ಚೆನ್ನೈನಲ್ಲಿ ಮಳೆರಾಯನ ಆರ್ಭಟ, ತಡವಾಗಿ ನಡೆದ ಮದುವೆ; ತಲೆಗೊಬ್ಬರಂತೆ ಮಾತಾಡುತ್ತಿರುವ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: Nov 11, 2022 | 6:12 PM

Chennai Rain : ಮಳೆ ಬಂದಿದೆ. ರಸ್ತೆಯಲ್ಲೂ ದೇವಸ್ಥಾನದಲ್ಲೂ ನೀರು ಆವರಿಸಿದೆ. ಮುಹೂರ್ತ ಮೀರಿದೆ. ತಡವಾಗಿ ಮದುವೆಯಾಗಿದೆ. ಅಂತೂ ಮದುವೆಯಾಗಿದೆ. ಹೇಗಿದೆ ನೋಡಿ ವಿಡಿಯೋ.

ಚೆನ್ನೈನಲ್ಲಿ ಮಳೆರಾಯನ ಆರ್ಭಟ, ತಡವಾಗಿ ನಡೆದ ಮದುವೆ; ತಲೆಗೊಬ್ಬರಂತೆ ಮಾತಾಡುತ್ತಿರುವ ನೆಟ್ಟಿಗರು
Tamil Nadu rains delay weddings couples get married in waterlogged temple in Chennai
Follow us on

Viral Video : ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭಾಗಶಃ ಪ್ರದೇಶಗಳು ಜಲಾವೃತಗೊಂಡಿವೆ. ದೇವಸ್ಥಾನ ಮತ್ತು ಸಾರ್ವಜನಿಕ ಪ್ರದೇಶಗಳಿಂದ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಪೊಲೀಸರು ನಿರತರಾಗಿದ್ದಾರೆ. ಆದರೂ ಮದುವೆ, ಇನ್ನಿತರೆ ಶುಭಕಾರ್ಯಗಳು ಮಾತ್ರ ನಿರಂತರವಾಗಿ ನಡೆಯುತ್ತಲೇ ಇವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಚೆನ್ನೈನ ದೇವಸ್ಥಾನದಲ್ಲಿ ಜೋಡಿಯೊಂದು ಮಳೆಯ ಆರ್ಭಟದಿಂದಾಗಿ ಮುಹೂರ್ತ ಮೀರಿ ಮದುವೆಯಾಗಿದೆ.

ಎಎನ್​ಐ ಹಂಚಿಕೊಂಡ ಈ ವಿಡಿಯೋದಲ್ಲಿ ದಂಪತಿ ನೀರಿನಲ್ಲಿಯೇ ನಡೆದುಕೊಂಡು ಆಂಜನೇಯ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ದೇವಸ್ಥಾನದ ಒಳಗೂ ಹೊರಗೂ ಮಳೆನೀರು ಸಾಕಷ್ಟು ಆವರಿಸಿದೆ. ಸಾವಿರಾರು ಜನರು ಈ ವಿಡಿಯೋ ನೋಡಿದ್ಧಾರೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ಧಾರೆ. ಆದರೆ ಸಾಕಷ್ಟು ಜನ ಮದುವೆ, ಮದುಮಕ್ಕಳ ಬಗ್ಗೆ ವಿವೇಕ ಕಳೆದುಕೊಂಡು ತಮಾಷೆ ಮಾಡಿದ್ದಾರೆ.

ಮದುವೆಗೂ ಮಳೆಗೂ ಮದುಮಕ್ಕಳ ಪರಸ್ಪರ ಆಯ್ಕೆಗೂ ಏನು ಸಂಬಂಧ? ಯಾಕೋ ನೆಟ್ಟಿಗರು ಹೆಚ್ಚು ಅಸಂಬದ್ಧರಾಗಿ ವರ್ತಿಸಿದೆ ಈ ವಿಷಯವಾಗಿ. ಚೆನ್ನೈನ ಮಳೆನೀರು ವ್ಯವಸ್ಥೆ ಸರಿಯಾಗಿಲ್ಲ ಎಂದಿದ್ಧಾರೆ ಕೆಲವರು. ಇನ್ನೂ ಸಮಯವಿದೆ ಇದೇ ಮಳೆಯಲ್ಲಿ ತಪ್ಪಿಸಿಕೊಳ್ಳಬಹುದು ಎಂದು ಯಾರೋ ಒಬ್ಬರು ಹೇಳಿದ್ದಾರೆ.

ನಿಮಗೇನು ಅನ್ನಿಸುತ್ತದೆ ಈ ಬಗ್ಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 6:10 pm, Fri, 11 November 22