
Leopard : ‘ಸರ್ವೈವಲ್ ಆಫ್ ದಿ ಫಿಟೆಸ್ಟ್’ ಎಂಬ ಒಕ್ಕಣೆಯನ್ನು ಕೇಳಿರುತ್ತೀರಿ. ಡಾರ್ವಿನ್ನ ವಿಕಾಸವಾದದ ಸಿದ್ಧಾಂತದ ಹಿನ್ನೆಲೆಯಲ್ಲಿ ಇದು ಹುಟ್ಟಿಕೊಂಡಿರುವುದು. ನಿಸರ್ಗದ ಪ್ರಕ್ರಿಯೆಯನ್ನು ಇದು ಸೂಚಿಸುತ್ತದೆ. ಇದು ವನ್ಯಜೀವಿಗಳಿಗಂತೂ ಅಕ್ಷರಶಃ ಅನ್ವಯಿಸುತ್ತದೆ. ಕೆಲವು ಸಹಜವಾಗಿ ಅನ್ಯಭಕ್ಷಕಗಳಾಗಿದ್ದರೆ, ಕೆಲವು ಮುದ್ದಾಮ್ ಬೇಟೆಯಾಡುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಐಎಫ್ಎಸ್ ಅಧಿಕಾರಿ ಸಾಕೇತ್ ಬಡೋಲಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡ ಈ ವಿಡಿಯೋ. ಚಿರತೆಯೊಂದು ಹಸುವನ್ನು ಬೇಟೆಯಾಡುವ ಈ ವಿಡಿಯೋ ನೋಡಿ. ಕೊನೆಗೂ ತನ್ನ ಪ್ರಚಂಡ ಶಕ್ತಿಯಿಂದ ಹಸುವನ್ನು ಎಳೆದುಕೊಂಡೇ ತೀರುತ್ತದೆ ಈ ಚಿರತೆ.
ಎಂಥಾ ಶಕ್ತಿ ಚಿರತೆಯ ದವಡೆಯಲ್ಲಿ!
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ