Stress Buster : ಶಾಲೆ ಮುಗಿಯುವತನಕ ದೇಹಕ್ಕೆ ವ್ಯಾಯಾಮವಿರುತ್ತದೆ. ಕಾಲೇಜು ಮುಗಿದು ಉದ್ಯೋಗಕ್ಕೆ ಸೇರುತ್ತಿದ್ದಂತೆ ಮೈ ಜಡತ್ವಕ್ಕಿಳಿಯುತ್ತದೆ. ದಿನಗಟ್ಟಲೇ ಆಫೀಸಿನಲ್ಲಿ ಸ್ಕ್ರೀನ್ ಮುಂದೆ ಕುಳಿತು ಕೆಲಸ ಮಾಡುವುದು ಅನಿವಾರ್ಯವಾದಾಗ ಮತ್ತು ಇದರೊಂದಿಗೆ ಡೆಡ್ಲೈನ್ನ ಒತ್ತಡವೂ ಸೇರಿದಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಿಗಡಾಯಿಸಲಾರಂಭಿಸುತ್ತದೆ. ಈ ಕಾರಣಕ್ಕೆ ಕೆಲ ಕಂಪೆನಿಗಳು ತಮ್ಮ ಉದ್ಯೋಗಿಗಳ ಉತ್ತಮ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಜಿಮ್ ತರಬೇತುದಾರನ್ನು ನೇಮಿಸಿಕೊಂಡಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ಮಾತ್ರ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು ಭಿನ್ನವೂ ಮತ್ತು ವಿಶೇಷವೂ ಆಗಿದೆ. ಭಾಂಗ್ರಾ (Bhangra) ನೃತ್ಯ ತರಬೇತುದಾರರೊಬ್ಬರು ಕಂಪೆನಿಯ ಉದ್ಯೋಗಿಗಳಿಗೆ ಈ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ.
‘ಇಂಥ ಆಫೀಸು ಸಿಗಬೇಕು’ ಎಂಬ ಒಕ್ಕಣೆಯೊಂದಿಗೆ ಕಲಾವಿದ ಸಾಹಿಲ್ ಶರ್ಮಾ ಇದನ್ನು ಇನ್ಸ್ಟಾನಲ್ಲಿ ಹಂಚಿಕೊಂಡಿದ್ದಾರೆ. ಶರ್ಮಾ ಕಂಪೆನಿಯೊಂದರ ಉದ್ಯೋಗಿಗಳಿಗೆ ಭಾಂಗ್ರಾ ನೃತ್ಯ ಹೇಳಿಕೊಡುತ್ತಿದ್ದಾರೆ. ಉದ್ಯೋಗಿಗಳು ಶಾಲಾಮಕ್ಕಳಂತೆ ಮೈಚಳಿ ಬಿಟ್ಟು ನರ್ತಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಸ್ಫೂರ್ತಿಗೊಂಡಿದ್ದಾರೆ.
ಇದನ್ನೂ ಓದಿ : Viral: ಅಮೇಝಾನ್; ಆರ್ಡರ್ ಮಾಡದೆಯೂ 100ಕ್ಕೂ ಹೆಚ್ಚು ಪಾರ್ಸೆಲ್ ಮಹಿಳೆಯನ್ನು ತಲುಪಿದಾಗ
ಈ ವಾತಾವರಣ ನನಗೆ ಇಷ್ಟವಾಗುತ್ತಿದೆ. ಇಂಥ ಕಂಪೆನಿಯಲ್ಲಿ ನಾನು ಉಚಿತವಾಗಿ ಕೆಲಸ ಮಾಡಲು ಇಚ್ಛಿಸುತ್ತಿದ್ದೇನೆ ಎಂದು ಒಬ್ಬರು. ನಿಜಕ್ಕೂ ಇದು ಸ್ಟ್ರೆಸ್ ಬಸ್ಟರ್, ಎಲ್ಲ ಆಫೀಸುಗಳಲ್ಲಿಯೂ ಇಂಥ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕು ಎಂದು ಇನ್ನೊಬ್ಬರು. ನನಗೂ ಇಂಥ ಆಫೀಸು ಬೇಕು ಎಂದು ಮತ್ತೊಬ್ಬರು. ನಾನು ಈ ಸೆಷನ್ ಅನ್ನು ನಿಜಕ್ಕೂ ಎಂಜಾಯ್ ಮಾಡಿದೆ, ಕೆಲಸ ಮಾಡಲು ಇದು ನನಗೆ ಚೈತನ್ಯವನ್ನು ತಂದುಕೊಟ್ಟಿತು ಎಂದಿದ್ದಾರೆ ಈ ಕಂಪೆನಿಯ ಉದ್ಯೋಗಿಯೊಬ್ಬರು.
ಇದನ್ನೂ ಓದಿ : Viral Video;ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ; 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ
ಮೂರು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಸುಮಾರು 3 ಮಿಲಿಯನ್ ಜನರು ನೋಡಿದ್ದಾರೆ. 1.7 ಲಕ್ಷದಷ್ಟು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:26 am, Tue, 1 August 23