Viral: ಇದು ಯಾರು ಹೇಳಿ ನೋಡೋಣ? ಇಡೀ ಜಗತ್ತು ಈ ವ್ಯಕ್ತಿಗೆ ಭಯ ಪಡುತ್ತದೆ
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಹೀರೋ-ಹೀರೋಯಿನ್, ರಾಜಕಾರಣಿಗಳ ಕೆಲವೊಂದು ಬಾಲ್ಯದ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಫೋಟೋವೊಂದು ಭಾರೀ ವೈರಲ್ ಆಗುತ್ತಿದ್ದು, ಆ ಚಿತ್ರದಲ್ಲಿರುವ ಪುಟ್ಟ ಬಾಲಕ ಯಾರು ಎಂಬುದನ್ನು ನೀವು ಗೆಸ್ ಮಾಡ್ತಿರಾ?
ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆಲೆಬ್ರಿಟಿಗಳ ಬಾಲ್ಯದ ಪೋಟೋಗಳು ವೈರಲ್ ಆಗುತ್ತಿವೆ. ಕೆಲವೊಮ್ಮೆ ರಾಜಕಾರಣಿಗಳ ಫೋಟೋಗಳು ಕೂಡಾ ವೈರಲ್ ಆಗುತ್ತಿರುತ್ತವೆ. ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸೆಲೆಬ್ರಿಟಿಗಳ ಈ ಬಾಲ್ಯದ ಫೋಟೋಗಳನ್ನು ಕಂಡು ಇದ್ಯಾರಪ್ಪಾ, ಇವರನ್ನು ಎಲ್ಲೋ ನೋಡಿದಂಗಿದ್ಯಲ್ಲಾ ಎಂದು ನೆಟ್ಟಿಗರು ತಲೆ ಕೆರೆದುಕೊಳ್ಳುತ್ತಾರೆ. ಇದೀಗ ಅಂತಹದ್ದೇ ಫೋಟೋವೊಂದು ಸಖತ್ ವೈರಲ್ ಆಗಿದ್ದು, ಆ ಚಿತ್ರದಲ್ಲಿರುವ ಪುಟ್ಟ ಬಾಲಕ ಯಾರು ಎಂಬುದನ್ನು ನೀವು ಗೆಸ್ ಮಾಡಿ.
ಯುನಿಫಾರ್ಮ್ ತೊಟ್ಟು ಕೈಯಲ್ಲೊಂದು ಪೆನ್ ಹಿಡಿದು ಗತ್ತು ಗಾಂಭೀರ್ಯದಿಂದ ತನ್ನ ಶಿಕ್ಷಕಿಯ ಮುಂದೆ ಕುಳಿತಿರುವ ಈ ಪುಟ್ಟ ಪೋರ ಯಾರೆಂದು ಗೆಸ್ ಮಾಡಿದ್ರಾ? ಈ ಫೋಟೋದಲ್ಲಿರುವ ಬಾಲಕ ಈಗ ಒಬ್ಬ ರಾಜಕೀಯ ನಾಯಕನೂ ಹೌದು. ಈ ವಿವಾದಾತ್ಮಕ ನಾಯಕನ ಹೆಸರನ್ನು ಕೇಳಿದ್ರೆಯೇ ಜನ ತಲೆ ಕೆಡಿಸಿಕೊಳ್ಳುತ್ತಾರೆ.
ಈ ಫೋಟೋದಲ್ಲಿ ಕಾಣುತ್ತಿರುವ ದುಂಡು ಮುಖದ ಪೋರ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ಈ ಸರ್ವಾಧಿಕಾರಿ ತನ್ನ ದೇಶದಲ್ಲಿ ವಿಚಿತ್ರ ಕಾನೂನುಗಳನ್ನು ಪರಿಚಯಿಸುವ ಮೂಲಕ ಅಲ್ಲಿನ ಪ್ರಜೆಗಳು ತಪ್ಪು ಮಾಡಿದ್ರೆ ಅವರಿಗೆ ಕಠಿಣ ಶಿಕ್ಷೆಯನ್ನು ನೀಡುವ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಪ್ಪು ಮಾಡಿದವರಿಗೆ ಕಿಮ್ ಜಾಂಗ್ ಉನ್ ಮುಲಾಜಿಲ್ಲದೆ ಕಠಿಣ ಶಿಕ್ಷೆಯನ್ನು ನೀಡುತ್ತಾರೆ. ಇದೇ ಕಾರಣದಿಂದ ಹೆಚ್ಚಿನವರು ಉತ್ತರ ಕೊರಿಯಾದ ಹೆಸರು ಕೇಳಿದ್ರೆಯೇ ಭಯ ಬೀಳ್ತಾರೆ. ಇದೀಗ ಈ ನಾಯಕನ ಬಾಲ್ಯದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
North Korea’s current leader Kim Jong-un with his first teacher, 1990 pic.twitter.com/izSIqsDaqm
— Historic Vids (@historyinmemes) October 30, 2024
1990 ರಲ್ಲಿ ತೆಗೆದಂತಹ ಫೋಟೋ ಇದಾಗಿದೆ. historyinmemes ಹೆಸರಿನ ಎಕ್ಸ್ ಖಾತೆಯಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಬಾಲ್ಯದ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, “ಉತ್ತರ ಕೊರಿಯಾದ ಪ್ರಸ್ತುತ ನಾಯಕ ಕಿಮ್ ಜಾಂಗ್ ಉನ್ ಅವರ ಮೊದಲ ಶಿಕ್ಷಕಿಯೊಂದಿಗೆ” ಎಂಬ ಶೀರ್ಷಿಕೆನ್ನು ಬರೆದುಕೊಳ್ಳಲಾಗಿದೆ. ಈ ಚಿತ್ರದಲ್ಲಿ ಆರು ವರ್ಷ ವಯಸ್ಸಿನ ಕಿಮ್ ಜಾಂಗ್ ಉನ್ ಯುನಿಫಾರ್ಮ್ ತೊಟ್ಟು ತನ್ನ ಮೊದಲ ಶಿಕ್ಷಕಿಯ ಮುಂದೆ ಕುಳಿತು ಪೆನ್ನಿನಲ್ಲಿ ಏನೋ ಬರೆಯುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಜಪಾನಿಗೆ ಮೊದಲ ಬಾರಿಗೆ ಆನೆ ಕಳಿಸಿದ್ದು ನಮ್ಮ ಮೈಸೂರಿನಿಂದ
ಅಕ್ಟೋಬರ್ 30 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 21 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಫೋಟೋ ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತ ಸಣ್ಣ ವಯಸ್ಸಿನಿಂದಲೇ ಜಗತ್ತನ್ನು ಗೆಲ್ಲುವ ತಂತ್ರವನ್ನು ರೂಪಿಸುತ್ತಿದ್ದʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.
ಕನ್ನಡ ರಾಜ್ಯೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Fri, 1 November 24