Viral: ಥ್ರೆಡ್; ‘ಇದೇನು ನಮ್ಮ ಜಿಲೇಬಿಯೋ?’ ಗೊಂದಲಕ್ಕೆ ಬಿದ್ದ ನೆಟ್ಟಿಗರು

|

Updated on: Jul 08, 2023 | 2:42 PM

Thread : ಈ ಲೋಗೋ ತಮಿಳು ವರ್ಣಮಾಲೆಯ "ಕು" ಅಕ್ಷರದಿಂದ ಪ್ರೇರಣೆಗೊಂಡಿದೆ ಎಂದು ಕೆಲವರು. ಇದು ಮಲಯಾಳಂನ "ಥ್ರ್" ಮತ್ತು "ಕ್ರಾ" ಹೋಲುತ್ತದೆ ಎಂದು ಕೆಲವರು. ಎಂಥದೂ ಇಲ್ಲ, ಇದು ''ಓಂ'' ಎಂದು ಹಲವರು. ಏನಂತೀರಿ ನೀವು?

Viral: ಥ್ರೆಡ್; ಇದೇನು ನಮ್ಮ ಜಿಲೇಬಿಯೋ? ಗೊಂದಲಕ್ಕೆ ಬಿದ್ದ ನೆಟ್ಟಿಗರು
ಸೋಶಿಯಲ್ ಮೀಡಿಯಾ ಅಪ್ಲಿಕೇಷನ್​ ''ಥ್ರೆಡ್​ '' ಜಿಲೇಬಿಯಂತಿದೆಯೇ?
Follow us on

Thread : ಮೆಟಾ (META) ಸಂಸ್ಥೆಯು ಗುರುವಾರದಂದು ಅಧಿಕೃತವಾಗಿ ಥ್ರೆಡ್ ಎಂಬ ಸೋಶಿಯಲ್ ಮೀಡಿಯಾ ಅಪ್ಲಿಕೇಷನ್ (Social Media Application)​ ಅನ್ನು ಮಾರುಕಟ್ಟೆಗೆ​ ಬಿಡುಗಡೆ ಮಾಡಿದೆ. ಟ್ವಿಟರ್​ಗೆ ಪೈಪೋಟಿ ನೀಡಲೆಂದೇ ಈ ಹೊಸ ಅಪ್ಲಿಕೇಷನ್ ಅನ್ನು ರೂಪಿಸಲಾಗಿದೆ. ನೆಟ್ಟಿಗರು ನಾಲ್ಕು ದಿನಗಳಿಂದ ಸತತವಾಗಿ ಇದರ ಲೋಗೋದ ಸುತ್ತ ಸುತ್ತುತ್ತ ಟ್ರೆಂಡ್​ ಮತ್ತು ಟ್ರೋಲ್ ಮಾಡುತ್ತಿದ್ದಾರೆ.

ದಕ್ಷಿಣ ಭಾರತೀಯರು, ಇದು ದ್ರಾವಿಡ ವರ್ಣಮಾಲೆಗಳನ್ನು ಹೋಲುತ್ತಿದೆ ಎಂದು ತಮ್ಮ ತಮ್ಮ ಭಾಷೆಯ ವರ್ಣಮಾಲೆಯ ಅಕ್ಷರಗಳನ್ನುಈ ಥ್ರೆಡ್​ಗೆ ಹೋಲಿಸಿ ಸೋದಾಹರಿಸುತ್ತಿದ್ದಾರೆ. ಇದು ತಮಿಳು ವರ್ಣಮಾಲೆಯ “ಕು” ಅಕ್ಷರದಿಂದ ಪ್ರೇರೇಪಣೆಗೊಂಡಿದೆ ಎಂದು ಹಲವಾರು ಜನ ಹೇಳಿದ್ದಾರೆ. ಹಾಗೆಯೇ ಮಲಯಾಳಿಗರು, ಮಲಯಾಳದ “ಥ್ರ್” ಮತ್ತು “ಕ್ರಾ” ಅನ್ನು ಹೋಲುತ್ತದೆ ಎಂದಿದ್ದಾರೆ.

ಆದರೆ ಕೆಲ ನೆಟ್ಟಿಗರು ಇದು ಹಿಂದೂಧರ್ಮದ “ಓಂ” ಅನ್ನು ಕೂಡ ಪ್ರತಿನಿಧಿಸುತ್ತಿದೆ ಎಂದು ವಾದಿಸುತ್ತಿದ್ದಾರೆ. ತಿಂಡಿಪ್ರಿಯರು ಮಾತ್ರ ಇದು ಖಂಡಿತ ಜಿಲೇಬಿಯನ್ನು ಹೋಲುತ್ತಿದೆ ಎಂದು ಪಟ್ಟು ಹಿಡಿದು ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ. ಸದ್ಯಕ್ಕಂತೂ ಜನ ತಮ್ಮ ಬೆಳಗಿನ ತಿಂಡಿಯಲ್ಲಿ ಜಿಲೇಬಿ ತಿನ್ನುತ್ತಿದ್ದೇವೆಂಬಂತೆ ಈ ಥ್ರೆಡ್​ ಅಪ್ಲಿಕೇಷನ್​ ಓಪನ್ ಮಾಡುತ್ತಿದ್ದಾರೆ. ಇನ್ನು ಇದೇ ಅವರಿಗೆ ಶಕ್ತಿ ಎಂದು ಟ್ವೀಟ್ ಮಾಡಿದ್ದಾರೆ ಒಬ್ಬರು. ಈ ಲೋಗೋ ನೋಡಿದಾಗೆಲ್ಲ ನನಗೆ ಜಿಲೇಬಿ ತಿನ್ನುವ ಆಸೆ ಉಂಟಾಗುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ಅರೆ ಇದು ಕಿವಿಯಂತೆ ಕಾಣುತ್ತಿಲ್ಲವೆ? ಎಂದು ಕೆಲವರು ಹೇಳಿದ್ದಾರೆ. ಅಂತೂ ಈ ಹೊಸ ಅಪ್ಲಿಕೇಷನ್​ ಅನ್ನು ಒಂದು ದಿನದಲ್ಲಿ ಸುಮಾರು 30ಮಿಲಿಯನ್​ಗಿಂತಲೂ ಹೆಚ್ಚು ಜನ ಡೌನ್​ಲೋಡ್ ಮಾಡಿಕೊಂಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:36 pm, Sat, 8 July 23