Viral News: ಸ್ವೀಡನ್​ನ ಬೀದಿಗಳಲ್ಲಿರುವ ಸಿಗರೇಟ್​ ಚೂರುಗಳ ಸಂಗ್ರಹಕ್ಕೆ ಕಾಗೆಗಳಿಗೆ ತರಬೇತಿ

| Updated By: Pavitra Bhat Jigalemane

Updated on: Feb 04, 2022 | 3:45 PM

ಸೂಕ್ಷ್ಮ ದೃಷ್ಟಿಯುಳ್ಳ ಕಾಗೆಗಳನ್ನು ನಗರದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಸಿಗರೇಟ್​ಗಳನ್ನು ಹೆಕ್ಕಿ ತೆಗೆದು ಮಾಲಿನ್ಯವನ್ನು ತಡೆಯಲು ಸ್ವೀಡನ್​ನ ಸ್ಟಾರ್ಟ್​ ಅಪ್​ ಕಂಪನಿಯೊಂದು ಕಾಗೆಗಳಿಗೆ ತರಬೇತಿ ನೀಡಲು ಮುಂದಾಗಿದೆ.

Viral News: ಸ್ವೀಡನ್​ನ ಬೀದಿಗಳಲ್ಲಿರುವ ಸಿಗರೇಟ್​ ಚೂರುಗಳ ಸಂಗ್ರಹಕ್ಕೆ ಕಾಗೆಗಳಿಗೆ ತರಬೇತಿ
ಕಾಗೆ (ಪ್ರಾತಿನಿಧಿಕ ಚಿತ್ರ)
Follow us on

ನಗರಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಸ್ವೀಡನ್​ನಲ್ಲಿ (Sweden) ಕಾಗೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೌದು ಸೂಕ್ಷ್ಮ ದೃಷ್ಟಿಯುಳ್ಳ ಕಾಗೆಗಳನ್ನು ನಗರದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಸಿಗರೇಟ್​ಗಳನ್ನು ಹೆಕ್ಕಿ ತೆಗೆದು ಮಾಲಿನ್ಯವನ್ನು ತಡೆಯಲು ಸ್ವೀಡನ್​ನ ಸ್ಟಾರ್ಟ್​ ಅಪ್​ ಕಂಪನಿಯೊಂದು (Start Up Company) ಕಾಗೆಗಳಿಗೆ (Crows) ತರಬೇತಿ ನೀಡಲು ಮುಂದಾಗಿದೆ. ಸದ್ಯ ಈ ಸುದ್ದಿ ಜಗತ್ತಿನಾದ್ಯಂತ ವೈರಲ್​ ಆಗಿದೆ. ಕಾಗೆಗಳು ಹೆಕ್ಕಿ ತಂದ ಸಿಗರೇಟ್​ಗಳನ್ನು ಹಾಕಲು ಮಷಿನ್​ ಒಂದನ್ನು ಇಡಲಾಗುತ್ತದೆ ಎಂದು ವರದಿಯಾಗಿದೆ. 

ಫಸ್ಟ್​ ಪೋಸ್ಟ್​ ಸುದ್ದಿ ಸಂಸ್ಥೆ ಈ ಕುರಿತು ವರದಿ ಮಾಡಿದೆ. ಸ್ವೀಡನ್​ನಲ್ಲಿ ಎಲ್ಲೆಂದರಲ್ಲಿ ಬಿಸಾಡಿದ ಸಿಗರೇಟ್​ ಚುರುಗಳು ಬಹುದೊಡ್ಡ ಸಮಸ್ಯೆಯಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಮಣ್ಣಿನ ಮಾಲಿನ್ಯವನ್ನು ಹೆಚ್ಚು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ವೀಡನ್​ನ ಸ್ಟಾರ್ಟ್​ ಅಪ್​ ಕಂಪನಿ ಕಾಗೆಗಳಿಗೆ ಸಿಗರೇಟ್​ ಚೂರುಗಳನ್ನು ಹೆಕ್ಕಿ ತರುವ ಕೆಲಸ ನೀಡುತ್ತಿದೆ. ಪ್ರತೀ ಬಾರಿ ಕಸವನ್ನು ತಂದು ಮಷಿನ್​ನೊಳಗೆ ಹಾಕುವಾಗಲೂ  ಕಾಗೆಗಳು ಆಹಾರವನ್ನು ಪಡೆಯುತ್ತವಂತೆ.

ಕೋರ್ವಿಡ್​ ಕ್ಲೀನಿಂಗ್​ ಎನ್ನುವ ಹೆಸರಿನ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ಸ್ವೀಡನ್​ನಲ್ಲಿ ಸಿಗರೇಟ್​ ಬಟ್​​ಗಳನ್ನು ಸಂಗ್ರಹಿಸಲು ಪ್ರತೀ ಸಿಗರೇಟ್​ ಬಡ್​ ಪತ್ತೆಗೆ 16 ರೂ ವೆಚ್ಚವಾಗುತ್ತದೆ. ಕಾಗೆಗಳನ್ನು ಈ ಕೆಲಸಕ್ಕೆ ಬಳಸಿಕೊಂಡರೆ ಖರ್ಚು ಕಡಿಮೆಯಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಸ್ಥಾಪಕ ಗುಂಥರ್​ ಅನ್ಸೇನ್​.  ಕಾಗೆಗಳ ಬುದ್ಧಿವಂತಿಕೆ ಬಗ್ಗೆ ಮಾತನಾಡುವ ಗುಂಥರ್​, ಕಾಗೆಗಳಿಗೆ ಕಲಿಸುವುದು ಸುಲಭ, 7 ರಿಂದ 10 ವರ್ಷದ ಮಕ್ಕಳಲ್ಲಿ ಕಂಡುಬರುವ ಕಲಿಕೆಯಲ್ಲಿನ ಚುರುಕುತನ ಕಾಗೆಗಳಲ್ಲಿ ಕಂಡುಬರುತ್ತದೆ. ಹೀಗಾಗಿ ನಗರ ಸ್ವಚ್ಛತೆಗೆ ಕಾಗೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಸ್ವೀಡನ್​ನಲ್ಲಿ ದಿನದಿಂದ ದಿನಕ್ಕೆ ಸಿಗರೇಟ್​ ಬಿಟ್​ಗಳು ಬೀದಿಯಲ್ಲಿ ಬೀಳುತ್ತಿರುವ ಪ್ರಮಾಣ ಏರಿಕೆಯಾಗುತ್ತಿದೆ. ಸಿಗರೇಟ್​ ದೇಹಕ್ಕೆ ಎಷ್ಟು ಮಾರಕವೋ ಅದರಲ್ಲಿನ ಪ್ಲಾಸ್ಟಿಕ್​ ಪರಿಸರಕ್ಕೂ ಅಷ್ಟೇ ಹಾನಿಕಾರಕ. ಸ್ವೀಡನ್​ನಲ್ಲಿ ಪ್ರತೀ ವರ್ಷ 1 ಬಿಲಿಯನ್​ ಸಿಗರೇಟ್​ ಬಡ್​ಗಳು ದೇಶದ ಶೇ. 62ರಷ್ಟು ಭಾಗದಲ್ಲಿ ಕಾಣಸಿಗುತ್ತವೆ. ಇದರ ತಡೆಗೆ ಈಗ ಕಾಗೆಗಳ ಮೂಲಕ ಪರಿಹಾರ ನೀಡಲು ಸ್ಟಾರ್ಟ್​ ಅಪ್​ ಸಂಸ್ಥೆ ಮುಂದಾಗಿದೆ.

ಇದನ್ನೂ ಓದಿ:

ಮೆಟಾವರ್ಸ್​ ಪ್ರವೇಶಿಸಿದ ಕೆಲವೇ ಹೊತ್ತಲ್ಲಿ ಗ್ಯಾಂಗ್​ ರೇಪ್​​ಗೆ ಒಳಗಾದೆ; ಬ್ರಿಟಿಷ್​ ಮಹಿಳೆಯಿಂದ ಗಂಭೀರ ಆರೋಪ