ತೆಲಂಗಾಣ: ಕಡಿಮೆ ಅಂಕ ಪಡೆದಿದ್ದಕ್ಕೆ ಹತ್ತನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿರುವ ಘಟನೆ ತಿರುಮಲಯಪಾಲೆಂನ ಮದಿರಿಪುರಂನಲ್ಲಿ ನಡೆದಿದೆ. ಇಲ್ಲಿನ ತೆಲಂಗಾಣ ಬುಡಕಟ್ಟು ಕಲ್ಯಾಣ ಬಾಲಕರ ಗುರುಕುಲ ಶಾಲೆಯ 10 ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದರು. ಇದರಿಂದ ಕೋಪಗೊಂಡಿದ್ದ ಶಿಕ್ಷಕ ಲಕ್ಷ್ಮಣ್ ರಾವ್ ವಿದ್ಯಾರ್ಥಿಗಳಿಗೆ ಸರಿಯಾಗಿ ಥಳಿಸಿದ್ದಾರೆ. ವಿದ್ಯಾರ್ಥಿಯೊಬ್ಬನ ಬೆನ್ನಿನ ಮೇಲೆ ಬೊಬ್ಬೆ ಕಂಡು ಪೋಷಕರು ಆತಂಕ ಉಂಟಾಗಿದ್ದು, ವಿಚಾರಿಸಿದಾಗ ವಿದ್ಯಾರ್ಥಿ ಶಿಕ್ಷಕರು ಹೊಡೆದಿರುವುದನ್ನು ಬಾಯಿಬಿಟ್ಟಿದ್ದಾನೆ. ಪೋಷಕರ ದೂರಿನ ಆಧಾರದ ಮೇಲೆ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
ಮದಿರಿಪುರಂ ಗಿರಿಜನ ಕಲ್ಯಾಣ ಬಾಲಕರ ಗುರುಕುಲ ಶಾಲೆಯಲ್ಲಿ 10ನೇ ತರಗತಿಯಲ್ಲಿ 62 ವಿದ್ಯಾರ್ಥಿಗಳಿದ್ದಾರೆ. ಇನ್ನೇನು ಅಂತಿಮ ಪರೀಕ್ಷೆ ಸಮೀಪಿಸುತ್ತಿದ್ದಂತೆ ಶಿಕ್ಷಕ ಲಕ್ಷ್ಮಣ್ ಮಕ್ಕಳು ಪರೀಕ್ಷೆಗೆ ಸಿದ್ಧರಾಗಲಿ ಎಂಬ ಕಾರಣಕ್ಕೆ ಪರೀಕ್ಷೆ ಒಂದನ್ನು ನಡೆಸಿದ್ದರು. ಆದರೆ 62 ವಿದ್ಯಾರ್ಥಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದರು. ಇದರಿಂದ ಕೋಪಗೊಂಡಿದ್ದ ಶಿಕ್ಷಕ ವಿದ್ಯಾರ್ಥಿಗಳ ಬೆನ್ನಿನ ಮೇಲೆ ಬೊಬ್ಬೆ ಬರುವಂತೆ ಸರಿಯಾಗಿ ಥಳಿಸಿದ್ದಾರೆ.
ಇದನ್ನೂ ಓದಿ: ಮಡದಿಗೂ ಸಮಾನ ಗೌರವ, ವಧುವಿನ ಪಾದ ಸ್ಪರ್ಶಿಸಿದ ವರ, ನಾಚಿ ನೀರಾದ ವಧು
ಮಂಗಳವಾರ ರಾತ್ರಿ ಸುಮಾರು 25 ವಿದ್ಯಾರ್ಥಿಗಳಿಗೆ ಥಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಬೆನ್ನು ಕೆಂಪಾಗಿ ಬೊಬ್ಬೆ ಬರಲು ಪ್ರಾರಂಭಿಸಿದೆ. ಈ ಬಗ್ಗೆ ಕೆಲ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಫೋನ್‌ನಲ್ಲಿ ಮಾಹಿತಿ ನೀಡಿದ್ದಾರೆ. ಗುರುಕುಲ ಸಮೀಪದ ಚಂದ್ರತಾಂಡದ ವಿದ್ಯಾರ್ಥಿ ನಿಲಯಕ್ಕೆ ಪೋಷಕರು ಬಂದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಎಸ್ಸೈ ಗಿರಿಧರ್ ರೆಡ್ಡಿ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ವಿವರ ಪಡೆದು, ನಂತರ ಶಿಕ್ಷಕನನ್ನು ಬಂಧಿಸಿ ಠಾಣೆಗೆ ಕರೆದೊಯ್ದಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ