Viral Video : ಮಕ್ಕಳ ಜೀವನ ಚೆನ್ನಾಗಿರಬೇಕೆಂದು ಅದೆಷ್ಟೋ ಪೋಷಕರು ಹಗಲೂ ರಾತ್ರಿ ಶ್ರಮಿಸುತ್ತಾರೆ. ಅವರು ಪಟ್ಟ ಕಷ್ಟ ಕೆಲವೇ ಕೆಲವು ಮಕ್ಕಳಿಗೆ ಮಾತ್ರ ಅರ್ಥವಾಗುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ತನ್ನಪಾಡಿಗೆ ತಾನು ಅಡುಗೆಮನೆಯಲ್ಲಿ ಊಟಕ್ಕೆ ಬಡಿಸುತ್ತಿರುವಾಗ ತಾಯಿಗೆ ಮಗ ಬಂಗಾರದ ಚೈನು ಹಾಕಿ ಸರ್ಪ್ರೈಝ್ ಕೊಟ್ಟಿದ್ದಾನೆ. ಆಕೆಯ ಮುಖದ ಮೇಲಿನ ಅಚ್ಚರಿಯ ನಗುವನ್ನು ಗಮನಿಸಿ.
छोटा सा गिफ्ट मम्मी के लिए ?❤️???? pic.twitter.com/WPUc7fTvRj
ಇದನ್ನೂ ಓದಿ— ज़िन्दगी गुलज़ार है ! (@Gulzar_sahab) November 14, 2022
5,000ಕ್ಕೂ ಹೆಚ್ಚು ಜನರನ್ನು ಈ ಪೋಸ್ಟ್ ಟ್ವಿಟ್ ಮೂಲಕ ತಲುಪಿದೆ. ಹೀಗೊಂದು ಅಚ್ಚರಿಯ ಉಡುಗೊರೆ ಮಗನಿಂದ ದೊರೆಯಬಹುದೆಂಬ ಇರಾದೆ ಆಕೆಗೆ ಇರಲಿಲ್ಲವೆನ್ನಿಸುತ್ತದೆ ಆಕೆಯ ಮುಖದಲ್ಲಿ ಅರಳಿದ ನಗು ಮತ್ತು ಅಚ್ಚರಿ ನೋಡಿದಾಗ. ನೆಟ್ಟಿಗರು ಈ ಹೃದಯಸ್ಪರ್ಶಿ ವಿಡಿಯೋ ನೋಡಿ ಪ್ರತಿಕ್ರಿಯಿಸುತ್ತಿದ್ದಾರೆ.
ನಮ್ಮ ಖುಷಿಯನ್ನು ಪಡೆಯುವುದು ಸುಲಭ. ಆದರೆ ನಮಗೆ ಜೀವ ತೇಯ್ದವರ ಖುಷಿಯನ್ನು ಅವರ ಮುಖದಲ್ಲಿ ಮರಳಿಸುವುದು ಬಹಳೇ ಕಷ್ಟ. ಅಂಥ ಕಷ್ಟವನ್ನು ಕೆಲವೇ ಕೆಲವರು ತೆಗೆದುಕೊಳ್ಳಲು ಸಿದ್ಧರಿರುತ್ತಾರೆ.
ಏನನ್ನಿಸಿತು ಈ ವಿಡಿಯೋ ನೋಡಿ ನಿಮಗೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:41 pm, Tue, 15 November 22