ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಡಿಯೋಗಳು ವೈರಲ್ ಆಗಿ ಹಲವು ದಿನಗಳು ಕಳೆದರೂ ಅದರ ಬಗೆಗಿನ ಮಾತುಗಳು ಮುಗಿಯುವುದಿಲ್ಲ. ಕೆಲವು ದಿನಗಳ ಹಿಂದೆ ಕಡಲೆಕಾಯಿ ಮಾರಾಟಗಾರನೊಬ್ಬ ಕಚ್ಚಾ ಬಾದಾಮ್ (Kacha Badam) ಹಾಡನ್ನು ಹಾಡಿ ಕಡಲೆಕಾಯಿಯನ್ನು ಮಾರಾಟ ಮಾಡುತ್ತಿದ್ದನು. ಇದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನೆಟ್ಟಿಗರನನ್ನು ಸೆಳೆದಿದ್ದ ಕಚ್ಚಾ ಬಾದಾಮ್ ಹಾಡು ಹಲವರ ಬಾಯಲ್ಲೂ ಓಡಾಡುತ್ತಿತ್ತು. ಇದೀಗ ಭಾರತದಲ್ಲಿ ಆರಂಭವಾದ ಕಚ್ಚಾ ಬಾದಾಮ್ ಹಾಡು ದಕ್ಷಿಣ ಕೋರಿಯಾ (South Korea) ವರೆಗೂ ತಲುಪಿದೆ. ಹೌದು ದಕ್ಷಿಣ ಕೊರಿಯಾದ ಅಮ್ಮ ಮಗಳ ಜೋಡಿ ಇದೇ ಕಚ್ಚಾ ಬಾದಾಮ್ ಹಾಡಿಗೆ ಡ್ಯಾನ್ಸ್ (Dance) ಮಾಡಿದ್ದು, ಸಖತ್ ವೈರಲ್ ಆಗಿದೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಅಮ್ಮ ಮಗಳು ಡ್ಯಾನ್ಸ್ ಮಾಡಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೊ ಎಲ್ಲರ ಗಮನ ಸೆಳೆದಿದೆ.
ವಿಡಿಯೋದಲ್ಲಿ ಅಮ್ಮ ಮಗಳು ಅಕ್ಕಪಕ್ಕದಲ್ಲಿ ನಿಂತಿದ್ದು, ಇಬ್ಬರೂ ಒಂದೇ ರೀತಿಯ ಸ್ಟೆಪ್ ಹಾಕುವುದನ್ನು ಕಾಣಬಹುದು. ಅವರ ಪ್ರತೀ ಸ್ಟೆಪ್ಗೂ ಲೈಟ್ನ ಬಣ್ಣಗಳು ಬದಲಾಗುವುದನ್ನು ಕಾಣಬಹುದು. ವಿಡಿಯೋದಲ್ಲಿ ಕಚ್ಚಾ ಬಾದಾಮ್ ಹಾಡಿಗೆ ಅಮ್ಮ ಮಗಳ ಜೋಡಿ ಕಲರ್ಫುಲ್ ಆಗಿ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದು. ಅದೇ ವಿಡಿಯೋದಲ್ಲಿ ಅಕ್ಷರಗಳನ್ನೂ ಹಾಕಲಾಗಿದ್ದು ಅದರಿಂದ ದಕ್ಷಿಣ ಕೊರಿಯಾದವರು ಎಂದು ತಿಳಿಯುತ್ತದೆ. ಅಲ್ಲದೆ ಇನ್ಸ್ಟಾಗ್ರಾಮ್ನಲ್ಲಿ ಲುನಾ ಯೊಗಿನಿ ಆಫಿಷಯಲ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ದಕ್ಷಿಣ ಕೊರಿಯಾ ಎಂದು ಲೊಕೇಶನ್ ನೀಡಲಾಗಿದೆ. ವಿಡಿಯೋಕ್ಕೆ ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು ಎನ್ನುವ ಕ್ಯಾಪ್ಷನ್ ನೀಡಲಾಗಿದೆ.
ಸದ್ಯ ವೀಡಿಯೋ ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದ್ದು, ಭಾರತದ ಹಾಡಿಗೆ ವಿದೇಶಿಯರ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದಾರೆ. ಕಚ್ಚಾ ಬಾದಾಮ್ ಹಾಡನ್ನು ಪಶ್ವಿಮ ಬಂಗಾಳದ ಬ್ರಿಬುರ್ಮ್ ಎನ್ನುವ ಹಳ್ಳಿಯೊಂದರಲ್ಲಿ ಕಡಲೆಕಾಯಿ ಮಾರಾಟ ಮಾಡುವ ವ್ಯಕ್ತಿಯೊಬ್ಬ ಹೇಳಿದ್ದನು. ಬೂಬನ್ ಬಡ್ಯಾಕರ್ ಎನ್ನುವ ವ್ಯಕ್ತಿ ಬರಿಗಾಲಿನಲ್ಲಿ ಸೈಕಲ್ ತುಳಿದುಕೊಂಡು ಮನೆಮನೆಗೆ ತೆರಳಿ ಕಡಲೆಕಾಯಿ ಮಾರುತ್ತಾನೆ. ಹೀಗೆ ಕಡಲೆಕಾಯಿ ಮಾರುವ ವೇಳೆ ಹಾಡುತ್ತಿದ್ದ ಹಾಡನ್ನು ಕಚ್ಚಾ ಬಾದಾಮ್ ಹಾಡು ಎಂದೇ ವೈರಲ್ ಆಗಿದೆ.
ಇದನ್ನೂ ಓದಿ:
ಮನೆಗೆ ಸರ್ಪ್ರೈಸ್ ಆಗಿ ಬಂತು ಲಕ್ಷಗಟ್ಟಲೆ ಮೌಲ್ಯದ ಪೀಠೋಪಕರಣಗಳು; ಎಲ್ಲಕ್ಕೂ ಕಾರಣ ಈ ಪುಟಾಣಿ ಪೋರನಂತೆ!