Chandrababu Naidu: ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮುತ್ತು ಕೊಡಲು ಯತ್ನಿಸಿದ ಮಹಿಳೆ, ವಿಡಿಯೋ ವೈರಲ್
ಸಿನಿಮಾ ನಾಯಕ, ನಾಯಕಿಯರ ಜತೆಗೆ ರಾಜಕೀಯ ನಾಯಕರಿಗೂ ಅಭಿಮಾನಿಗಳಿದ್ದಾರೆ. ಅವರನ್ನು ಒಮ್ಮೆ ಮುಟ್ಟಬೇಕು, ಅವರ ಜತೆಗೆ ಫೋಟೊ ತೆಗೆಸಿಕೊಳ್ಳಬೇಕು ಎಂದು ಜನರು ಹಾತೊರೆಯುತ್ತಿರುತ್ತಾರೆ. ಅಂಥದ್ದೇ ಘಟನೆಯೊಂದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಮಹಿಳೆಯೊಬ್ಬರು ಮುತ್ತು ಕೊಡಲು ಯತ್ನಿಸಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡುಗೆ ಮಹಿಳೆಯೊಬ್ಬರು ಮುತ್ತುಕೊಡಲು ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಂದ್ರಬಾಬು ನಾಯ್ಡು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಹೂಗುಚ್ಚವನ್ನು ನಾಯ್ಡು ಅವರಿಗೆ ನೀಡಿ ಬಳಿಕ ಮುತ್ತು ಕೊಡಲು ಯತ್ನಿಸಿರುವುದು ಈ ವಿಡಿಯೋದಲ್ಲಿದೆ. ಆದರೆ ನಾಯ್ಡು ಹಾಗೆ ಮಾಡದಂತೆ ಮಹಿಳೆಯನ್ನು ತಡೆದಿದ್ದಾರೆ. ಭದ್ರತಾ ಸಿಬ್ಬಂದಿ ಕೂಡ ಆಕೆಯನ್ನು ಕೂಡಲೇ ತಡೆದಿದ್ದಾರೆ.
ಎಪಿ ಸಿಎಂ ಚಂದ್ರಬಾಬು ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಸುದೀರ್ಘ ಕಾಲ ಸಿಎಂ ಆಗಿರುವ ಚಂದ್ರಬಾಬು ಅಭಿಮಾನಿಗಳಿರುವುದು ಸಹಜ. ಚಂದ್ರಬಾಬು ನಾಯ್ಡುಗೆ ಝಡ್ಪ್ಲಸ್ ಭದ್ರತೆ ಇದೆ. ಅನಕಾಪಲ್ಲಿಯಲ್ಲಿ ನಡೆದ ಘಟನೆ ಇದು. ಪ್ರವಾಸದ ಅಂಗವಾಗಿ ಹಲವು ಟಿಡಿಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಚಂದ್ರಬಾಬು ಅವರನ್ನು ನೋಡಲು ಬಂದಿದ್ದರು. ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಮಹಿಳಾ ಅಭಿಮಾನಿಯೊಬ್ಬರು ಬಾಬು ಭೇಟಿಗೆ ಯತ್ನಿಸಿದ್ದಾರೆ. ಚಂದ್ರಬಾಬುವನ್ನು ಭೇಟಿಯಾಗಲು ಸುತ್ತಲಿನ ಸೆಕ್ಯುರಿಟಿಯನ್ನು ತಪ್ಪಿಸಿ ಅವರ ಬಳಿಗೆ ಬಂದಿದ್ದರು.
ಆಕೆಗೆ ಮುತ್ತು ಕೊಡುವ ಯತ್ನಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ, ತನ್ನ ನೆಚ್ಚಿನ ನಾಯಕನ ಮೇಲಿನ ಪ್ರೀತಿ ಅಭಿಮಾನ ತೋರುವ ಪ್ರಯತ್ನ ಇದಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಈ ವಿಚಾರವಾಗಿ ಮಹಿಳೆ ಮಾತನಾಡಿ, ಈ ದಿನವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ, ಟಿವಿಯಲ್ಲಿ ನಾಯಕನನ್ನು ನೋಡುತ್ತಿದ್ದೆ, ನೆಚ್ಚಿನ ನಾಯಕನನ್ನು ಖುದ್ದಾಗಿ ಕಂಡರೆ ಸಾಕು ಎಂದು ಅಂದುಕೊಂಡಿದ್ದೆ ಆದರೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದಿದ್ದಾರೆ.
ಮತ್ತಷ್ಟು ಓದಿ:ದಕ್ಷಿಣ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳ, ಹೆಚ್ಚು ಮಕ್ಕಳನ್ನು ಹೊಂದುವಂತೆ ಯುವಕರಿಗೆ ಚಂದ್ರಬಾಬು ನಾಯ್ಡು ಸಲಹೆ
ಇಂಥದ್ದೇ ಘಟನೆ ಕರ್ನಾಟಕದಲ್ಲೂ ನಡೆದಿತ್ತು 2016ರಲ್ಲಿ ಬೆಂಗಳೂರಿನಲ್ಲಿ ಕುರುವ ಸಮಾಜ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳೆಯೊಬ್ಬರು ವೇದಿಕೆಯ ಮೇಲೆ ಕೆನ್ನೆಗೆ ಮುತ್ತು ಕೊಟ್ಟಿದ್ದರು. ಆ ಮಹಿಳೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಗಿರಿಜಾ ಶ್ರೀನಿವಾಸ್ ಆಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ