ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಫ್ಘಾನಿ ಸಂಸತ್ತನ್ನು ಪ್ರವೇಶಿಸಿ ಎಲ್ಲೆಂದರಲ್ಲಿ ಕುಳಿತು ಮೊಬೈಲ್ ನೋಡುತ್ತಿರುವ ದೃಶ್ಯಗಳಿಂದ ಹಿಡಿದು, ಕಾಬೂಲ್ನ ಮನೋರಂಜನಾ ಪಾರ್ಕ್ನಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದೇ ಎಂಜಾಯ್ ಮಾಡುತ್ತಿರುವ ದೃಶ್ಯಗಳೂ ಸಹ ವೈರಲ್ ಆಗಿತ್ತು. ಇದೀಗ ಉಗ್ರರು ಐಸ್ಕ್ರೀಮ್ ತಿನ್ನುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಆದರೂ ಸಹ ಶಸ್ತ್ರಾಸ್ತ್ರಗಳನ್ನು ಬಿಡುತ್ತಿಲ್ಲ. ಒಂದು ಕೈಲಿ ಗನ್, ಮತ್ತೊಂದು ಕೈಲಿ ಐಸ್ಕ್ರೀಮ್ ಕೋನ್ ಹಿಡಿದಿರುವ ಫೋಟೋ ವೈರಲ್ ಆಗಿದೆ.
ದೃಶ್ಯ ಕಾಬೂಲ್ನ ಐಸ್ಕ್ರೀಮ್ ಪಾರ್ಲರ್ ಎದುರು ನಿಂತಿರುವ ಚಿತ್ರ. ಈ ದೃಶ್ಯವನ್ನು ಟೋಲೋ ನ್ಯೂಸ್ ಜರ್ನಲಿಸ್ಟ್ ಅಬ್ದುಲ್ಲಾಹ್ ಒಮೆರಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
#Taliban eat ice-cream #Kabul #Afghanistan . pic.twitter.com/du5g9QRZIx
— Abdulhaq Omeri (@AbdulhaqOmeri) August 17, 2021
ಕಾಬೂಲ್ ಮನರಂಜನಾ ಪಾರ್ಕ್ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್ಮೆಂಟ್; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ
ತಾಲಿಬಾನ್ ಉಗ್ರರು ಕೈಯಲ್ಲಿ ಬಂದೂಕು ಹಿಡಿದು, ಕಾಬೂಲ್ನ ಮನರಂಜನಾ ಪಾರ್ಕ್ವೊಂದರಲ್ಲಿ ಎಲೆಕ್ಟ್ರಿಕ್ ಬಂಪರ್ ಕಾರ್ ಆಟ ಆಡುತ್ತಿರುವುದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ, ಇನ್ನೊಂದು ಪ್ರತ್ಯೇಕ ವಿಡಿಯೋದಲ್ಲಿ ಆಟದ ಕುದುರೆಗಳನ್ನೇರಿ ಎಂಜಾಯ್ ಮಾಡುತ್ತಿದ್ದಾರೆ. ಮತ್ತೊಂದಷ್ಟು ಉಗ್ರರು ಸುತ್ತಲೂ ನಿಂತು ನೋಡುತ್ತಿದ್ದಾರೆ.
ಉಗ್ರರ ಕೈವಶವಾದ ತಾಲಿಬಾನ್ನಿಂದ ಪರಾರಿಯಾಗಲು ಸಾವಿರಾರು ಜನರು ಯುಎಸ್ ಮಿಲಿಟರಿ ವಿಮಾನವನ್ನು ಬೇಕಾಬಿಟ್ಟಿ ಹತ್ತಿ, ನೂಕುನುಗ್ಗಲು ಉಂಟಾದ ವಿಡಿಯೋಗಳು ವೈರಲ್ ಆಗಿದ್ದವು.
?? #Afghanistan : les #talibans ont pris le contrôle d’un parc d’attractions à #Kaboul. (témoins) pic.twitter.com/BukACDf5v2
— Mediavenir (@Mediavenir) August 16, 2021
ಇದನ್ನು ಓದಿ:
Video: ಕಾಬೂಲ್ ಮನರಂಜನಾ ಪಾರ್ಕ್ನಲ್ಲಿ ತಾಲಿಬಾನ್ ಉಗ್ರರ ಎಂಜಾಯ್ಮೆಂಟ್; ಆಟ ಆಡೋವಾಗಲೂ ಶಸ್ತ್ರ ಕೈಬಿಡುತ್ತಿಲ್ಲ