ಪಾನಿಪುರಿ ಭಾರತೀಯರ ನೆಚ್ಚಿನ ಸ್ಟ್ರೀಟ್ ಫುಡ್ ಅಂತಾನೇ ಹೇಳ್ಬೋದು. ಹೆಚ್ಚಿನವರು ಸಂಜೆ ವೇಳೆಯಲ್ಲಿ ಪಾನಿಪುರಿ, ಗೋಲ್ಗೊಪ್ಪ ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕೆಲವು ಯುವತಿಯರಂತೂ ಪ್ರತಿನಿತ್ಯವೂ ಬೀದಿಬದಿಗಳಲ್ಲಿ ಮಾರಾಟ ಮಾಡುವಂತಹ ಪಾನಿಪುರಿಗಳನ್ನು ಬಹಳ ಇಷ್ಟಪಟ್ಟು ತಿಂತಾರೆ. ಬೀದಿಬದಿಗಳಲ್ಲಿ ಮಾರಾಟ ಮಾಡವಂತಹ ಆಹಾರಗಳ ರುಚಿ ಏನೋ ಅದ್ಭುತವಾಗಿರುತ್ತೆ ನಿಜ, ಆದ್ರೆ ಈ ಬೀದಿ ಬದಿಯ ವ್ಯಾಪಾರಿಗಳು ಸರಿಯಾದ ರೀತಿಯಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದಿಲ್ಲ ಎಂಬ ಆರೋಪ ಯಾವಾಗಲೂ ಕೇಳಿಬರುತ್ತಿರುತ್ತವೆ. ಈ ಕುರಿತ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದನ್ನು ನೋಡಿದ ಅನೇಕರು ನಾವು ಇನ್ನೂ ಮುಂದೆ ಬೀದಿಬದಿಯ ಆಹಾರವನ್ನು ತಿನ್ನಲ್ಲ ಅಂತ ಹೇಳಿದ್ದು ಕೂಡಾ ಇದೆ. ಈಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಸೂರತ್ ನ ಪಾನಿಪುರಿ ಮಾರಾಟಗಾರರೊಬ್ಬರು ಕೈಗಳಿಗೆ ಕೈಗವಸನ್ನು ಧರಿಸದೆ ಗ್ರಾಹಕರಿಗೆ ಪಾನಿಪುರಿ ಸರ್ವ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಇಲ್ಲಿ ನೈರ್ಮಲ್ಯ ಸತ್ತು ಹೋಗಿದೆ ಎಂದು ಹಲವರು ಹೇಳಿದ್ದಾರೆ.
ಅಂಕುಶ್ ದುರೆಜಾ (@foodie_bite) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪಾನಿಪುರಿ ಮಾರಾಟಗಾರರೊಬ್ಬರು ಕೈಗವಸುಗಳನ್ನು ಧರಿಸದೆ ಪಾನಿಪುರಿ ಮಾರಾಟ ಮಾಡುವ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ಪಾನಿಪುರಿ ಮಾರಾಟಗಾರ ಮೊದಲಿಗೆ ತಯಾರಿಸಿಟ್ಟ ಬೇಯಿಸಿದ ಆಲೂಗಡ್ಡೆ ಮಿಶ್ರಣಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪಿನ ರಸ ಮತ್ತು ಹುಣಸೆ ಹಣ್ಣಿನ ರಸವನ್ನು ಸೇರಿಸಿ, ಒಂದು ಸೌಟಿನ ಸಹಾಯದಿಂದ ಎಲ್ಲವನ್ನು ಮಿಶ್ರಣಮಾಡಿ, ಉತ್ತಮ ರೀತಿಯಲ್ಲೇ ಪಾನಿಪುರಿಗೆ ಬೇಕಾದಂತಹ ಪದಾರ್ಥಗಳನ್ನು ತಯಾರಿಸಿಟ್ಟುಕೊಳ್ಳುತ್ತಾರೆ. ಆದರೆ ಕೊನೆಯಲ್ಲಿ ಯಾವುದೇ ಕೈ ಗವಸನ್ನು ಧರಿಸದೆ ಬರಿಗೈಯಲ್ಲಿಯೇ ಪಾನಿಪುರಿಯನ್ನು ಗ್ರಾಹಕರಿಗೆ ಸರ್ವ್ ಮಾಡುವುದನ್ನು ಕಾಣಬಹುದು.
ಇದನ್ನೂ ಓದಿ: ರೀಲ್ಸ್ ನೋಡುತ್ತಾ ಮೊಬೈಲ್ ಡೇಟಾ ಖಾಲಿ ಮಾಡಿದ ಅತ್ತೆ, ಪೋಲಿಸ್ ಠಾಣೆ ಮೆಟ್ಟಿಲೇರಿದ ಸೊಸೆ
ಡಿಸೆಂಬರ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 80 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪ್ರತಿ ಬಾರಿ ಯಾಕೆ ಬರಿಗೈಯಲ್ಲೇ ಪಾನಿಪುರಿ ಸರ್ವ್ ಮಾಡುತ್ತಾರೆʼ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼದಯವಿಟ್ಟು ಕೈಗವಸುಗಳನ್ನು ಧರಿಸಿʼ ಎಂದು ಸಲಹೆ ನೀಡಿದ್ದಾರೆ. ಇನ್ನೂ ಅನೇಕರು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: