Viral : ಇವನಿಗೆಷ್ಟು ಧೈರ್ಯ ನೋಡಿ, ಸಿಂಹದ ಬಾಲ ಹಿಡಿದು ಎಳೆದಾಡುತ್ತಿರುವ ಬಾಲಕ, ವಿಡಿಯೋ ವೈರಲ್
ಕಾಡಿನ ರಾಜ ಸಿಂಹ ದೂರದಲ್ಲೇ ನಿಂತು ಗರ್ಜಿಸಿದರೇನೇ ಸಾಕು ಜೀವವೇ ಕೈಯಲ್ಲಿ ಬಂದಂತಾಗುತ್ತದೆ. ಅದರ ಮುಂದೆ ನಿಲ್ಲುವುದಕ್ಕೂ ಕೂಡ ಯಾರು ಕೂಡ ಧೈರ್ಯ ಮಾಡುವುದಿಲ್ಲ. ಆದರೆ ಜೀವನ ಹಂಗು ತೊರೆದು ಸಿಂಹ ಜೊತೆಗೆ ಕೀಟಲೆ ಮಾಡುತ್ತಾ ಪ್ರಾಣಕ್ಕೆ ಕುತ್ತು ತರುವ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿ ಬಾಲಕ ಸಿಂಹದ ಬಾಲವನ್ನು ಹಿಡಿದು ಕೀಟಲೆ ಮಾಡುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾಲಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕಾಡಿನ ರಾಜ ಸಿಂಹ (lion) ಈ ಹೆಸರು ಕೇಳುತ್ತಿದ್ದಂತೆಯೇ ಒಂದು ಕ್ಷಣ ಮೈ ನಡುಗುತ್ತದೆ. ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬರುವುದನ್ನು ನೋಡುವುದು ಎಷ್ಟು ಚಂದವೋ, ಇದು ಬೇಟೆಯಾಡುವ ರೀತಿಯೇ ನಿಜಕ್ಕೂ ಭಯಾನಕವಾಗಿರುತ್ತದೆ. ಹೀಗಾಗಿ ಸಫಾರಿ (safari)ಗೆ ಹೋದಾಗ ದೂರದಿಂದಲೇ ನೋಡಿ ಖುಷಿ ಪಡುತ್ತಾರೋ ಹೊರತು ಇದರ ಹತ್ತಿರ ಹೋಗುವ ಧೈರ್ಯವಂತೂ ಯಾರು ಕೂಡ ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಹುಡುಗ (boy) ನು ಸಿಂಹದ ಬಾಲ (tail) ಹಿಡಿದು ಎಳೆದಾಡುತ್ತಿರುವ ದೃಶ್ಯವು ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಳಕೆದಾರರು ಈ ವಿಡಿಯೋ ಕಂಡು ಅಕ್ರೋಶ ವ್ಯಕ್ತಪಡಿಸಿದ್ದಾರೆ.
asifsherowala ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶಾಲೆಗೆ ಹೋಗುವ ಹುಡುಗನೊಬ್ಬನು ಸರಪಳಿಯಿಂದ ಬಂಧಿಸಲಾದ ಸಿಂಹ ಬಾಲವನ್ನು ಹಿಡಿದು ಕೊಂಡಿದ್ದಾನೆ. ಈ ವೇಳೆಯಲ್ಲಿ ಸಿಂಹವು ಹಿಂದಕ್ಕೆ ಮುಂದಕ್ಕೆ ಚಲಿಸುವುದನ್ನು ನೋಡಬಹುದು. ಆದರೆ ಬಾಲಕನು ಮಾತ್ರ ಬಲವಾಗಿ ಬಾಲವನ್ನು ಹಿಡಿದು ಎಳೆಯುತ್ತಿದ್ದಂತೆ ಸಿಂಹವು ಮುಂದಕ್ಕೆ ಚಲಿಸಿದೆ. ಈ ವೇಳೆಯಲ್ಲಿ ಬಾಲಕನು ಕೆಳಗೆ ಬೀಳುವುದನ್ನು ನೋಡಬಹುದು. ಆದರೆ ಅಲ್ಲೇ ಇದ್ದವರು ಜೋರಾಗಿ ನಗುತ್ತಿದ್ದು, ಯಾರೋ ಒಬ್ಬ ವ್ಯಕ್ತಿಯೂ ಬಂದು ಬಾಲಕನನ್ನು ಎಬ್ಬಿಸಿದ್ದಾನೆ. ಇಷ್ಟೆಲ್ಲಾ ಕೀಟಲೆ ಮಾಡುತ್ತಿದ್ದರೂ ಸರಪಳಿಯಲ್ಲಿ ಕಟ್ಟಿ ಹಾಕಿದ್ದ ಸಿಂಹವು ದುರುಗಟ್ಟಿ ನೋಡುತ್ತಿದೆ.
ಇದನ್ನೂ ಓದಿ: ಇದ್ರೆ ಇಂತಹ ಸ್ನೇಹಿತ ಇರ್ಬೇಕು, ಸತ್ತ ವ್ಯಕ್ತಿಗೆ ಎಣ್ಣೆ ಕುಡಿಸಿ, ಸಿಗರೇಟ್ ಬಾಯಿಗೆ ಇಟ್ಟು ಅಂತಿಮ ವಿದಾಯ ಹೇಳಿದ ಸ್ನೇಹಿತರು
ವೈರಲ್ ವಿಡಿಯೋ ಇಲ್ಲಿದೆ ನೋಡಿ ( ಇದು ಇನ್ಸ್ಟಾದಲ್ಲಿ ವೈರಲ್ ಆಗಿರುವ ವಿಡಿಯೋ)
View this post on Instagram
ಈ ವಿಡಿಯೋ ಇಪ್ಪತ್ತ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ದೃಶ್ಯ ನೋಡಿ ಸೋಶಿಯಲ್ ಮೀಡಿಯಾ ಬಳಕೆದಾರರು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಈ ಬಾಲಕ ಸಿಂಹ ಎಳೆಯುವುದನ್ನು ನೋಡಿ ದೊಡ್ಡವರು ನಗುತ್ತಿದ್ದೀರಿ ಅಲ್ವಾ, ಮಕ್ಕಳಿಗೆ ಈ ರೀತಿ ಮಾಡಲು ಬಿಡಬೇಡಿ’ ಎಂದಿದ್ದಾರೆ. ಮತ್ತೊರ್ವ ಬಳಕೆದಾರ, ಈ ಪ್ರಾಣಿಗಳಿಗೆ ಈ ರೀತಿ ತೊಂದರೆ ಕೊಡಬೇಡಿ. ಅವುಗಳಿಗೆ ನೋವಾಗುತ್ತದೆ ಎನ್ನುವುದು ನೆನಪಿರಲಿ’ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ನೀವು ಮನೆಯಲ್ಲಿ ಸಿಂಹ, ಕಾಡು ಪ್ರಾಣಿಯನ್ನು ಸಾಕುತ್ತೀರಾ?’ ಅರಣ್ಯ ಅಧಿಕಾರಿಗಳೇ, ನೀವೇನು ಕೆಲಸ ಮಾಡುತ್ತಿದ್ದೀರಾ ‘ಎಂದು ಪ್ರಶ್ನೆ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ಇಲ್ಲಿ ನೀಡಲಾಗಿರುವ ವಿಡಿಯೋ ಹಾಗೂ ನಮ್ಮ ಸುದ್ದಿ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ, ಇದನ್ನು ಸುದ್ದಿಗಾಗಿ ಮಾತ್ರ ಬಳಸಲಾಗಿದೆ.)