Viral: ಕ್ರಿಕೆಟ್ ಆಡುತ್ತಿರುವಾಗಲೇ ಬಂದ ಜವರಾಯ, ಆಟದ ಮೈದಾನದಲ್ಲೇ ಕುಸಿದು ಬಿದ್ದ ವಿದ್ಯಾರ್ಥಿ
ಸಾವು ಹೇಗೆ ಬರುತ್ತದೆ ಎಂದು ಊಹೆ ಮಾಡಲು ಸಾಧ್ಯವಿಲ್ಲ. ನಮ್ಮ ಜೊತೆಗೆ ಇದ್ದ ವ್ಯಕ್ತಿಯೂ ಇನ್ನು ಐದು ನಿಮಿಷದಲ್ಲಿ ನಂತರ ನಮ್ಮ ಜೊತೆಗೆ ಇರುತ್ತಾನೆ ಎಂದು ಹೇಳುವುದು ಕಷ್ಟ. ಈಗಂತೂ ಎಲ್ಲಿ ನೋಡಿದರಲ್ಲಿಯೂ ಸಾವಿನ ಸುದ್ದಿಯೇ ಕೇಳುವಂತಾಗಿಬಿಟ್ಟಿದೆ. ಇದೀಗ ಕ್ರಿಕೆಟ್ ಆಡುತ್ತಿದ್ದ ವೇಳೆ ವಿದ್ಯಾರ್ಥಿಯೂ ಹೃದಯಾಘಾತಗೊಳಗಾಗಿ ಆಟದ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಪಂದ್ಯಾಟದ ವೇಳೆ ಆಟದ ಮೈದಾನದಲ್ಲೇ ಕುಸಿದು ಬೀಳುವ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೈದರಾಬಾದ್, ಏಪ್ರಿಲ್ 5 : ಹುಟ್ಟು ಸಾವು ಸಹಜ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸಾಯಲೇಬೇಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ಸಾವು ಯಾವಾಗ, ಹೇಗೆ ಬರುತ್ತದೆ ಹೇಳುವುದು ಕಷ್ಟವಾಗಿದೆ. ಅದರಲ್ಲಿ ಈ ಹೃದಯಾಘಾತ (heart attack) ದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಆದರೆ ಇದೀಗ ಬಿ.ಟೆಕ್ (B.Tech) ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬನು ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾನೆ ಹೌದು, ವಿದ್ಯಾರ್ಥಿನಿ ವಿನಯ್ (vinay) ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆಯೂ ಹೈದರಾಬಾದ್ (hyderbad) ನ ಮೆಡ್ಚಲ್ ಜಿಲ್ಲೆ(Medchal District) ಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಹೌದು, ಖಮ್ಮಂ ಜಿಲ್ಲೆಯ ವಿನಯ್ ಮೆಡ್ಚಲ್ ಜಿಲ್ಲೆಯ ಕಂಡ್ಲಕೋಯದಲ್ಲಿರುವ ಸಿಎಂಆರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಇದೇ ಏಪ್ರಿಲ್ 4 ರಂದು ಸಿಎಂಆರ್ ಕಾಲೇಜಿನಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಯೋಜಿಸಲಾಗಿತ್ತು. ಶುಕ್ರವಾರ ಸಂಜೆಯ ವೇಳೆ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಕಾಲೇಜು ಮೈದಾನಕ್ಕೆ ತೆರಳಿದ್ದು, ಆಟದ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿನಯ್ ಇದ್ದಕ್ಕಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ ( ಈ ವಿಡಿಯೋ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ)
క్రికెట్ ఆడుతూ గుండెపోటుతో మృతి చెందిన బీటెక్ విద్యార్థి
హైదరాబాద్ – CMR కాలేజీలో నిర్వహించిన టోర్నమెంట్లో క్రికెట్ ఆడుతూ కుప్పకూలిన ఖమ్మం జిల్లాకు చెందిన బీటెక్ ఫైనల్ ఇయర్ విద్యార్థి
వెంటనే ఆసుపత్రికి తరలించగా అప్పటికే చనిపోయినట్టు నిర్దారించిన వైద్యులు
కళ్ల ముందే తమ… pic.twitter.com/4Kjm5sBuwr
— Telugu Scribe (@TeluguScribe) April 5, 2025
ಆ ತಕ್ಷಣವೇ ವಿದ್ಯಾರ್ಥಿಗೆ ಸಿಪಿಆರ್ ಮಾಡಲಾಗಿದ್ದು, ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆಯಲ್ಲಿ ಪರೀಕ್ಷಿಸಿದ ವೈದ್ಯರು ಅವನು ಆಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ತಮ್ಮ ಕಣ್ಣೇದುರು ಪ್ರಾಣ ಕಳೆದುಕೊಂಡ ಸ್ನೇಹಿತನನ್ನು ನೆನೆದು ಸಹಪಾಠಿಗಳು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: ಇವನಿಗೆಷ್ಟು ಧೈರ್ಯ ನೋಡಿ, ಸಿಂಹದ ಬಾಲ ಹಿಡಿದು ಎಳೆದಾಡುತ್ತಿರುವ ಬಾಲಕ, ವಿಡಿಯೋ ವೈರಲ್
ಈ ವಿಡಿಯವನ್ನು telugu scribe ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಮೈದಾನದಲ್ಲಿ ಕ್ರಿಕೆಟ್ ಆಟ ಆಡುವುದನ್ನು ನೋಡಬಹುದು. ಈ ವೇಳೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿದ್ಯಾರ್ಥಿ ಕುಸಿದು ಬಿದ್ದಿದ್ದಾನೆ. ಮೈದಾನದಲ್ಲೇ ಇದ್ದ ವಿದ್ಯಾರ್ಥಿಗಳು ಓಡೋಡಿ ಬಂದಿದ್ದು ಸಿಪಿಆರ್ ಮಾಡಿದ್ದಾರೆ. ಈ ವಿಡಿಯೋ ಮೂವತ್ತೊಂಬತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಪಡೆದುಕೊಂಡು ಕಾಮೆಂಟ್ ಗಳು ಹರಿದು ಬಂದಿದೆ. ಬಳಕೆದಾರರೊಬ್ಬರು, ‘ಈ ಸಾವು ನ್ಯಾಯವೇ’ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಇಂತಹ ಹೃದಯಾಘಾತ ಪ್ರಕರಣಗಳು ನಿಜಕ್ಕೂ ಭಯಾನಕವಾಗಿದೆ’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ಇಲ್ಲಿ ನೀಡಲಾಗಿರುವ ವಿಡಿಯೋ ಹಾಗೂ ನಮ್ಮ ಸುದ್ದಿ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ, ಇದನ್ನು ಸುದ್ದಿಗಾಗಿ ಮಾತ್ರ ಬಳಸಲಾಗಿದೆ.)