Optical Illusion: ಚಿತ್ರದಲ್ಲಿ ಅಡಗಿರುವ ಕರಡಿಯನ್ನು ಪತ್ತೆ ಹಚ್ಚಲು ಸಾಧ್ಯವೇ?
ಚಿತ್ರದಲ್ಲಿ ಮರಗಳ ನಡುವೆ ಕರಡಿಯೊಂದು ಅಡಗಿದೆ. ಆರು ಸೆಕೆಂಡಿನಲ್ಲಿ ಅದನ್ನು ನಿಮ್ಮಿಂದ ಹುಡುಕಲು ಸಾಧ್ಯವೇ? ನೀವು ಈ ಚಿತ್ರವನ್ನು ಕೆಲ ಹೊತ್ತಿನವರೆಗೆ ಸರಿಯಾಗಿ ಗಮನಿಸಿದರೆ ಮಾತ್ರ ಕರಡಿಯನ್ನು ಪತ್ತೆ ಹಚ್ಚಲು ಸಾಧ್ಯ. ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೆಂದಾದರೆ ಚಿಂತಿಸಬೇಕಿಲ್ಲ, ಈ ಲೇಖನದ ಅಂತ್ಯದಲ್ಲಿ ಕರಡಿ ಎಲ್ಲಿದೆ ಎಂದು ಗುರುತಿಸಲಾಗಿದೆ.
ನಿಮ್ಮ ಕಣ್ಣಿಗೆ ಸವಾಲೆಳೆಸುವ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದೀಗ ಅಂತದ್ದೇ ಫೋಟೋ ಒಂದು ಹರಿದಾಡುತ್ತಿದ್ದು, ಇದರಲ್ಲಿ ನೀವು ಅಡಗಿರುವ ಕರಡಿಯನ್ನು ಪತ್ತೆ ಹಚ್ಚಬೇಕಿದೆ. ಹದ್ದಿನ ಕಣ್ಣು ನಿಮ್ಮದಾಗಿದ್ದರೆ ಕೇವಲ 7ರಿಂದ 8 ಸೆಕೆಂಡುಗಳಲ್ಲಿ ಕರಡಿಯನ್ನು ಪತ್ತೆ ಹಚ್ಚಬಹುದು . ನೀವು ಚಿತ್ರವನ್ನು ಸರಿಯಾಗಿ ಗಮನಿಸಿದರೆ ಮಾತ್ರ ಕರಡಿ ಎಲ್ಲಿದೆ ಎಂದು ಕಂಡುಹಿಡಿಯಬಹುದಾಗಿದೆ.
ಮೇಲಿನ ಚಿತ್ರದಲ್ಲಿ ಮರಗಳ ನಡುವೆ ಒಂದು ಮನೆಯನ್ನು ಕಾಣಬಹುದು. ಕಾಡಿನ ನಡುವೆ ಇರುವ ಈ ಮನೆಯ ಸುತ್ತ ಮುತ್ತಲಿನ ಯಾವುದೋ ಒಂದು ಜಾಗದಲ್ಲಿ ಕರಡಿ ಅಡಗಿದೆ. ಕೆಲ ಸೆಕೆಂಡುಗಳ ವರೆಗೆ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಆದರೆ ಅಡಗಿರುವ ಕರಡಿಯನ್ನು ಪತ್ತೆ ಹಚ್ಚುವುದು ಅಂದುಕೊಂಡಷ್ಟು ಸುಲಭವಲ್ಲ.
ಇದನ್ನೂ ಓದಿ: ನಿಮ್ಮ ಪಾದಗಳ ಆಕಾರವು ಹೇಳುತ್ತೆ ನಿಮ್ಮ ವ್ಯಕ್ತಿತ್ವ
ನಿಗದಿತ ಸೆಕೆಂಡಿನೊಳಗೆ ನಿಮಗೆ ಅಡಗಿರುವ ಕರಡಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೇ? ನೀವು ಎಷ್ಟೇ ಚಿತ್ರವನ್ನು ದಿಟ್ಟಿಸಿ ನೋಡಿದರೂ ಪತ್ತೆ ಹಚ್ಚಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ. ಈ ಕೆಳಗಿನ ಚಿತ್ರದಲ್ಲಿ ಕರಡಿ ಎಲ್ಲಿದೆ ಎಂದು ಗುರುತಿಸಲಾಗಿದೆ.
ಅಂದಹಾಗೆ, ಇಂದಿನ ಸವಾಲಿನ ಆಟ ನಿಮಗೆ ಇಷ್ಟವಾಯಿತೆ? ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ