ಒಲಿಂಪಿಕ್ಸ್‌ನಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅತಿ ಹೆಚ್ಚು ಪದಕಗಳನ್ನು ಗಳಿಸಿದ ಅಗ್ರ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದು. ಇದಕ್ಕೆ ಕಾರಣ ಚೀನಾದಲ್ಲಿನ ತರಬೇತಿ. ಚಿಕ್ಕ ಮಕ್ಕಳಿರುವಾಗಲೇ ಕ್ರೀಡಾ ತರಬೇತಿ (Sports Coaching) ನೀಡಲಾಗುತ್ತದೆ. ಇತ್ತೀಚೆಗೆ ಚೀನಾದ ಶಾಲೆಯೊಂದು ತಮ್ಮ ವಿದ್ಯಾರ್ಥಿಗಳಿಗೆ ಅಥ್ಲೆಟಿಕ್ ಸಾಮರ್ಥ್ಯವನ್ನು ಹೇಗೆ ಅಭಿವೃದ್ಧಿಪಡಿಸುತ್ತದೆ ಎಂಬುದನ್ನು ತೋರಿಸುವ ವೀಡಿಯೊ (Video) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral) ಆಗುತ್ತಿದೆ.
ಇದನ್ನೂ ಓದಿ: ಒಟ್ಟಿಗೆ ಕಾಣಿಸಿಕೊಂಡ ಸಮಂತಾ ಮತ್ತು ರಣವೀರ್ ಸಿಂಗ್; ವೈರಲ್ ಆಯ್ತು ಫೋಟೋ
ವೀಡಿಯೊದಲ್ಲಿ ನೋಡುವಂತೆ, ಸುಮಾರು ಐದರಿಂದ ಆರು ವರ್ಷ ವಯಸ್ಸಿನ ಚಿಕ್ಕ ಮಕ್ಕಳು ತಮ್ಮ ಕಾಲುಗಳಿಗೆ ವ್ಯಾಯಾಮ ನೀಡುವುದರ ಜೊತೆಗೆ ತಮ್ಮ ದೇಹವನ್ನು ಪರಿಪೂರ್ಣ ಸಮನ್ವಯದಲ್ಲಿ ಚಲಿಸುವಾಗ ಎರಡೂ ಕೈಗಳಿಂದ ಎರಡು ಚೆಂಡುಗಳನ್ನು ನೆಲಕ್ಕೆ ಹೊಡೆಯುವುದನ್ನು ಕಾಣಬಹುದು.
WOW!
Physical education class of kindergarten. ???@lsjngs— Erik Solheim (@ErikSolheim) June 5, 2022
ಇದನ್ನೂ ಓದಿ: ಕಾರಿನಲ್ಲಿ ಮಹಿಳೆಯೊಂದಿಗೆ ಅಸ್ವಾಭಾವಿಕವಾಗಿ ನಡೆದುಕೊಳ್ಳುತ್ತಾ ಟ್ರಕ್ಗೆ ಡಿಕ್ಕಿ ಹೊಡೆದ ಭೂಪ!
ಭಾನುವಾರದಂದು 15 ಸೆಕೆಂಡುಗಳ ವಿಡಿಯೋ ಕ್ಲಿಪ್ ಅನ್ನು ಮಾಜಿ ನಾರ್ವೇಜಿಯನ್ ರಾಜತಾಂತ್ರಿಕ ಎರಿಕ್ ಸೋಲ್ಹೈಮ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ವಾವ್! ಶಿಶುವಿಹಾರದ ದೈಹಿಕ ಶಿಕ್ಷಣ ವರ್ಗ” ಎಂದು ಶೀರ್ಷಿಕೆಯನ್ನೂ ಬರೆದುಕೊಂಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ 69,000 ಲೈಕ್‌ಗಳು ಬಂದಿವೆ.
ಇದನ್ನೂ ಓದಿ: Trending: ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಿ
The reason why China tops the Olympic medal list!
— Kedar babar (@kedarbabar5) June 5, 2022
ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು, ”ಇಂಥ ತರಬೇತಿ ಎಲ್ಲಾ ಶಾಲೆಗಳಲ್ಲಿ ಮಾಡಿದರೆ ಒಳ್ಳೆಯದು”, ”ಅದಕ್ಕಾಗಿಯೇ ಅವರು ಸ್ವಯಂ ಶಿಸ್ತು, ಬುದ್ಧಿವಂತಿಕೆಯನ್ನು ಹೊಂದಿದ್ದಾರೆ”, ”ಚೀನಾ ಒಲಿಂಪಿಕ್ಸ್ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಲು ಇದೇ ಕಾರಣ” ಎಂಬಿತ್ಯಾದಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
WOW!
Core discipline and coordination.
Something that is good for all schools.
It's why they have such self-discipline and smarts. https://t.co/GeTSnzYwPv— Jai Poretsi (@poretsi) June 5, 2022
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:52 pm, Mon, 6 June 22