Viral Video: ಮಮ್ಮೀ ನಾ ಡಿಗ್ರೀ ಪಾಸಾದೆ; ವೇದಿಕೆಯ ಮೇಲೆಯೇ ಕೂಗಿದ ಮಗರಾಯ

Mother : ''ಭಾರತೀಯರಿಗೆ ತಾಯಿ ಎನ್ನುವುದೊಂದು ಗೀಳು! ಅವನ ಕೂಗಿಗೆ ಕೆನಡಾದಲ್ಲಿ ಯಾರಾದರೂ ಪ್ರತಿಕ್ರಿಯಿಸಿದರಾ? ಅವ ಹೇಳಿದ ವಾಕ್ಯವನ್ನೇ ಇಂಗ್ಲಿಷಿಗೆ ಅನುವಾದಿಸಿದರೆ ಹೇಗಿರುತ್ತದೆ?'' ಅಂತೆಲ್ಲ ಪ್ರತಿಕ್ರಿಯಿಸುತ್ತಿದ್ಧಾರೆ ನೆಟ್ಟಿಗರು.

Viral Video: ಮಮ್ಮೀ ನಾ ಡಿಗ್ರೀ ಪಾಸಾದೆ; ವೇದಿಕೆಯ ಮೇಲೆಯೇ ಕೂಗಿದ ಮಗರಾಯ
ನಾ ಡಿಗ್ರೀ ಪಾಸಾದೆ ಎಂದು ವೇದಿಕೆಯ ಮೇಲೆಯೇ ಕೂಗಿದ ವಿದ್ಯಾರ್ಥಿ

Updated on: Jul 10, 2023 | 1:13 PM

Convocation : ಪದವಿ, ಸ್ನಾತಕೋತ್ತರ ಪದವಿ ಎಂದರೆ ಜೀವನದ ಮಹತ್ತರ ಘಟ್ಟ. ಅನೇಕರು ರ್ಯಾಂಕ್​ ಬರಲಿಲ್ಲ, ಕಡಿಮೆ ಮಾರ್ಕ್ಸ್​ ಬಂತು, ಜಸ್ಟ್​ ಪಾಸ್​ ಅಂತೆಲ್ಲ ಬೇಸರ ಮಾಡಿಕೊಳ್ಳುವುದುಂಟು. ಆದರೆ ಈ ವಿದ್ಯಾರ್ಥಿ (Student) ಮಾತ್ರ ಪದವಿ ಪ್ರದಾನ ಸಮಾರಂಭದ ವೇದಿಕೆಯ ಮೇಲೆ ಎರಡೂ ಕೈಗಳನ್ನು ಚಾಚಿ, ‘ಮಮ್ಮೀ ನಾ ಪಾಸಾದೆ’  ಎಂದು ಜೋರಾಗಿ ಕೂಗಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರನೇಕರು ಉರುಳಾಡಿ ನಗುತ್ತಿದ್ದಾರೆ.

ಜೂನ್ 22 ರಂದು ಇನ್ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 28 ಮಿಲಿಯನ್​ ಜನರಿಂದ ವೀಕ್ಷಿಸಲ್ಪಟ್ಟಿದೆ. ಸುಮಾರು 5 ಮಿಲಿಯನ್​ ಜನರು ಇದನ್ನು ಇಷ್ಟಪಟ್ಟಿದ್ದಾರೆ. ಸಹಸ್ರಾರು ಜನರು ತಮಗನ್ನಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಈ ವ್ಯಕ್ತಿ ಹೀಗೆ ವೇದಿಕೆಯ ಮೇಲೆ ಸಂಭ್ರಮಿಸುತ್ತಾನೆಂದು ಯಾರಾದರೂ ಊಹಿಸಿದ್ದಿರೇ? ಎಂದು ಕೇಳಿದ್ಧಾರೆ ಕೆಲವರು. ಕೆನಡಾದಲ್ಲಿ ​ಇದೊಂದು ಪಾಸ್ ಔಟ್​ ಸಂಭ್ರಮ ಎಂದಿದ್ದಾರೆ ಒಬ್ಬರು. ವೈದ್ಯಕೀಯ ಓದುತ್ತಿರುವ ಸ್ನೇಹಿತರನ್ನು ಟ್ಯಾಗ್ ಮಾಡಿ ನಿಮ್ಮ ಪದವಿ ಪ್ರದಾನ ಸಮಾರಂಭದಲ್ಲಿ ನೀವು ಹೀಗೆಯೇ ಮಾಡುತ್ತೀರೇ? ಎಂದು ಕೇಳಿದ್ಧಾರೆ ಹಲವಾರು ಜನ.

ಇದನ್ನೂ ಓದಿ : Viral Video: ತಮಿಳಿನ ”ಟಮ್ ಟಮ್”ಧಾಟಿಯಲ್ಲಿ ಟೊಮ್ಯಾಟೋ ಗೀತೆ

ಗಿಲ್ ಸಹಾಬ್​ ನಿಮ್ಮ ಜೀವನದಲ್ಲಿ ಮತ್ತಷ್ಟು ಸಿಹಿ ಉಕ್ಕಲಿ, ನೀವು ಇನ್ನಷ್ಟು ಹೀಗೆ ಸಂಭ್ರಮಿಸುತ್ತ ಇರಿ ಎಂದು ಬಹುಪಾಲು ಜನರು ಹಾರೈಸಿದ್ದಾರೆ. ಹೀಗೆ ಅವರು ಸಂಭ್ರಮಿಸುವ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಅತಿಥಿಗಳ ಕೈಕುಲುಕುವುದನ್ನೇ ಮರೆತಿದ್ದರೇನೋ ಎಂದಿದ್ದಾರೆ ಒಬ್ಬರು. ಆಯ್ತು ಇನ್ನು ಟ್ರಕ್ ಓಡೀಸಣ್ಣಾ ಎಂದು ಕಾಲೆಳೆದಿದ್ದಾರೆ ಕೆಲವರು. ಮನೆ ಪಕ್ಕದ ಹುಡುಗಿ ಶೇ. 98. ನೀನು ಜಸ್ಟ್ ಪಾಸ್ ಮನೆಗೆ ಬರಬೇಡ ಎಂದು ಮಗನಿಗೆ ತಾಯಿ ಹೇಳಿದರೆ? ಎಂದು ಊಹೆ ಮಾಡಿದ್ದಾರೆ ಮತ್ತೊಬ್ಬರು.

ಪದವಿ ಪಡೆದಾಗ ನೀವು ಆ ಕ್ಷಣಗಳನ್ನು ಹೇಗೆ ಸಂಭ್ರಮಿಸಿದ್ದೀರಿ? ಪ್ರತಿಕ್ರಿಯಿಸಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 1:12 pm, Mon, 10 July 23