AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video : ಏನು ಧೈರ್ಯ ಈಕೆಯದು, ಹಗ್ಗದಂತೆ ಹಾವನ್ನು ಹಿಡಿದ ವಿದ್ಯಾರ್ಥಿನಿ

ವಿಷಕಾರಿ ಸರ್ಪಗಳೊಂದಿಗೆ ಆಟವಾಡುವುದು ಈಗಿನ ಯುವಕರಿಗೆ ಫ್ಯಾಷನ್ ಆಗಿಬಿಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಹಾಗೂ ಫಾಲ್ಲೋರ್ಸ್ ಗಳಿಗಾಗಿ ಹಾವುಗಳ ಜೊತೆಗೆ ಆಟಗಳನ್ನು ಆಡುತ್ತಾ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಕಾಲೇಜು ಕ್ಯಾಂಪಸ್‌ಗೆ ಹಾವು ನುಗ್ಗಿದೆ. ಯುವತಿಯೊಬ್ಬಳು ಧೈರ್ಯದಿಂದ ಪೊದೆಯೊಳಗೆ ಹೋದ ಹಾವನ್ನು ಹಿಡಿದಿದ್ದಾಳೆ, ಈ ದೃಶ್ಯ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಸಾಯಿನಂದಾ
| Edited By: |

Updated on:Nov 02, 2024 | 12:46 PM

Share

ಸಾಮಾನ್ಯವಾಗಿ ಹುಡುಗಿಯರಿಗೆ ಕ್ರಿಮಿ ಕೀಟಗಳೆಂದರೆ ಭಯ ಹೆಚ್ಚು. ಹಲ್ಲಿ, ಜಿರಳೆಯಂತಹ ಕೀಟವು ಕಣ್ಣಿಗೆ ಬಿದ್ದರೆ ಸಾಕು, ಅಲ್ಲಿಂದ ಓಡಿ ಹೋಗುತ್ತಾರೆ. ಇನ್ನು ಕೆಲವರು ಹುಡುಗಿಯರಿಗೆ ಏನೇ ಬಂದರೂ ಹೆದರೋದೆ ಇಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಯುವತಿಯೊಬ್ಬಳು ಕೂಡ ಅಷ್ಟೇ ಧೈರ್ಯವಂತೆ ಎನ್ನುವುದು ತಿಳಿಯುತ್ತದೆ. ಕಾಲೇಜು ಹುಡುಗಿಯೊಬ್ಬಳು ಅತ್ಯಂತ ಧೈರ್ಯದಿಂದ ನಾಗರಹಾವನ್ನು ಸಲೀಸಾಗಿ ಹಿಡಿದಿದ್ದಾಳೆ. ಮೈ ಜುಮ್ಮ್ ಎನಿಸುವ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

Introvert ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಕಾಲೇಜು ಕ್ಯಾಂಪಸ್‌ಗೆ ದೈತ್ಯಗಾತ್ರದ ನಾಗರಹಾವೊಂದು ನುಗ್ಗಿದೆ. ಅಲ್ಲೇ ಇದ್ದ ವಿದ್ಯಾರ್ಥಿಗಳೆಲ್ಲ ಭಯದಿಂದ ಓಡಿದ್ದಾರೆ. ಆದರೆ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಧೈರ್ಯದಿಂದ ಪೊದೆಯೊಳಗಿದ್ದ ನಾಗರ ಹಾವಿನ ಬಾಲವನ್ನು ಹಿಡಿದು ಹೊರತೆಗೆದಿದ್ದಾಳೆ.

ಇದನ್ನೂ ಓದಿ: ಬಾಲಕಿಯ ಸೂರ್ಯ ನಮಸ್ಕಾರಕ್ಕೆ ಆನಂದ್ ಮಹಿಂದ್ರಾ ಫುಲ್ ಫಿದಾ, ವಿಡಿಯೋ ವೈರಲ್

ಹಾವು ಕೈಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಯುವತಿ ಯಾವುದೇ ಭಯವಿಲ್ಲದೆ ಅದನ್ನು ಬಿಗಿಯಾಗಿ ಹಿಡಿದಿದ್ದಾಳೆ. ವಿಷಕಾರಿ ಹಾವನ್ನು ಹಿಡಿದ ರೀತಿ ನೋಡಿ ಅಲ್ಲಿದ್ದ ವಿದ್ಯಾರ್ಥಿಗಳೆಲ್ಲ ಬೆಚ್ಚಿಬಿದ್ದಿದ್ದಾರೆ. ಈ ವಿಡಿಯೋವು ಎಂಟು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಈ ದೃಶ್ಯವು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ನೆಟ್ಟಿಗರೊಬ್ಬರು, ‘ಏನು ಧೈರ್ಯ ಗುರು ಈಕೆಯದು, ಹಾವು ಹಿಡಿಯುವುದರಲ್ಲಿ ನೈಪುಣ್ಯತೆ ಹೊಂದಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಇಂತಹ ವಿಷಕಾರಿ ಹಾವುಗಳನ್ನು ಹಿಡಿಯಲು ಹೋಗಿ ಜೀವ ಕಳೆದುಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:45 pm, Sat, 2 November 24