Viral News: ಶಿವನೊಂದಿಗೆ ಜೋಗಿನಿಯರು, ತೃತೀಯಲಿಂಗಿಗಳ ವಿವಾಹ! ಈ ಆಚರಣೆ ಯಾಕೆ? 

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 18, 2024 | 11:39 AM

ನಿನ್ನೆ ದೇಶದೆಲ್ಲೆಡೆ ಶ್ರೀರಾಮ ನವಮಿ ಹಬ್ಬವನ್ನು ಶ್ರದ್ಧೆ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಅದೇ ರೀತಿ ತೆಲಂಗಾಣದ ವೇಮುಲವಾಡದ  ಶ್ರೀರಾಜರಾಜೇಶ್ವರಿ ಸ್ವಾಮಿ ದೇವಾಲಯದಲ್ಲೂ ಈ ಹಬ್ಬವನ್ನು ಬಹಳ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.  ಇಲ್ಲಿ ರಾಮನವಮಿಯ ದಿನ ಸೀತಾರಾಮ ಕಲ್ಯಾಣೋತ್ಸವದ ಜೊತೆಗೆ ಜೋಗಿನಿಯರು ಮತ್ತು ತೃತಿಯ ಲಿಂಗಿಗಳು ಶಿವನೊಂದಿಗೆ ವಿವಾಹವಾಗುವ ಸಂಪ್ರದಾಯವೂ ರೂಢಿಯಲ್ಲಿದೆ. 

Viral News: ಶಿವನೊಂದಿಗೆ ಜೋಗಿನಿಯರು, ತೃತೀಯಲಿಂಗಿಗಳ ವಿವಾಹ! ಈ ಆಚರಣೆ ಯಾಕೆ? 
ವೈರಲ್​​ ಫೋಟೋ
Follow us on

ಏಪ್ರಿಲ್ 17 ರಂದು ದೇಶದೆಲ್ಲೆಡೆ ಶ್ರೀರಾಮನವಮಿ ಹಬ್ಬವನ್ನು ಶ್ರದ್ಧೆ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ದಿನ ಶ್ರೀರಾಮ, ಆಂಜನೇಯ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಶ್ರೀರಾಮ ಪಟ್ಟಾಭಿಷೇಕ, ಸೀತಾ ಕಲ್ಯಾಣ, ರಾಮನಾಮ ಸ್ಮರಣೆ  ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭನೆಯಿಂದ ನಡೆಯಿತು.  ಅದೇ ರೀತಿ    ತೆಲಂಗಾಣದ ವೇಮುಲವಾಡದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿಯೂ  ಶ್ರೀ ರಾಮನವಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ವಿಶೇಷವೇನೆಂದರೆ ಇಲ್ಲಿ ಸೀತಾರಾಮ ಕಲ್ಯಾಣೋತ್ಸವದ ಜೊತೆಗೆ ಶಿವನೊಂದಿಗೆ ಜೋಗಿನಿಯರು ಹಾಗೂ ತೃತೀಯಲಿಂಗಿಗಳ  ಕಲ್ಯಾಣೋತ್ಸವವನ್ನೂ ನೆರವೇರಿಸಲಾಯಿತು.

ಹೌದು ಈ ದೇವಾಲಯದಲ್ಲಿ ಪ್ರತಿವರ್ಷ  ಶ್ರೀರಾಮನವಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾ ಬರಲಾಗುತ್ತಿದ್ದು,  ಇಲ್ಲಿ ರಾಮನವಮಿ ಹಬ್ಬದ ದಿನ ಸೀತಾರಾಮ ಕಲ್ಯಾಣದ ಜೊತೆಗೆ ಜೋಗಿನಿಯರು ಮತ್ತು ತೃತೀಯ ಲಿಂಗಿಗಳ ಕಲ್ಯಾಣೋತ್ಸವವನ್ನೂ ನೆರವೇರಿಸಲಾಗುತ್ತದೆ.

ಜೋಗಿನಿಯರು ಶಿವನನ್ನು ತಮ್ಮ ಪ್ರಾಣನಾಥ ಎಂದು ಭಾವಿಸಿ ಶಿವವನ್ನು ವಿವಾಹವಾಗುವ ಸಂಪ್ರದಾಯ ಈ ದೇವಾಲಯದಲ್ಲಿದೆ. ಜೋಗಿನಿಯರು ತಮ್ಮನ್ನು ಶಿವನ ವಧುಗಳೆಂದು ಪರಿಗಣಿಸಿ, ಮುಖಕ್ಕೆ ಅರಶಿನ, ಹಣೆಗೆ ಸಿಂಧೂರ, ಹೊಸ ಸೀರೆ, ತಾಮ್ರದ ಕಾಲ್ಗೆಜ್ಜೆ, ಆಭರಣಗಳನ್ನು ಧರಿಸಿ ಮಧುಮಗಳಂತೆ ಸಿಂಗಾರಗೊಂಡು ಕಲ್ಯಾಣೋತ್ಸವದ  ವಿಧಾನಗಳ ಸಂದರ್ಭದಲ್ಲಿಶಿವನ ಪ್ರತಿರೂಪವಾದ ತ್ರಿಶೂಲನ್ನು ಕೈಯಲ್ಲಿ ಹಿಡಿದು, ಶ್ರೀರಾಮ ಸೀತಾದೇವಿಗೆ ತಾಳಿ ಕಟ್ಟುವ ಸಮಯದಲ್ಲಿ ಜೋಗಿನಿಯರು ಮತ್ತು ತೃತೀಯ ಲಿಂಗಿಗಳು ಒಬ್ಬರಿಗೊಬ್ಬರು ಅಕ್ಷತೆಯನ್ನು ಹಾಕಿ ನಂತರ ರುದ್ರಾಕ್ಷಿ ಮಾಲೆಯನ್ನು ಕೊರಳಿಗೆ ಧರಿಸುತ್ತಾರೆ. ಈ ಸಮಾರಂಭಕ್ಕೆ ಲಿಂಗಧಾರಣೆ ಎಂದು ಕೂಡಾ ಕರೆಯುತ್ತಾರೆ.

ಇದನ್ನೂ ಓದಿ: ಬೈಕ್​ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ದೂರ ಎಳೆದೊಯ್ದ ಲಾರಿ, ಎದೆ ಝೆಲ್ಲೆನಿಸುವ ವಿಡಿಯೋ

ಬಹಳ ಹಿಂದಿನಿಂದಲೂ ಈ ಆಚರಣೆ,  ಸಂಪ್ರದಾಯ ಇಲ್ಲಿ ರೂಢಿಯಲ್ಲಿದ್ದು, ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ರಾಮ ನವಮಿಯ ದಿನ ಇಲ್ಲಿಗೆ ಜೋಗಿನಿಯರು, ತೃತೀಯ ಲಿಂಗಿಗಳು ಆಗಮಿಸುತ್ತಾರೆ. ಮಾಂಗಲ್ಯ ಧಾರಣೆಯ ನಂತರ ಜೋಗಿನಿಯರು ಸೀತಾರಾಮರಿಗೆ ರೇಷ್ಮೆ ವಸ್ತ್ರವನ್ನು ಅರ್ಪಿಸುವ ವಾಡಿಕೆ ಕೂಡಾ ಇಲ್ಲಿ ಇದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ