10 ವರ್ಷದ ಮಗನನ್ನು ಏರ್‌ಪೋರ್ಟ್‌ನಲ್ಲಿಯೇ ಬಿಟ್ಟು ಟ್ರಿಪ್‌ಗೆ ಹೋದ ತಂದೆ-ತಾಯಿ; ಕಾರಣ ಏನು ಗೊತ್ತಾ?

ಸಾಮಾನ್ಯವಾಗಿ ಪೋಷಕರು ಎಲ್ಲಿ ಹೋದ್ರು ತಮ್ಮ ಮಕ್ಕಳನ್ನು ಸಹ ಜೊತೆಯಲ್ಲಿಯೇ ಕರೆದುಕೊಂಡು ಹೋಗ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಪೋಷಕರಿಬ್ಬರು ತಮ್ಮ ಹೆತ್ತ ಮಗನನ್ನೇ ಏರ್‌ಪೋರ್ಟ್‌ನಲ್ಲಿ ಬಿಟ್ಟು ಫಾರಿನ್‌ ಟ್ರಿಪ್‌ಗೆ ಹೋಗಿದ್ದಾರೆ. ಪಾಸ್‌ಪೋರ್ಟ್‌ ಅವಧಿ ಮುಕ್ತಾಯವಾಯಿತೆಂಬ ಕಾರಣಕ್ಕೆ ಮಗುವನ್ನು ಏರ್‌ಪೋರ್ಟ್‌ನಲ್ಲಿ ಒಂಟಿಯಾಗಿ ಬಿಟ್ಟು ಟ್ರಿಪ್‌ ಹೋಗಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

10 ವರ್ಷದ ಮಗನನ್ನು ಏರ್‌ಪೋರ್ಟ್‌ನಲ್ಲಿಯೇ ಬಿಟ್ಟು ಟ್ರಿಪ್‌ಗೆ ಹೋದ ತಂದೆ-ತಾಯಿ; ಕಾರಣ ಏನು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 02, 2025 | 12:32 PM

ತಂದೆ-ತಾಯಿ ಎಲ್ಲಿ ಹೋದರೂ ತಮ್ಮ ಮಕ್ಕಳನ್ನು ಸಹ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ವಿಶೇಷವಾಗಿ ಟ್ರಿಪ್‌ (Trip), ಪಿಕ್ನಿಕ್‌ ಹೋಗುವಾಗಂತೂ ಮಕ್ಕಳನ್ನು ಬಿಟ್ಟು ಹೋಗುವುದೇ ಇಲ್ಲ. ಮಕ್ಕಳನ್ನು ಖುಷಿ ಪಡಿಸುವ ಸಲುವಾಗಿಯೇ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಹೆತ್ತ ತಂದೆ-ತಾಯಿಯೇ ತಮ್ಮ ಮಗುವನ್ನು ಏರ್‌ಪೋರ್ಟ್‌ನಲ್ಲಿ (Parents leave child alone at airport) ಬಿಟ್ಟು ಫಾರಿನ್‌ ಟ್ರಿಪ್‌ ಹೋಗಿದ್ದಾರೆ. ಮಗುವಿನ ಪಾಸ್‌ಪೋರ್ಟ್‌ ಅವಧಿ ಮುಗಿದಿದೆಯೆಂಬ ಕಾರಣಕ್ಕೆ ಮಗುವನ್ನು ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ  ಏರ್‌ಪೋರ್ಟ್‌ನಲ್ಲಿಯೇ ಬಿಟ್ಟು ಟ್ರಿಪ್‌ ಹೋಗಿದ್ದು, ತಂದೆ ತಾಯಿಯ ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಮಗುವನ್ನು ಏರ್‌ಪೋರ್ಟ್‌ನಲ್ಲಿ ಬಿಟ್ಟು ಟ್ರಿಪ್‌ ಹೊರಟ ಪೋಷಕರು:

ಈ ಘಟನೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದಿದ್ದು, ಪೋಷಕರಿಬ್ಬರು ಹೆತ್ತ ಮಗನನ್ನೇ ಏರ್‌ಪೋರ್ಟ್‌ನಲ್ಲಿ ಬಿಟ್ಟು ಫಾರಿನ್‌ ಟ್ರಿಪ್‌ಗೆ ಹೋಗಿದ್ದಾರೆ. ಮಗುವಿನ ಪಾಸ್‌ಪೋರ್ಟ್‌ ಅವಧಿ ಮುಗಿದಿದೆ ಹಾಗೂ ಮಗುವಿನ ಬಳಿ ವೀಸಾ ಕೂಡಾ ಇರಲಿಲ್ಲ ಎಂಬ ಕಾರಣಕ್ಕೆ 10 ವರ್ಷದ ಮಗನನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಟ್ರಿಪ್‌ ಹೋಗಿದ್ದಾರೆ.

ಇದನ್ನೂ ಓದಿ
ಇಲ್ಲಿನ ಜನರು ವಾರಕ್ಕೊಮ್ಮೆ ಈ ರೀತಿ ಮಾಡಿ ಒತ್ತಡಕ್ಕೆ ಬ್ರೇಕ್ ಹಾಕಿಕೊಳ್ತಾರೆ
ಭಾರತೀಯ ಕಾರು ಚಾಲಕರೆಲ್ಲರೂ ಹೀಗೆನಾ, ವಿದೇಶಿಗ ಹೀಗೆಂದಿದ್ದೇಕೆ?
ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡ್ತಿದ್ದ ವಿದೇಶಿಗ ಅರೆಸ್ಟ್
ಉತ್ತರ ಕರ್ನಾಟಕದ ರೊಟ್ಟಿ ಸವಿಯಲು ಅಮೆರಿಕದಿಂದ ಬೆಂಗಳೂರಿಗೆ ಬರುವ ಉದ್ಯಮಿ

ದಾಖಲೆಗಳ ಸಮಸ್ಯೆಯಿಂದ ಮಗುವನ್ನು ಬಿಟ್ಟು ಹೋದ ಪೋಷಕರು:

ವಿಮಾನ ನಿಲ್ದಾಣದಲ್ಲಿ ಎಕ್ಸಿಟ್‌ ಪ್ರಕ್ರಿಯೆಯ ಸಮಯದಲ್ಲಿ ಮಗುವಿನ ಪಾಸ್‌ಪೋರ್ಟ್‌ ಅವಧಿ ಮುಗಿದಿದೆಯೆಂದು ವಿಮಾನ ನಿಲ್ದಾಣದ ಸಿಬ್ಬಂದಿಗಳ ಗಮನಕ್ಕೆ ಬರುತ್ತದೆ. ಅವರು ಮಗುವನ್ನು ವಿಮಾನ ಹತ್ತಿಸಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಯಾಣಕ್ಕಾಗಿ ಮಗುವಿಗೆ ವೀಸಾದ ಅವಶ್ಯಕತೆ ಕೂಡಾ ಇತ್ತು. ಆದ್ರೆ ಮಗುವಿನ ಬಳಿ ವೀಸಾ ಕೂಡಾ ಇರಲಿಲ್ಲ. ಈ ಎರಡು ಕಾರಣದಿಂದ ಮಗುವನ್ನು ವಿಮಾನ ಹತ್ತಲು ಸಿಬ್ಬಂದಿಗಳು ನಿರಾಕರಿಸಿದ್ದಾರೆ.

ವೈರಲ್‌  ಪೋಸ್ಟ್ ಇಲ್ಲಿದೆ ನೋಡಿ:

ಈ ಕಠಿಣ ಸಂದರ್ಭದಲ್ಲಿ ಪ್ರವಾಸವನ್ನು ಮುಂದೂಡುವ ಬದಲು ಮಗುವಿನ ಪೋಷಕರು ಮಗುವನ್ನು ಏರ್‌ಪೋರ್ಟ್‌ನಲ್ಲಿಯೇ ಬಿಟ್ಟು ತಾವಿಬ್ಬರು ಪ್ರವಾಸ ಹೋಗಿದ್ದಾರೆ. ಮಗುವನ್ನು ಕರೆದುಕೊಂಡು ಹೋಗುವಂತೆ ಸಂಬಂಧಿಕರ ಬಳಿ ಪೋಷಕರು ಹೇಳಿದ್ದು, ಆದ್ರೆ ಸಂಬಂಧಿಕರು ಬರುವ ಮೊದಲು ಅಧಿಕಾರಿಗಳು ಮಗು ಒಂಟಿಯಾಗಿ ಏರ್‌ ಪೋರ್ಟ್‌ನಲ್ಲಿ ಇರುವುದನ್ನು ಗಮನಿಸಿದ್ದಾರೆ. ನಂತರ ಪೊಲೀಸರು ಬಂದು ಮಗುವನ್ನು ಸುರಕ್ಷಿತವಾಗಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಈ ಎಲ್ಲಾ ಘಟನೆಗಳು ನಡೆದು ಪೋಷಕರನ್ನು ಸಂಪರ್ಕಿಸಿದಾಗ, ಫ್ಲೈಟ್‌ ಟಿಕೆಟ್‌ಗಳನ್ನು ಕಳೆದುಕೊಳ್ಳಲು ಬಯಸದ ಕಾರಣ ನಾವು ನಮ್ಮ ಮಗುವನ್ನು ಒಂಟಿಯಾಗಿ ವಿಮಾನ ನಿಲ್ದಾಣದಲ್ಲಿ ಬಿಟ್ಟು ಟ್ರಿಪ್‌ ಹೋಗಬೇಕಾಯಿತು, ಜೊತೆಗೆ ಮಗುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ನಮ್ಮ ಸಂಬಂಧಿಕರ ಬಳಿ ಹೇಳಿಕೊಂಡಿದ್ದೇವೆ ಎಂದು ಅಧಿಕಾರಿಗಳ ಬಳಿ ಪೋಷಕರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇಲ್ಲಿನ ಜನರು ವಾರಕ್ಕೊಮ್ಮೆಈ ರೀತಿ ಮಾಡಿ ಒತ್ತಡಕ್ಕೆ ಬ್ರೇಕ್ ಹಾಕಿಕೊಳ್ತಾರೆ

ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಟಿಕ್‌ಟಾಕ್‌ನಲ್ಲಿ ಭಾರೀ ವೈರಲ್‌ ಆಗಿದ್ದು,  ಮಗುವನ್ನು ಒಂಟಿಯಾಗಿ ಬಿಟ್ಟು ಟ್ರಿಪ್‌ ಹೋಗುವ ಅವಶ್ಯಕತೆಯಿತ್ತಾ ಎಂದು ಪೋಷಕರ ಈ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:30 pm, Sat, 2 August 25