2,800 ಕೋಟಿ ರೂ. ಲಾಟರಿ ಹಣ ಗೆದ್ದರು, ಈ ವ್ಯಕ್ತಿ ಕಂಪೆನಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದೇಕೆ? ಅಸಲಿ ವಿಚಾರ ಇಲ್ಲಿದೆ

ಅದೃಷ್ಟ ಯಾವಾಗ ಬೇಕಾದರೂ ಕೈಹಿಡಿಯಬಹುದು. ಜೀರೋ ಆಗಿದ್ದ ವ್ಯಕ್ತಿಯೂ ಹೀರೋ ಆಗಬಹುದು. ಈಗಾಗಲೇ ಜಗತ್ತಿನೆಲ್ಲೆಡೆ ಅದೃಷ್ಟಶಾಲಿಗಳು ಲಾಟರಿ ಟಿಕೆಟ್ ಖರೀದಿಸಿ ಹಣ ಗಳಿಸಿರುವುದನ್ನು ಕೇಳಿರಬಹುದು. ಆದರ ವಾಷಿಂಗ್ಟನ್ ಡಿಸಿಯ ವ್ಯಕ್ತಿಯೊಬ್ಬರು ಲಾಟರಿ ಟಿಕೆಟ್ ನಲ್ಲಿ 2,800 ಕೋಟಿಗೂ ಹೆಚ್ಚು ಲಾಟರಿ ಹಣವನ್ನು ಗೆದ್ದಿದ್ದಾರೆ ಎಂದು ನಂಬಿದ್ದಾರೆ. ಆದರೆ ಇದೀಗ ಪವರ್‌ಬಾಲ್ ಮತ್ತು ಡಿಸಿ ಲಾಟರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

2,800 ಕೋಟಿ ರೂ. ಲಾಟರಿ ಹಣ ಗೆದ್ದರು, ಈ ವ್ಯಕ್ತಿ ಕಂಪೆನಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದೇಕೆ? ಅಸಲಿ ವಿಚಾರ ಇಲ್ಲಿದೆ
ವೈರಲ್​​ ನ್ಯೂಸ್​​
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 20, 2024 | 6:24 PM

ಕೆಲವೊಮ್ಮೆ ಅದೃಷ್ಟ ಲಕ್ಷ್ಮಿಯೂ ಕ್ಷಣಾರ್ಧದಲ್ಲಿಯೇ ಒಲಿಯುತ್ತಾಳೆ. ಒಲಿದ ಲಕ್ಷ್ಮಿಯನ್ನು ತಮ್ಮ ಬಳಿ ಇರಿಸಿಕೊಳ್ಳಲು ಅದೃಷ್ಟವಿರಬೇಕು. ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಆ ತುತ್ತು ಇನ್ಯಾರದ್ದೋ ಪಾಲಾಗಿರುತ್ತದೆ. ಈ ವ್ಯಕ್ತಿಯ ವಿಚಾರದಲ್ಲಿಯೂ ಹಾಗೆಯೇ ಆಗಿದೆ. 2,800 ಕೋಟಿಗೂ ಹೆಚ್ಚು ಲಾಟರಿ ಹಣ ಗೆದ್ದ ವ್ಯಕ್ತಿಯೂ ಇದೀಗ ಪವರ್‌ಬಾಲ್ ಮತ್ತು ಡಿಸಿ ಲಾಟರಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಜಾನ್ ಚೀಕ್ಸ್ ಜನವರಿ 6, 2023 ರಂದು ಪವರ್‌ಬಾಲ್ ಲಾಟರಿ ಟಿಕೆಟ್ ಅನ್ನು ಖರೀದಿಸಿದ್ದರು. ಕೇವಲ ಎರಡು ದಿನಗಳ ನಂತರ ಡಿಸಿ ಲಾಟರಿಯ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿದ್ದ ಅವರ ಲಾಟರಿ ಸಂಖ್ಯೆಯನ್ನು ಕಂಡು ಚೀಕ್ಸ್ ಆಶ್ಚರ್ಯಗೊಂಡಿದ್ದರು. ಆ ಬಳಿಕ ವಿಜೇತರ ಪಟ್ಟಿಯಲ್ಲಿ ತನ್ನ ಲಾಟರಿ ಸಂಖ್ಯೆಇರುವುದನ್ನು ಕಂಡು ವಿಚಾರಿಸಿದ್ದಾರೆ. ಈ ವೇಳೆಯಲ್ಲಿ ಪವರ್‌ಬಾಲ್ ಮತ್ತು ಡಿಸಿ ಲಾಟರಿಯೂ ಅವರ ಲಾಟರಿ ಸಂಖ್ಯೆಗಳನ್ನು ತಪ್ಪಾಗಿ ಪ್ರಕಟಿಸಲಾಗಿದೆ ಎಂದು ವಾದಿಸಿದ್ದಾರೆ. ಸರಿಯಾದ ವಿಜೇತರ ಪಟ್ಟಿ ಪ್ರಕಟಿಸಿದ್ದಕ್ಕೆ ಅವರ ವಿರುದ್ಧ ಕಾನೂನು ಸಮರವನ್ನು ಕೈಗೊಂಡಿದ್ದಾರೆ.

ಎನ್ ಬಿ ಸಿ ವಾಷಿಂಗ್‌ಟನ್‌ಗೆ ನೀಡಿದ ಸಂದರ್ಶನದಲ್ಲಿ , ಶ್ರೀ ಚೀಕ್ಸ್ ತನ್ನ ಆರಂಭಿಕ ಪ್ರತಿಕ್ರಿಯೆಯ ಬಗ್ಗೆ ಮಾತನಾಡುತ್ತಾ, “ನಾನು ಸ್ವಲ್ಪ ಉತ್ಸುಕನಾಗಿದ್ದೆ. ನನ್ನ ನಂಬರ್ ಕಂಡ ತಕ್ಷಣವೇ ನಾನು ಸ್ನೇಹಿತರಿಗೆ ಕರೆ ಮಾಡಿದೆ. ಅವರು ಶಿಫಾರಸು ಮಾಡಿದಂತೆ ನಾನು ಫೋಟೋವನ್ನು ತೆಗೆದುಕೊಂಡೆ. ಆದರೆ ಲಾಟರಿ ಮತ್ತು ಗೇಮಿಂಗ್ ಕಚೇರಿಗೆ ತನ್ನ ಟಿಕೆಟ್ ಅನ್ನು ಸಲ್ಲಿಸಿದ್ದು, ಅದನ್ನು ತಿರಸ್ಕರಿಸಿದರು. ಲಾಟರಿ ಸಂಖ್ಯೆಗಳನ್ನು ತಪ್ಪಾಗಿ ಪ್ರಕಟಿಸಲಾಗಿದೆ. ಕ್ಲೈಮ್ ಏಜೆಂಟ್‌ಗಳಲ್ಲಿ ಒಬ್ಬರು ನನ್ನ ಟಿಕೆಟ್ ಅನ್ನು ಕಸದ ಬುಟ್ಟಿಗೆ ಎಸೆಯಲು ಹೇಳಿದರು ಎಂದು ತಿಳಿಸಿದ್ದಾರೆ.

ಈ ಘಟನೆಯ ಬಳಿಕ ಚೀಕ್ಸ್ ಅವರು ಪವರ್‌ಬಾಲ್ ವಿರುದ್ಧ ಮೊಕದ್ದಮೆ ಹೂಡಲು ಕಾನೂನು ಸಲಹೆಯನ್ನು ಪಡೆದುಕೊಂಡರು. ಚೀಕ್ಸ್ ಸಲ್ಲಿಸಿದ ಮೊಕದ್ದಮೆಯು ಮಲ್ಟಿ-ಸ್ಟೇಟ್ ಲಾಟರಿ ಅಸೋಸಿಯೇಷನ್ ​​ಮತ್ತು ಆಟದ ಗುತ್ತಿಗೆದಾರ ಟಾವೋಟಿ ಎಂಟರ್‌ಪ್ರೈಸಸ್ ಅನ್ನು ಪ್ರತಿವಾದಿಗಳೆಂದು ಹೆಸರಿಸಲಾಗಿದೆ. ಪವರ್ ಬಾಲ್ ವಿರುದ್ಧ ಒಪ್ಪಂದದ ಉಲ್ಲಂಘನೆ, ನಿರ್ಲಕ್ಷ್ಯ, ವಂಚನೆ ಸೇರಿದಂತೆ ಎಂಟು ಪ್ರತ್ಯೇಕ ಮೊಕದ್ದಮೆ ಹೂಡಿದ್ದಾರೆ. ಅದಲ್ಲದೆ ತಾನು ಗಳಿಸಿದ ಮೊತ್ತದ ಮೇಲೆ ದೈನಂದಿನ ಬಡ್ಡಿಯನ್ನು ಸೇರಿಸಿ ಒಟ್ಟು ಮೊತ್ತ 340 ಮಿಲಿಯನ್ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಡದಿಗೂ ಸಮಾನ ಗೌರವ, ವಧುವಿನ ಪಾದ ಸ್ಪರ್ಶಿಸಿದ ವರ, ನಾಚಿ ನೀರಾದ ವಧು

ಆದರೆ ನಿರ್ವಾಹಕರು ಶ್ರೀ ಚೀಕ್ಸ್‌ನ ಜಾಕ್‌ಪಾಟ್ ಹಕ್ಕನ್ನು ನಿರಾಕರಿಸಿದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ತಿಳಿಸಿವೆ. ಅವರಿಗೆ ಬರೆದ ಪತ್ರದಲ್ಲಿ, ಒಎಲ್ ಜಿ ನಿಯಮಗಳ ಪ್ರಕಾರ ಟಿಕೆಟ್ ಅನ್ನು ಒಎಲ್ ಜಿ ಗೇಮಿಂಗ್ ಸಿಸ್ಟಮ್‌ನಿಂದ ವಿಜೇತರಾಗಿ ಮೌಲ್ಯೀಕರಿಸದ ಕಾರಣ ಅವರ ಬಹುಮಾನದ ಹಕ್ಕು ನಿರಾಕರಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವಕೀಲ, ರಿಚರ್ಡ್ ಇವಾನ್ಸ್ ಅವರು ಚೀಕ್ಸ್ ಪರವಾಗಿ ವಾದಿಸಿದ್ದು, ವಿಜೇತರ ಸಂಖ್ಯೆಗಳು ಚೀಕ್ಸ್ ಅವರ ಲಾಟರಿ ಸಂಖ್ಯೆಗಳಿಗೆ ಹೊಂದಿಕೆಯಾಗುವುದರಿಂದ ಅವರು ಸಂಪೂರ್ಣ ಜಾಕ್ಪಾಟ್ ಅನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದಿದ್ದಾರೆ. ಆದರೆ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 23 ಕ್ಕೆ ನಿಗದಿಪಡಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ