AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಸುಖ ನಿದ್ರೆಗೆ ಜಾರಿದ ಕೋತಿ, ಎಷ್ಟು ಮುದ್ದಾಗಿದೆ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಪಕ್ಷಿಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಈ ದೃಶ್ಯಗಳು ನೆಟ್ಟಿಗರ ಹೃದಯವನ್ನು ಗೆಲ್ಲುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುವ ವಿಡಿಯೋದಲ್ಲಿ ಕೋತಿಯೊಂದು ಗಡದ್ದಾಗಿ ನಿದ್ದೆ ಮಾಡುತ್ತಿದೆ. ಪಕ್ಕದಲ್ಲಿ ಕೆಲ ಕೋತಿಗಳಿದ್ದರೂ ಅದ್ಯಾವುದರ ಕ್ಯಾರೇ ಇಲ್ಲದೇ ಬಾಯಿ ತೆರೆದು ಮಲಗಿದೆ. ಈ ವಿಡಿಯೋವೊಂದು ನೆಟ್ಟಿಗರ ಮನಸ್ಸು ಗೆದ್ದಿದ್ದು, ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸಾಯಿನಂದಾ
| Edited By: |

Updated on: Nov 02, 2024 | 4:56 PM

Share

ಸಾಮಾನ್ಯವಾಗಿ ಮನುಷ್ಯನು ಏನಾದ್ರು ಮಾಡಿದ್ರೆ ಸಾಕು, ನೀನೇನು ಕಪಿಯಂತೆ ಆಡುತ್ತೀಯ ಎಂದು ಹೇಳುವುದನ್ನು ಕೇಳಿರಬಹುದು. ಮನುಷ್ಯನಿಗೆ ಮಂಗನಿಗೂ ಹೆಚ್ಚೇನು ವ್ಯತ್ಯಾಸವಿಲ್ಲ ಬಿಡಿ. ಈ ಮಂಗ, ಕೋತಿಗಳು ಕುಚೇಷ್ಟೆಗಳನ್ನು ಮಾಡುತ್ತಿರುತ್ತದೆ. ಅದನ್ನು ನೋಡುವುದೇ ಚಂದ. ಹೀಗಾಗಿ ಈ ಕೋತಿಯನ್ನು ಅತೀ ಹೆಚ್ಚು ಚೇಷ್ಟೆ ಮಾಡುವ ಪ್ರಾಣಿಯೆಂದೇ ಗುರುತಿಸುತ್ತೇವೆ. ಕುಳಿತಲ್ಲಿಯೇ ಕೂರದೆ ಅತ್ತಿಂದ ಇತ್ತ ಹಾರುತ್ತ ಚೇಷ್ಟೆ ಮಾಡುವುದನ್ನು ನೋಡಿರಬಹುದು. ಆದರೆ ಇದೀಗ ಕೋತಿಯೊಂದಿಗೆ ಗಡದ್ದಾಗಿ ನಿದ್ದೆ ಮಾಡುವ ವಿಡಿಯೋವೊಂದು ವೈರಲ್ ಆಗಿದೆ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ‘ಬುಟೆಂಗಿಬಿಡನ್’ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕೋತಿ ಕಲ್ಲುಗಳ ನಡುವೆ ನೆಮ್ಮದಿಯಿಂದ ಮಲಗಿರುವುದನ್ನು ಕಾಣಬಹುದು. ವಿಡಿಯೋ ಆರಂಭದಿಂದಲೂ ಕೋತಿ ಬಾಯಿ ತೆರೆದು ಮಲಗಿದೆ. ಅಲ್ಲೇ ಅನೇಕ ಕೋತಿಗಳು ಮಲಗಿರುವ ಕೋತಿಯ ಸುತ್ತಲೂ ಕುಳಿತಿರುವುದು ಕಂಡುಬರುತ್ತದೆ. ಕೆಲವು ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ, ಇನ್ನು ಕೆಲವು ಆಟವಾಡುತ್ತಿವೆ. ಯಾರು ಏನೇ ಮಾಡಿಕೊಳ್ಳಲಿ ನಾನು ಮಾತ್ರ ನಿದ್ದೆ ಮಾಡುವಂತೆ ಈ ಕೋತಿ ನೆಮ್ಮದಿಯಿಂದ ನಿದ್ರಿಸುತ್ತಿದೆ.

ಇದನ್ನೂ ಓದಿ: ಏನು ಧೈರ್ಯ ಈಕೆಯದು, ಹಗ್ಗದಂತೆ ಹಾವನ್ನು ಹಿಡಿದ ವಿದ್ಯಾರ್ಥಿನಿ

ಈ ವಿಡಿಯೋವನ್ನುವನ್ನು ಹತ್ತೊಂಬತ್ತಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ನೆಟ್ಟಿಗರೊಬ್ಬರು, ‘ ಸೋಮವಾರ ಬಂದರೆ ನಾನು ಹೀಗೆಯೇ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ‘ನನಗೂ ಕೂಡ ಈ ರೀತಿ ನೆಮ್ಮದಿಯಿಂದ ನಿದ್ರಿಸಲು ತುಂಬಾನೇ ಇಷ್ಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಬೇಸಿಗೆ ರಜೆ ಮುಗಿದು, ಮೊದಲ ದಿನ ಶಾಲೆಗೆ ಹೋದಾಗ ಈ ರೀತಿಯೇ ಇರುತ್ತದೆ’ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ