Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!

2020ರಲ್ಲಿ ಕೂಡ ಆಕೆಯ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗರ್ಭಿಣಿಯಾಗಿದ್ದಾಗ ಆಕೆ ನೃತ್ಯ ಮಾಡಿದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು.

Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!
ಸಾಲ್ಸಾ ನೃತ್ಯಗಾತಿ
Edited By:

Updated on: Jun 08, 2021 | 8:58 PM

ಯಾವಾಗ ನಾವು ಕಷ್ಟವನ್ನೇ ಸೋಲಿಸುತ್ತೇವೋ ಆಗ ಕಷ್ಟ ಎಂಬುದೇ ಇರುವುದಿಲ್ಲ. ಎಲ್ಲವೂ ಸುಲಭ ಅಥವಾ ಸುಂದರವಾಗಿಯೇ ಕಾಣುತ್ತದೆ. ಈ ವಿಡಿಯೋದಲ್ಲಿ ಇರುವ ವೆನೆಜುವೆಲಾದ ಡ್ಯಾನ್ಸರ್ ಅದನ್ನೇ ಸಾಧಿಸಿ ತೋರಿಸಿದ್ದಾಳೆ. ಆಂಡ್ರೆಯಾನಾ ಹರ್ನಾಂಡಿಜ್ ಎಂಬ ಹುಡುಗಿ ಐದು ವರ್ಷದ ಹಿಂದೆ ತನ್ನ ಕಾಲನ್ನೇ ಕಳೆದುಕೊಳ್ಳುತ್ತಾಳೆ. ಆದರೂ ಜೀವನದಲ್ಲಿ ಹತಾಶಳಾಗದೆ, ಹೊಸತನ್ನು ಸಾಧಿಸುತ್ತಾಳೆ.

ಐದು ವರ್ಷಗಳ ಹಿಂದೆ ತನ್ನ ಎಡ ಕಾಲು ಕಳೆದುಕೊಂಡ ಈಕೆ ಈಗ ಸುಂದರವಾಗಿ, ಇತರರನ್ನೂ ನಾಚಿಸುವ ಹುಮ್ಮಸ್ಸಿನಿಂದ ಸಾಲ್ಸಾ ನೃತ್ಯ ಮಾಡುತ್ತಾಳೆ. ಮುಖದಲ್ಲಿ ಸದಾ ಮಂದಹಾಸ ಹೊಂದಿಕೊಂಡು, ಭರ್ಜರಿಯಾಗಿ ನೃತ್ಯ ಪ್ರದರ್ಶನ ಮಾಡುತ್ತಾಳೆ. ಆಕೆಯ ಬಣ್ಣಬಣ್ಣದ ಬಟ್ಟೆ ಕೂಡ ಕಲರ್​ಫುಲ್ ವ್ಯಕ್ತಿತ್ವವನ್ನು ಮತ್ತಷ್ಟು ಸುಂದರವಾಗಿ ಕಾಣಿಸುತ್ತದೆ. ಈಗ ಆಕೆಯ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್​ಸ್ಟಾಗ್ರಾಂನಲ್ಲಿ ಯುವತಿಯ ನೃತ್ಯ ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಛಲ, ಸಾಹಸ, ಸಂತೋಷಕ್ಕೆ ಜನರು ಮಾರುಹೋಗಿದ್ದಾರೆ. ಆಕೆಗೆ ಸೋಷಿಯಲ್ ಮೀಡಿಯಾ ಮೂಲಕ ಮತ್ತಷ್ಟು ಪ್ರೋತ್ಸಾಹ, ಉತ್ಸಾಹ ತುಂಬುತ್ತಿದ್ದಾರೆ. ಜೂನ್ 4ರಂದು ಹಂಚಿಕೊಂಡಿದ್ದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ 30 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.

ಹರ್ನಾಂಡಿಜ್ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಕಷ್ಟದ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳುತ್ತಿರುತ್ತಾಳೆ. 2020ರಲ್ಲಿ ಕೂಡ ಆಕೆಯ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಗರ್ಭಿಣಿಯಾಗಿದ್ದಾಗ ಆಕೆ ನೃತ್ಯ ಮಾಡಿದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡಿತ್ತು.

ಇದನ್ನೂ ಓದಿ: ಹಿಂದಿ ಹಾಡಿಗೆ ಸ್ಟೆಪ್​ ಹಾಕಿದ ಭಜರಂಗಿ ಭಾಯಿಜಾನ್​ ಸಿನಿಮಾದ ಹರ್ಷಾಲಿ ಮಲ್ಹೋತ್ರಾ; ವಿಡಿಯೋ ವೈರಲ್

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್