AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಗಂಡನ ಕೈಗೆ ಸಿಕ್ಕಿ ಬಿದ್ದ ಹೆಂಡ್ತಿ; ರೈಲ್ವೆ ಸ್ಟೇಷನ್‌ನಲ್ಲಿ ನಡೆಯಿತು ಹೈ ಡ್ರಾಮ

ವಿವಾಹೇತರ ಸಂಬಂಧಗಳ ಸುದ್ದಿಗಳು ಆಗಾಗ್ಗೆ ಕೇಳುತ್ತಿರುತ್ತೇವೆ. ಇದೀಗ ಇಲ್ಲೊಂದು ಇಂತಹದ್ದೇ ಅಚ್ಚರಿಯ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ರೈಲ್ವೆ ನಿಲ್ದಾಣದಲ್ಲಿ ತನ್ನ ಪತಿರಾಯನ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾಳೆ. ಬಳಿಕ ಮೂರು ಜನರ ನಡುವೆ ಭಾರೀ ಫೈಟ್‌ ಏರ್ಪಟ್ಟಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಗಂಡನ ಕೈಗೆ ಸಿಕ್ಕಿ ಬಿದ್ದ ಹೆಂಡ್ತಿ; ರೈಲ್ವೆ ಸ್ಟೇಷನ್‌ನಲ್ಲಿ ನಡೆಯಿತು ಹೈ ಡ್ರಾಮ
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on:Nov 01, 2024 | 5:56 PM

Share

ಇತ್ತೀಚಿನ ದಿನಗಳಲ್ಲಿ ಮದುವೆ, ಮಕ್ಕಳಾದ ಬಳಿಕವೂ ವಿವಾಹಿತ ಮಹಿಳೆ ಪರ ಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವ, ಗಂಡನಾದವನು ಮನೆಯಲ್ಲಿ ಹೆಂಡ್ತಿ ಇದ್ದರೂ ಬೇರೊಂದು ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಂತಹ ಸುದ್ದಿಗಳು ಸಾಕಷ್ಟು ಕೇಳಿ ಬರುತ್ತಿರುತ್ತವೆ. ಅನೈತಿಕ ಸಂಬಂಧ ಕಾರಣ ಮನೆ ಜಗಳ ಬೀದಿಗೆ ರಂಪವಾದ ಅದೆಷ್ಟೋ ಘಟನೆಗಲ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದಾಗ ಆಕೆ ರೈಲ್ವೇ ನಿಲ್ದಾಣದಲ್ಲಿ ತನ್ನ ಗಂಡನ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾಳೆ. ಬಳಿಕ ಮೂರು ಜನರ ನಡುವೆ ಭಾರೀ ಫೈಟ್‌ ಏರ್ಪಟ್ಟಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸುತ್ತಿದ್ದ ಪತ್ನಿಯನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾನೆ. ಹೌದು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಿಆರ್‌ಪಿಎಫ್‌ ಜವಾನನಾಗಿ ಕಾರ್ಯನಿರ್ವಹಿಸುತ್ತಿದ್ದ ಈ ವ್ಯಕ್ತಿ, ತನ್ನ ಪತ್ನಿ ಆಕೆಯ ಪ್ರಿಯಕರನೊಂದಿಗೆ ಓಡಿಹೋಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ರೆಡ್‌ ಹ್ಯಾಂಡ್‌ ಆಗಿ ಹಿಡಿದಿದ್ದಾನೆ. ಪೊಲೀಸ್‌ ಪೇದೆಯಾಗಿ ಕಾರ್ಯನಿವರ್ಹಿಸುತ್ತಿದ್ದ ಈ ಮಹಿಳೆ ಒಂದು ತಿಂಗಳಿನ ಹಿಂದೆಯೇ ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಪೊಲೀಸ್‌ ದೂರು ನೀಡಿ ಆಕೆಯನ್ನು ಹುಡುಕುವ ಪ್ರಯತ್ನದಲ್ಲಿ ನಿರತರಾಗಿದ್ದನು ಈ ವ್ಯಕ್ತಿ. ಅಕ್ಟೋಬರ್‌ 31 ರಂದು ಆಕೆ ಪಾಟ್ನಾ-ಸಿಂಗ್ರೌಲಿ ರೈಲಿನ ಮೂಲಕ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ಪ್ರಯತ್ನಿಸಿದ್ದು, ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪಾಟ್ನಾ ಜಂಕ್ಷನ್‌ಗೆ ಓಡಿ ಬಂದ ವ್ಯಕ್ತಿ ರೈಲ್ವೆ ಸ್ಟೇಷನ್‌ನಲ್ಲಿ ತನ್ನ ಹೆಂಡತಿ ಪರ ಪುರುಷನೊಂದಿಗೆ ಇರುವುದನ್ನು ಕಂಡು ಕೋಪಗೊಂಡು ದೊಡ್ಡ ರಂಪಾಟವನ್ನೇ ಮಾಡಿದ್ದಾನೆ. ಕೋಪದಲ್ಲಿ ಆ ವ್ಯಕ್ತಿ ಪತ್ನಿಯ ಪ್ರಿಯಕರನಿಗೆ ಹಿಗ್ಗಾಮುಗ್ಗಾ ಥಳಿಸಿ ನಂತರ ತನ್ನ ಹೆಂಡತಿಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾನೆ. ಆ ತಕ್ಷಣವೇ ಪ್ರಿಯಕರ ಭಯದಿಂದ ಅಲ್ಲಿಂದ ಕಾಲ್ಕಿತ್ತಿದ್ದಾನೆ.

gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸಿಆರ್‌ಪಿಎಫ್ ಜವಾನ ಮತ್ತು ಆತನ ಪತ್ನಿಯ ಪ್ರಿಯಕರನ ನಡುವೆ ಹೈ ವೋಲ್ಟೇಜ್‌ ಜಗಳ ನಡೆಯುವ ದೃಶ್ಯವನ್ನು ಕಾಣಬಹುದು. ಪತ್ನಿ ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಅಲ್ಲಿಗೆ ಎಂಟ್ರಿ ಕೊಟ್ಟ ಆ ವ್ಯಕ್ತಿ ಕೋಪದಿಂದ ಎಲ್ಲರ ಮುಂದೆಯೇ ತನ್ನ ಪತ್ನಿಯ ಪ್ರಿಯಕರನಿಗೆ ಹಿಗ್ಗಾಮುಗ್ಗಾ ಥಲಿಸಿದ್ದಾನೆ. ಬಳಿಕ ಪತ್ನಿಯನ್ನು ಅಲ್ಲಿಂದ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಇದು ಯಾರು ಹೇಳಿ ನೋಡೋಣ? ಇಡೀ ಜಗತ್ತು ಈ ವ್ಯಕ್ತಿಗೆ ಭಯ ಪಡುತ್ತದೆ

ಆಗಸ್ಟ್‌ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹ ಮಹಿಳೆ ಸಮಾಜಕ್ಕೆ ಕಳಂಕʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೆಲವರು ಮದುವೆಯಾದ ಬಳಿಕವೂ ಜವಬ್ದಾರಿಯನ್ನು ಮರೆತು ವಿವಾಹೇತರ ಸಂಬಂಧದಲ್ಲಿ ತೊಡಗಿಕೊಳ್ಳುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಕನ್ನಡ ರಾಜ್ಯೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Fri, 1 November 24