Viral : ಇದ್ರೆ ಇಂತಹ ಸ್ನೇಹಿತ ಇರ್ಬೇಕು, ಸತ್ತ ವ್ಯಕ್ತಿಗೆ ಎಣ್ಣೆ ಕುಡಿಸಿ, ಸಿಗರೇಟ್ ಬಾಯಿಗೆ ಇಟ್ಟು ಅಂತಿಮ ವಿದಾಯ ಹೇಳಿದ ಸ್ನೇಹಿತರು
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳನ್ನು ನೋಡಿದಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಇಂತಹ ಜನರು ಇರ್ತಾರ ಎನ್ನುವ ಪ್ರಶ್ನೆಯೊಂದು ಮೂಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಗಲುವಿಕೆಯ ನೋವಿನ ನಡುವೆ ಅಂತ್ಯಕ್ರಿಯೆಯ ವೇಳೆಯಲ್ಲಿ ಸತ್ತ ಹೆಣದ ಬಾಯಿಗೆ ಎಣ್ಣೆ ಹಾಕಿ, ಸಿಗರೇಟ್ ಇಟ್ಟು ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಸ್ನೇಹ (friendship) ಎನ್ನುವ ಎರಡಕ್ಷರವನ್ನು ವಿವರಿಸಲು ಅಸಾಧ್ಯ, ಇದು ಬೆಲೆಕಟ್ಟಲಾಗದ ಅನುಬಂಧ. ಕಷ್ಟ-ಸುಖ, ನಗು-ಅಳು ಹೀಗೆ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿ ನಿಲ್ಲುವವನೆ ನಿಜವಾದ ಸ್ನೇಹಿತ. ಈ ಸುಂದರ ಸ್ನೇಹ ಸಂಬಂಧಕ್ಕೆ ಸಂಬಂಧಿಸಿದ ಹೃದಯಸ್ಪರ್ಶಿ ವಿಡಿಯೋ (heart touching video) ಗಳು ಸೋಷಿಯಲ್ ಮೀಡಿಯಾ (social media) ದಲ್ಲಿ ಹರಿದಾಡುತ್ತಲೇ ಇರುತ್ತವೆ. ಅದಲ್ಲದೇ ಇಂತಹ ಸ್ನೇಹಿತರು ಇರ್ತಾರೆ ಎನ್ನುವ ಪ್ರಶ್ನೆಯೊಂದು ಕಾಡುವಂತೆ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಂತ್ಯಕ್ರಿಯೆ (funeral )ವೇಳೆಯಲ್ಲಿ ಸತ್ತ ಹೆಣಕ್ಕೆ ಎಣ್ಣೆ (alcohol) ಕುಡಿಸಿ, ಸಿಗರೇಟ್ (cigarettes) ಹೊತ್ತಿಸಿ ಬಾಯೊಳಗೆ ಇಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.
Janthu jetha ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ವ್ಯಕ್ತಿ ಯ ಮೃತದೇಹವನ್ನು ಗುಂಡಿಯೊಳಗೆ ಮಲಗಿಸಿರುವುದನ್ನು ನೋಡಬಹುದು. ಅಲ್ಲೇ ಇದ್ದ ಒಬ್ಬ ಯುವಕನು ಎಣ್ಣೆ ಬಾಟಲಿ ಹಿಡಿದು ಲೋಟಕ್ಕೆ ಎಣ್ಣೆ ಸುರಿಯುತ್ತಿದ್ದಾನೆ. ಕೊನೆಗೆ ಮತ್ತೊಬ್ಬ ಈ ಎಣ್ಣೆಯನ್ನು ಸತ್ತ ವ್ಯಕ್ತಗೆ ಕುಡಿಸಿದ್ದಾನೆ. ತದನಂತರದಲ್ಲಿ ಸಿಗರೇಟ್ ಹೊತ್ತಿಸಿ ಹೆಣದ ಬಾಯಿಗೆ ಇಡುವುದನ್ನು ಗಮನಿಸಬಹುದು.
ಇದನ್ನೂ ಓದಿ: ನೆರೆಹೊರೆಯ ಸದಸ್ಯರ ಭೀಕರ ಕಾಳಗದ ನಡುವೆ ಕುಸಿದೇ ಬಿತ್ತು ಮೇಲ್ಛಾವಣಿ, ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ: (ಇದು ಇನ್ಸ್ಟಾದಲ್ಲಿ ವೈರಲ್ ಆಗಿರುವ ವಿಡಿಯೋ)
View this post on Instagram
ಈ ವಿಡಿಯೋ ಈಗಾಗಲೇ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ನನ್ನ ಸ್ನೇಹಿತ ಸತ್ತರೂ ನಾನು ಹೀಗೆಯೇ ಮಾಡುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇದು ಸಹೋದರತ್ವವಲ್ಲ, ಇದನ್ನು ಮೂರ್ಖತನ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಈ ರೀತಿಯ ಅಂತ್ಯಸಂಸ್ಕಾರವು ಭಾರತೀಯ ಸಂಸ್ಕೃತಿಯನ್ನು ನಾಶಪಡುತ್ತಿರುವುದರ ಸಂಕೇತವಾಗಿದೆ’ ಎಂದು ಖಾರವಾಗಿ ಹೇಳಿದ್ದಾರೆ. ಮತ್ತೊರ್ವ ಬಳಕೆದಾರರು, ‘ನನ್ನ ಟೈಮ್‌ಲೈನ್‌ನಲ್ಲಿ ಈ ವಿಡಿಯೋ ಏಕೆ ಕಾಣಿಸಿಕೊಂಡಿತು ಎಂದು ನನಗೆ ತಿಳಿದಿಲ್ಲ. ಆದರೆ ಸತ್ತ ವ್ಯಕ್ತಿ ಮತ್ತು ನಿಂತಿರುವ ವ್ಯಕ್ತಿ ಒಂದು ಕಾಲದಲ್ಲಿ ಆತ್ಮೀಯ ಗೆಳೆಯರು ಎಂದು ನಂಬುತ್ತೇನೆ ‘ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ಇಲ್ಲಿ ನೀಡಲಾಗಿರುವ ವಿಡಿಯೋ ಹಾಗೂ ನಮ್ಮ ಸುದ್ದಿ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ, ಇದನ್ನು ಸುದ್ದಿಗಾಗಿ ಮಾತ್ರ ಬಳಸಲಾಗಿದೆ.)
Published On - 12:14 pm, Sat, 5 April 25