ಭಾರತದಲ್ಲಿ ಮಾತ್ರವಲ್ಲದೆ ಶ್ರೀ ಕೃಷ್ಣನನ್ನು ಆರಾಧನೆ ಮಾಡುವ ಭಕ್ತವೃಂದ ಈ ಜಗತ್ತಿನೆಲ್ಲೆಡೆ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಂತೂ ಭಾರತೀಯ ಸಂಸ್ಕೃತಿ, ಹಿಂದೂ ಧರ್ಮದ ಆರಾಧನೆಯ ಕಡೆಗೆ ವಿದೇಶಿಯರು ಹೆಚ್ಚು ಆಕರ್ಷಿತರಾಗಿದ್ದಾರೆ. ಭಾರತೀಯ ಶಾಸ್ತ್ರ ಸಂಪ್ರದಾಯದ ಪ್ರಕಾರ ವಿವಾಹ ಆಗುವಂತಹ, ಹಿಂದೂ ದೇವರ ಆರಾಧನೆಯಲ್ಲಿ ತೊಡಗಿರುವ ಅನೇಕ ವಿದೇಶಿಗರ ಕುರಿತ ಸುದ್ದಿಗಳು, ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತವೆ. ಅದರಲ್ಲೂ ವಿಶೇಷವಾಗಿ ಕೃಷ್ಣ ನಾಮ ಜಪವನ್ನು ಮಾಡುತ್ತಾ, ಶ್ರೀ ಕೃಷ್ಣನ ಭಜನಾ ಸಂಕೀರ್ತನೆಗಳನ್ನು ಹಾಡುತ್ತಾ, ವಿದೇಶಗಳ ನಗರದ ಬೀದಿಗಳಲ್ಲಿ ಓಡಾಡುವ ಶ್ರೀಕೃಷ್ಣನ ಭಕ್ತವೃಂದದವರ ವಿಡೀಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುವುದನ್ನು ನಾವು ನೋಡಿರುತ್ತೇವೆ. ಆದರೆ ನೀವು ಎಂದಾದರೂ ಶ್ರೀ ಕೃಷ್ಣನ ಸಂಕೀರ್ತನೆಗೆ ಸ್ಪೈಡರ್ ಮ್ಯಾನ್ ನೃತ್ಯ ಮಾಡುವುದನ್ನು ನೋಡಿದ್ದೀರಾ? ಇಲ್ಲೊಬ್ಬ ಸ್ಪೈಡರ್ ಮ್ಯಾನ್ ವೇಶಧಾರಿ ಭಕ್ತರೊಂದಿಗೆ ಸೇರಿಕೊಂಡು ನ್ಯೂಯಾರ್ಕ್ ನಗರದ ಟೈಮ್ ಸ್ಕ್ವೇರ್ ಮುಂದೆ ʼಹರೇ ಕೃಷ್ಣ, ಹರೇ ರಾಮʼ ಸಂಕೀರ್ತನೆಗೆ ನೃತ್ಯ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ನ್ಯೂಯಾರ್ಕ್ ನಗರದ ಟೈಮ್ ಸ್ಕ್ವೇರ್ ಮುಂದೆ ಶ್ರೀ ಕೃಷ್ಣನ ಭಕ್ತರ ಜೊತೆಗೂಡಿ ಸ್ಪೈಡರ್ ಮ್ಯಾನ್ ವೇಷಧಾರಿಯೊಬ್ಬ ಹರೇ ಕೃಷ್ಣ, ಹರೇ ರಾಮʼ ಭಜನಾ ಸಂಕೀರ್ತನೆಗೆ ಭಕ್ತಿಪೂರ್ವಕವಾಗಿ ನೃತ್ಯ ಮಾಡುವುದನ್ನು ಕಾಣಬಹುದು. ನಗರದ ಟೈಮ್ಸ್ ಸ್ಕ್ವೇರ್ ಮುಂದೆ ಅಲ್ಲಿನ ಶ್ರೀಕೃಷ್ಣನ ಭಕ್ತವೃಂದದವರು “ಹರೇ ಕೃಷ್ಣ, ಹರೇ ರಾಮ” ಸಂಕೀರ್ತನೆಯನ್ನು ಹಾಡುತ್ತಾ, ನೃತ್ಯ ಮಾಡುತ್ತಾ ಕೃಷ್ಣನ ಧ್ಯಾನದಲ್ಲಿ ತಲ್ಲೀಣರಾಗಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸ್ಪೈಡರ್ ಮ್ಯಾನ್ ವೇಷಧಾರಿಯೊಬ್ಬ, ಈ ಭಕ್ತರೊಂದಿಗೆ ಸೇರಿಕೊಂಡು ಶ್ರೀ ಕೃಷ್ಣನ ಸಂಕೀರ್ತನೆಗೆ ತಾನು ಕೂಡಾ ಭಕ್ತಿಪೂರ್ವಕವಾಗಿ ಸಂತೋಷದಿಂದ ನೃತ್ಯ ಮಾಡುತ್ತಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಪೈಡರ್ ಮ್ಯಾನ್ ನೃತ್ಯ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಅರ್ಧ ತೆಂಗಿನಕಾಯಿ, ಒಂದು ಸೇಬು ಮತ್ತು ಒಂದು ಬಾಳೆಯ ಮೌಲ್ಯ ಎಷ್ಟು?
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಈ ವೈರಲ್ ವೀಡಿಯೋವನ್ನು @atl_sankirtan ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 116K ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಇನ್ನೂ ಸ್ಪೈಡರ್ ಮ್ಯಾನ್ನ ಕೃಷ್ಣ ಭಕ್ತಿಗೆ ಹಲವರು ಮನಸೋತಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ