Viral Video: ಸುರೇಶ್ ರೈನಾ ಎಷ್ಟು ಸಿಂಪಲ್ ನೋಡಿ; ಬೀದಿ ಬದಿಯಲ್ಲಿ ನೇರಳೆ ಹಣ್ಣು ಖರೀದಿಸಿದ ಮಾಹಿ ಬೆಸ್ಟ್ ಫ್ರೆಂಡ್

| Updated By: ಅಕ್ಷಯ್​ ಪಲ್ಲಮಜಲು​​

Updated on: May 01, 2024 | 11:37 AM

ಸ್ಟಾರ್ ನಟ, ನಟಿಯರು ಅಥವಾ ಕ್ರಿಕೆಟಿಗರು ಸಿಂಪಲ್ ಆಗಿದ್ರೆ ಅಭಿಮಾನಿಗಳಿಗೆ ಅವರು ಹೆಚ್ಚು ಇಷ್ಟವಾಗ್ತಾರೆ.  ಅದೇ ರೀತಿ ಇದೀಗ  ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಅವರ ಸರಳತೆಯ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,  ಮುಂಬೈ ನಗರದ ಬೀದಿ ಬದಿ ವ್ಯಾಪಾರಿಯೊಬ್ಬರ ಬಳಿ ನೇರಳೆ ಹಣ್ಣನ್ನು ಖರೀದಿಸುವಂತಹ ದೃಶ್ಯವನ್ನು ಕಂಡು ರೈನಾ ನೀವೆಷ್ಟು ಸಿಂಪಲ್ ಅಲ್ವಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Viral Video: ಸುರೇಶ್ ರೈನಾ ಎಷ್ಟು ಸಿಂಪಲ್ ನೋಡಿ; ಬೀದಿ ಬದಿಯಲ್ಲಿ ನೇರಳೆ ಹಣ್ಣು ಖರೀದಿಸಿದ ಮಾಹಿ ಬೆಸ್ಟ್ ಫ್ರೆಂಡ್
Follow us on

ಟೀಮ್ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್ ಗಳ ಪೈಕಿ ಸುರೇಶ್ ರೈನಾ ಕೂಡಾ ಒಬ್ಬರು. ಇವರಂದ್ರೆ ಅದೆಷ್ಟೋ ಜನರಿಗೆ ಹುಚ್ಚು ಅಭಿಮಾನ. ಇದೀಗ ರೈನಾ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಾನೊಬ್ಬ ಸ್ಟಾರ್ ಕ್ರಿಕೆಟಿಗ ಆಗಿದ್ರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಮುಂಬೈ ನಗರದ ಬೀದಿ ಸುತ್ತುತ್ತಾ ಅಲ್ಲೇ ಬೀದಿಬದಿ ವ್ಯಾಪಾರಿಯೊಬ್ಬರ ಬಳಿ ನೇರಳೆ ಹಣ್ಣನ್ನು ಸಹ ಖರೀದಿಸಿದ್ದಾರೆ. ಈ ದೃಶ್ಯವನ್ನು ಕಂಡು ಅಬ್ಬಬ್ಬಾ  ಸುರೇಶ್ ರೈನಾ ಎಷ್ಟು ಸಿಂಪಲ್ ಮನುಷ್ಯ ಅಲ್ವಾ ಎಂದು ರೈನಾ ಸರಳತೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ.

ಈ ವಿಡಿಯೋವನ್ನು ಸುರೇಶ್ ರೈನಾ ತಮ್ಮ ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಜಾಮೂನ್ ಜಾಯ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ರೈನಾ ಸಾಮಾನ್ಯರಲ್ಲಿ ಸಾಮಾನ್ಯರಂತೆ ಮುಂಬೈಯಲ್ಲಿ ಸುತ್ತಾಡುತ್ತಾ ಅಲ್ಲೇ ಬೀದಿ ಬದಿಯಲ್ಲಿ ಹಣ್ಣು ಮಾರಾಟ ಮಾಡುವಂತಹ ಮಹಿಳೆಯೊಬ್ಬರ ಬಳಿ ನೇರಳೆ ಹಣ್ಣನ್ನು ಖರೀದಿಸುವಂತಹ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮುಂಗುಸಿ ಸೈನ್ಯದ ಭೀಕರ ದಾಳಿಯಿಂದ ತಪ್ಪಿಸಿಕೊಳ್ಳಲು ಹೆಬ್ಬಾವು ಪಟ್ಟ ಪಾಡು ನೋಡಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 14.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.2 ಮಿಲಿಯನ್ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಇನ್ನೂ ಸುರೇಶ್ ರೈನಾ ಅವರ ಸರಳತೆಯನ್ನು ಕಂಡು ಈ ವ್ಯಕ್ತಿ ಎಷ್ಟು ಸಿಂಪಲ್ ಅಲ್ವಾ ಎಂದು ನೆಟ್ಟಿಗರು ರೈನಾ ಅವರನ್ನು  ಕೊಂಡಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ