Viral: ಅನಟೋಮಿಕಲ್ ಬಾಡಿ ಸೂಟ್ ಧರಿಸಿ, ದೇಹದ ಅಂಗಗಳ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಿದ ಶಿಕ್ಷಕಿ

ಇಂದಿನ ಆಧುನಿಕ ಯುಗದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಕ್ಕಳಿಗೆ ಪಠ್ಯಗಳನ್ನು ಭೋದಿಸಲು ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುವುದನ್ನು ನೀವು ನೋಡಿರಬಹುದು. ಆದರೆ ಸ್ಪೇನ್‌ನಲ್ಲಿ ಮೂರನೇ ತರಗತಿಯ ಮಕ್ಕಳಿಗೆ ಪಾಠ ಬೋಧಿಸುವ ಶಿಕ್ಷಕಿ ವೆರೋನಿಕಾ ಡ್ಯೂಕ್ ಮಕ್ಕಳಿಗೆ ಮಾನವ ದೇಹದ ಅಂಗಗಳ ಬಗ್ಗೆ ವಿಭಿನ್ನವಾಗಿ ಅರ್ಥ ಮಾಡಿಸಿದ್ದಾರೆ. ತಾವೇ ಸ್ವತಃ ಈ ವಿಶೇಷ ಬಾಡಿಸೂಟ್ ಧರಿಸಿ ಮಕ್ಕಳಿಗೆ ಅರ್ಥವಾಗುವಂತೆ ಭೋದಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾದರು ಮೆಚ್ಚುಗೆಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Viral: ಅನಟೋಮಿಕಲ್ ಬಾಡಿ ಸೂಟ್ ಧರಿಸಿ, ದೇಹದ ಅಂಗಗಳ ಬಗ್ಗೆ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಿದ ಶಿಕ್ಷಕಿ
ವೈರಲ್​ ಫೋಸ್ಟ್
Edited By:

Updated on: Apr 05, 2025 | 5:40 PM

ಸ್ಪೇನ್, ಏಪ್ರಿಲ್ 5: ಈಗಿನ ಕಾಲದ ಮಕ್ಕಳಿಗೆ ಪಠ್ಯ (lesson) ವನ್ನು ಬೋಧಿಸುವುದು ಕಷ್ಟದ ಕೆಲಸ. ಈ ಮಕ್ಕಳು ಹೇಳಿದ ಮಾತನ್ನು ಕೇಳುವುದನ್ನೇ ಹೇಳಿದ ವಿಷಯವನ್ನೇ ಮತ್ತೆ ಮತ್ತೆ ಹೇಳಿದರೂ ಕೂಡ ಮರೆತು ಬಿಡುತ್ತಾರೆ. ಅದಲ್ಲದೇ ಹೆಚ್ಚಿನ ಶಿಕ್ಷಕರು (teachers) ಮಕ್ಕಳಿಗೆ ಪಠ್ಯಗಳನ್ನು ಹೇಳಿಕೊಡುವಾಗ ಕೆಲವು ಟ್ರಿಕ್ಸ್ ಉಪಯೋಗಿಸುತ್ತಾರೆ. ಆದರೆ, ದೇಹದ ಅಂಗಾಂಗಗಳ ಬಗ್ಗೆ ವಿವರಿಸುವ ಸಲುವಾಗಿ ಸ್ಪೇನ್‌ (Spain) ನ ಮೂರನೇ ತರಗತಿಯ ಶಿಕ್ಷಕಿ ವೆರೋನಿಕಾ ಡ್ಯೂಕ್ (Verónica Duque) ಒಂದು ಹೆಜ್ಜೆ ಮುಂದೆ ಹೋಗಿದ್ದು, ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು, ಸ್ಪ್ಯಾನಿಷ್ ಶಾಲಾ ಶಿಕ್ಷಕಿಯೊಬ್ಬರು ಜೀವಶಾಸ್ತ್ರ ತರಗತಿಗೆ ತೆರಳುವ ಮುನ್ನ ಮಾನವನ ಆಂತರಿಕ ಅಂಗಗಳನ್ನು ಮುದ್ರಿಸಿದ ಬಾಡಿ ಸೂಟ್ (Anatomical Body suit) ಧರಿಸಿ ಮಕ್ಕಳಿಗೆ ಈ ಬಗ್ಗೆ ಅರ್ಥವಾಗುವಂತೆ ವಿವರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ಮಕ್ಕಳಿಗೆ ದೇಹದ ಅಂಗರಚನೆಯ ಬಗ್ಗೆ ಸಹಜವಾಗಿ ವಿವರಿಸಿದರೆ ಅರ್ಥ ಆಗುವುದಿಲ್ಲ ಎಂದು ಅರಿತುಕೊಂಡ ಅವರು ಆನ್ಲೈನ್ ನಲ್ಲಿ ಮಾನವ ಆಂತರಿಕ ಅಂಗಗಳನ್ನು ಮುದ್ರಿಸಿದ ಬಾಡಿ ಸೂಟ್ ಆರ್ಡರ್ ಮಾಡಿದ್ದಾರೆ. ಮಕ್ಕಳಿಗೆ ನೀಡುವಂತೆ ತರಗತಿಗೆ ಅದನ್ನು ಧರಿಸಿಕೊಂಡು ಬಂದಿದ್ದು, ವಿಷಯವನ್ನು ಸರಳವಾಗಿ ಅರ್ಥವಾಗುವಂತೆ ವಿವರಿಸಿದ್ದಾರೆ. ಈ ರೀತಿಯ ಬೋಧನಾ ವಿಧಾನವು ಮಕ್ಕಳಿಗೆ ಹೇಳಿದ ವಿಷಯವು ಮರೆತು ಹೋಗಲು ಸಾಧ್ಯವಿಲ್ಲ.

ವೈರಲ್​​​​​ ಫೋಸ್ಟ್​​ ಇಲ್ಲಿದೆ ( ಈ ಫೋಸ್ಟ್​​ನ್ನು ಎಕ್ಸ್​​ನಲ್ಲಿ ಹಂಚಿಕೊಳ್ಳಲಾಗಿದೆ)

ಈ ಹಿಂದೆ ಡ್ಯೂಕ್ ಅವರ ಪತಿ ಮೈಕಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಇದು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು, Michael ಹೆಸರಿನ ಖಾತೆಯಲ್ಲಿ ಫೋಟೋ ಶೇರ್ ಮಾಡಿಕೊಂಡು, ಈಕೆ ತನ್ನ ಹೆಂಡತಿಯಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ತನ್ನ ವಿದ್ಯಾರ್ಥಿಗಳಿಗೆ ಮಾನವ ದೇಹದ ಅಂಗವನ್ನು ಅರ್ಥವಾಗುವಂತೆ ವಿವರಿಸಿದ್ದಾರೆ. ಗ್ರೇಟ್ ವೆರೋನಿಕಾ ಎಂದು ಬರೆದುಕೊಂಡಿದ್ದಾರೆ. ಈ ಬಾಡಿ ಸೂಟ್ ನಲ್ಲಿ ಶ್ವಾಸಕೋಶ, ಹೃದಯ, ಹೊಟ್ಟೆ, ಕರುಳು ಮುಂತಾದ ದೇಹದ ಆಂತರಿಕ ಅಂಗಗಳು ಸ್ಪಷ್ಟವಾಗಿ ಕಾಣಬಹುದು.

ಇದನ್ನೂ ಓದಿ: ಕ್ರಿಕೆಟ್ ಆಡುತ್ತಿರುವಾಗಲೇ ಬಂದ ಜವರಾಯ, ಆಟದ ಮೈದಾನದಲ್ಲೇ ಕುಸಿದು ಬಿದ್ದ ವಿದ್ಯಾರ್ಥಿ

ಈ ಪೋಸ್ಟ್ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ನನಗೆ ವಿಜ್ಞಾನ ಎಂದರೆ ಕಬ್ಬಿಣದ ಕಡಲೆ ಕಾಯಿ, ಇಂತಹ ಶಿಕ್ಷಕಿ ನನಗೆ ಸಿಗುತ್ತಿದ್ದರೇ ಸುಲಭವಾಗಿರುತ್ತಿತ್ತು’ ಎಂದಿದ್ದಾರೆ. ಮತ್ತೊಬ್ಬರು, ‘ಇಂತಹ ಶಿಕ್ಷಕಿಯನ್ನು ಪಡೆದಿರುವ ಆ ಮಕ್ಕಳು ಪುಣ್ಯವಂತರು’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊರ್ವ ಬಳಕೆದಾರರು, ಇದು ನಿಜಕ್ಕೂ ವಿಶಿಷ್ಟವಾದ ಬೋಧನಾ ವಿಧಾನ’ ಎಂದು ಮೆಚ್ಚಿಕೊಂಡಿದ್ದಾರೆ.

(ಇಲ್ಲಿ ನೀಡಲಾಗಿರುವ ಫೋಟೋ ಹಾಗೂ ನಮ್ಮ ಸುದ್ದಿ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ, ಇದನ್ನು ಸುದ್ದಿಗಾಗಿ ಮಾತ್ರ ಬಳಸಲಾಗಿದೆ.)

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ