್ತಾ ಇದ್ರೆ ನೀವೇ ನಿಜಕ್ಕೂ ಅದೃಷ್ಟವಂತರು. ನಿಮ್ಗೆ ದಸರಾ ಮುಗಿದು ದೀಪಾವಳಿ ಶುರುವಾಗ್ತದೆ. ದೀಪಾವಳಿ ಮುಗಿದು ಜಾತ್ರೆ ಶುರುವಾಗ್ತದೆ, ನೀವು ಲಕ್ಕಿ ಎಂದು ಯುವತಿ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಆಫೀಸ್, ವರ್ಕ್, ಮನೆ ಇಷ್ಟೇ ನಮ್ಮ ಲೈಫ್
ವಿದೇಶದಲ್ಲಿ ನೆಲೆಸಿರುವ ನಮ್ಮ ಲೈಫ್ ನಿಮ್ಮ ಹಾಗೇ ಇರಲ್ಲ. ನಾವು ವರ್ಷಕ್ಕೆ ಒಂದು ಸಲ ಊರಿಗೆ ಬರುವುದು, ಆದರೂ ನಮ್ಗೆ ನೆಮ್ಮದಿ ಇಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ ರಜೆ ಮುಗಿದಿರುತ್ತದೆ. ಮತ್ತೆ ಅದೇ ಆಫೀಸ್, ಅದೇ ವರ್ಕ್, ಅದೇ ಮನೆ. ವೀಕೆಂಡ್ ಬಂದ್ರೆ ಮನೆ ಕ್ಲೀನಿಂಗ್, ಬಟ್ಟೆ ತೊಳೆಯುವುದರಲ್ಲೇ ದಿನ ಕಳೆಯುತ್ತದೆ. ಕೆಲವರು ಅಂದುಕೊಳ್ಳಬಹುದು ಅಷ್ಟು ಕಷ್ಟದಲ್ಲಿ ಯಾಕೆ ಅಲ್ಲಿ ಇದ್ದೀರಾ. ಆದರೆ ಏನು ಮಾಡೋದು ಕಮಿಟ್ಮೆಂಟ್‌ಗಳೇ ನಮ್ಮನ್ನು ಇಲ್ಲಿರುವಾಗೇ ಮಾಡಿದೆ. ಆದರೆ ನಾವು ನಿಮ್ಮದು ಸ್ಟೇಟಸ್ ನೋಡಿ ಇವತ್ತು ಜಾತ್ರೆ, ದೀಪಾವಳಿ ಎಂದು ತಿಳಿಯುತ್ತದೆ. ನಾವೆಲ್ಲಾ ಎಷ್ಟು ತ್ಯಾಗ ಮಾಡ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿದ್ದ ಮಗಳಿಗೆ ಹೆತ್ತವರಿಂದ ಬಂತು ದೀಪಾವಳಿ ಗಿಫ್ಟ್, ಯುವತಿ ಫುಲ್ ಖುಷ್
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಇದು ನಿಜ ಎಂದಿದ್ದಾರೆ. ಇನ್ನೊಬ್ಬರು, ನಾವು ನೀವೇ ಅದೃಷ್ಟವಂತರು ಅಂದುಕೊಂಡ್ವಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಊರಿಗೆ ಬನ್ನಿ ಭತ್ತ ಹೊರೋಕೆ ಜನ ಇಲ್ಲ ಎಂದು ಕಾಲೆಳೆದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




