Viral Video: ವಿಶೇಷ ಚೇತನ ಹುಡುಗನಿಗೆ ಅಮ್ಮನಿಂದ ಸ್ಪೆಷಲ್​ ಗಿಫ್ಟ್​; ಆತನ ಖುಷಿ ಎಲ್ಲರ ಮನ ಮಿಡಿಯುವಂತಿದೆ

| Updated By: shruti hegde

Updated on: Sep 09, 2021 | 12:46 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಅಚ್ಚರಿ ಮೂಡಿಸುವಂತಿದ್ದರೆ, ಇನ್ನು ಕೆಲವು ವಿಡಿಯೋಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಅಂಥಹುದೇ ವಿಡಿಯೋ ಇದಾಗಿದೆ.

Viral Video: ವಿಶೇಷ ಚೇತನ ಹುಡುಗನಿಗೆ ಅಮ್ಮನಿಂದ ಸ್ಪೆಷಲ್​ ಗಿಫ್ಟ್​; ಆತನ ಖುಷಿ ಎಲ್ಲರ ಮನ ಮಿಡಿಯುವಂತಿದೆ
ವಿಶೇಷ ಚೇತನ ಹುಡುಗನಿಗೆ ಅಮ್ಮನಿಂದ ಸ್ಪೆಷಲ್​ ಗಿಫ್ಟ್
Follow us on

ತನ್ನ ಹುಟ್ಟು ಹಬ್ಬದ ವಿಶೇಷವಾಗಿ ಅಮ್ಮ ಕೊಟ್ಟ ಮೊಬೈಲ್ ಫೋನ್ ನೋಡಿದ ಹುಡುಗನ ರಿಯಾಕ್ಷನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೃದಯ ಸ್ಪರ್ಶಿ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ತಾಯಿಯು ತನ್ನ ಮಗುವಿನ ಹುಟ್ಟು ಹಬ್ಬದ ವಿಶೇಷವಾಗಿ ಮೊಬೈಲ್ ಫೋನ್ಅನ್ನು ಉಡುಗೊರೆಯಾಗಿ ನೀಡಿದ ಸುಂದರ ದಿನವೆಂದು ಕರೆಯೋಣ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ಅಚ್ಚರಿ ಮೂಡಿಸುವಂತಿದ್ದರೆ, ಇನ್ನು ಕೆಲವು ವಿಡಿಯೋಗಳು ಹೃದಯಕ್ಕೆ ಹತ್ತಿರವಾಗುತ್ತವೆ. ಅಂಥಹುದೇ ವಿಡಿಯೋ ಇದಾಗಿದ್ದು, ಮೊಬೈಲ್ ಕಂಡ ವಿಶೇಷ ಚೇತನ ಹುಡುಗ ಸಂತೋಷಗೊಂಡಿದ್ದಾನೆ. ವಿಡಿಯೋದಲ್ಲಿ ಆತನ ಖುಷಿ ನೋಡಿದ ನೆಟ್ಟಿಗರಿಗೆ ಹೃದಯ ತುಂಬಿ ಬಂದಿದೆ.

1.47 ನಿಮಿಷದ ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ ಹುಡುಗನ ಹುಟ್ಟು ಹಬ್ಬದ ತಯಾರಿ ಜೋರಾಗಿಯೇ ಇದೆ. ಹುಡುಗನ ಎದುರು ಕೇಕ್ ಕೂಡಾ ಇರಿಸಲಾಗಿದೆ. ಎದುರಿದ್ದ ಅಮ್ಮ ಉಡುಗೊರೆಯನ್ನು ಹುಡುಗನಿಗೆ ನೀಡುತ್ತಾಳೆ. ಇದನ್ನು ನೋಡಿದ ಹುಡುಗ ಏನಿದು? ಎಂದು ಕೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಅಮ್ಮ, ಕೊಟ್ಟ ಉಡುಗೊರೆ ತೆಗೆದು ನೋಡುವಂತೆ ಹೇಳಿದಾಗ ಹುಡುಗ ಉಡುಗೊರೆ ಕಾಗದವನ್ನು ಬಿಚ್ಚುತ್ತಾನೆ. ಬಾಕ್ಸಿನ ಒಳಗೆ ಮೊಬೈಲ್ ಫೋನ್ ಇರುವುದು ನೋಡಿ ಆತನಿಗೆ ತುಂಬಾ ಸಂತೋಷವಾಗಿದೆ. ಆತನ ಮುಖದಲ್ಲಿ ನಗು ನೋಡಿದ ಅಮ್ಮನೂ ಸಹ ಖುಷಿಯಾಗಿದ್ದಾಳೆ. ಈ ಹೃದಯಸ್ಪರ್ಶಿ ವಿಡಿಯೋ ನಿಜವಾಗಿಯೂ ಮನ ಗೆದ್ದಿದೆ.

ಇದನ್ನೂ ಓದಿ:

Viral Video: ಚಮಚದಿಂದ ಜೈಲಿನ ಟಾಯ್ಲೆಟ್​ ನೆಲ ಕೊರೆದು ಹಾಲಿವುಡ್​ ಸ್ಟೈಲಲ್ಲಿ ಉಗ್ರರು ಪರಾರಿ!

Viral Video: ಹಾವಿನ ಬಾಲ ಹಿಡಿದು ಕಚ್ಚಿಸಿಕೊಳ್ಳುತ್ತಿದ್ದ ಉರಗ ತಜ್ಞ; ಸೆಕೆಂಡುಗಳಲ್ಲಿ ಅಪಾಯದಿಂದ ಪಾರು

(Special child receiving mobile phone for birthday gift his reaction goes viral in social media)

Published On - 12:44 pm, Thu, 9 September 21