Viral: ನೆರೆಹೊರೆಯ ಸದಸ್ಯರ ಭೀಕರ ಕಾಳಗದ ನಡುವೆ ಕುಸಿದೇ ಬಿತ್ತು ಮೇಲ್ಛಾವಣಿ, ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲ ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರೆ, ಕೆಲವು ದೃಶ್ಯಗಳು ನಡುಕು ಉಂಟು ಮಾಡುವಂತೆ ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಅಕ್ಕಪಕ್ಕದ ಮನೆಯ ಸದಸ್ಯರ ನಡುವೆ ಜಗಳ ನಡೆದಿದೆ. ಈ ವೇಳೆಯಲ್ಲಿ ಈ ಜಗಳಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ನೋಡ ನೋಡುತ್ತಿದ್ದಂತೆ ಮೇಲ್ಛಾವಣಿಯ ಒಂದು ಬದಿಯೇ ಕುಸಿದು ಬಿದ್ದಿದೆ. ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಹಾರಾಷ್ಟ್ರ, ಏಪ್ರಿಲ್ 4: ಜನರೇ ಹಾಗೆ, ಯಾವಾಗ ಹೇಗೆ ಇರುತ್ತಾರೆ ಎಂದು ಹೇಳುವುದು ಕಷ್ಟ. ಕೆಲವರಂತೂ ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಜಗಳ (fight)ಕ್ಕೆ ಇಳಿಯುವುದನ್ನು ನೋಡಬಹುದು. ಕೆಲವೊಮ್ಮೆ ಕೋಪದ ಕೈಗೆ ಬುದ್ಧಿಕೊಟ್ಟು ನಾವು ಏನು ಮಾಡ್ತೀವಿ ಅನ್ನೋದ್ದನ್ನು ಮರೆತೇ ಬಿಡುತ್ತಾರೆ. ಈ ರೀತಿ ಜಗಳ ಮಾಡಲು ಹೋಗಿ ಅವಾಂತರಗಳನ್ನು ಮಾಡಿಕೊಳ್ಳುವವರು ಇದ್ದಾರೆ. ಇದೀಗ ವೈರಲ್ ವಿಡಿಯೋ (video) ದಲ್ಲಿ ನೆರಹೊರೆಯ ಎರಡು ಮನೆಯ ಸದಸ್ಯರ ನಡುವೆ ಭೀಕರ ಜಗಳವು ಏರ್ಪಟ್ಟಿದೆ. ಆದರೆ ಈ ಕಾಳಗದ ನಡುವೆ ಮನೆಯ ಮೇಲ್ಛಾವಣಿ (roof) ಯೇ ಕುಸಿದು ಬಿದ್ದಿದ್ದು, ಇದರ ಪರಿಣಾಮ ನಿಂತಿದ್ದ ಜನರು ಕೂಡ ದೊಪ್ಪನೆ ಕೆಳಗೆ ಬಿದ್ದಿದ್ದಾರೆ. ಈ ಘಟನೆಯೂ ಮಹಾರಾಷ್ಟ್ರ (Maharastra) ದ ಭಿವಂಡಿ (Bhiwandi) ಯಲ್ಲಿ ನಡೆದಿದೆ ಎನ್ನಲಾಗಿದೆ. ನೆಟ್ಟಿಗರು ಈ ವಿಡಿಯೋಗೆ ತಮಾಷೆಯಾಗಿಯೇ ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋವನ್ನು @gharkekalesh ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಗಲಭೆಯ ವೇಳೆ ಜನರು ಮನೆಯ ಛಾವಣಿಯಿಂದ ಕೆಳಗೆ ಬಿದ್ದ ಘಟನೆಯೂ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಏಳರಿಂದ ಎಂಟು ಜನರು ಮನೆಯ ಮೇಲ್ಛಾವಣಿಯ ಮೇಲೆ ನಿಂತು ಜಗಳವಾಡುತ್ತಿದ್ದಾರೆ. ಅಲ್ಲೇ ಇದ್ದ ಮುಸ್ಲಿಂ ಮಹಿಳೆಯರು ಕೂಡ ಪುರುಷರ ಕಾಲರ್ ಹಿಡಿದು ಎಳೆದಾಡುತ್ತಿದ್ದಾರೆ. ಈ ಹೊಡೆದಾಟ ವೇಳೆ ಮೇಲ್ಛಾವಣಿಯೇ ಕುಸಿದು ಬಿದ್ದ ಪರಿಣಾಮ ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಜಗಳವೇ ನಿಂತು ಹೋಗಿದೆ.
ಇದನ್ನೂ ಓದಿ: ಎಷ್ಟೇ ಪ್ರಯತ್ನ ಪಟ್ರು ಕೆಲಸನೇ ಸಿಗ್ತಿಲ್ಲ, ನಿರಾಸೆಯಲ್ಲೇ ತನ್ನ ಶ್ರದ್ಧಾಂಜಲಿ ಪೋಸ್ಟ್ ಹಂಚಿಕೊಂಡ ಯುವಕ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Scary😨(Group of People fell from the Roof while having Kalesh) Bhiwandi MH pic.twitter.com/Yo6Vw5CiFq
— Ghar Ke Kalesh (@gharkekalesh) April 2, 2025
ಈ ವಿಡಿಯೋವು ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು, ‘ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಅವರನ್ನು ಮುಂದಿನ ಹಂತಕ್ಕೆ ಬಡ್ತಿ ಮಾಡಲಾಗಿದೆ’ ಎಂದು ತಮಾಷೆಯಾಗಿ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಮಧ್ಯಸ್ಥರ ಅವಶ್ಯಕತೆಯಿಲ್ಲದೇ ಈ ಜಗಳ ಸುಲಭವಾಗಿಯೇ ಬಗೆಹರಿಯಿತು’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Sat, 5 April 25