AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃಗಾಲಯದಲ್ಲಿ ಅಸ್ವಸ್ಥಗೊಂಡ ಮೊಸಳೆ.. ಸ್ಕ್ಯಾನಿಂಗ್ ಮಾಡಿದ ವೈದ್ಯರಿಗೆ ಕಾಣಿಸಿದ್ದು ಶಾಕಿಂಗ್ ದೃಶ್ಯ! ಏನದು?

Viral News: ಪ್ಲಾಸ್ಟಿಕ್ ಪೈಪ್ ಮೂಲಕ ಕ್ಯಾಮೆರಾವನ್ನು ಮೊಸಳೆ ಹೊಟ್ಟೆಯೊಳಕ್ಕೆ ಇಳಿಯಬಿಟ್ಟು ಪರಿಶೀಲಿಸಿದೆವು. ನಂತರ ನಾಣ್ಯಗಳನ್ನು ಯಶಸ್ವಿಯಾಗಿ ಹೊಡತೆಗೆಯಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಥಿಯೋಡಾಕ್ಸ್ ಮೊಸಳೆ ಚೇತರಿಸಿಕೊಂಡಿತು. ಈ ಘಟನೆಯ ನಂತರ, ಮೃಗಾಲಯಕ್ಕೆ ಬರುವ ಜನರು ನಾಣ್ಯಗಳು ಮತ್ತಿತರ ವಸ್ತುಗಳನ್ನು ಮೃಗಾಲಯದ ಕಾರಂಜಿಗಳಲ್ಲಿ ಎಸೆಯದಂತೆ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದೆ.

ಮೃಗಾಲಯದಲ್ಲಿ ಅಸ್ವಸ್ಥಗೊಂಡ ಮೊಸಳೆ.. ಸ್ಕ್ಯಾನಿಂಗ್ ಮಾಡಿದ ವೈದ್ಯರಿಗೆ ಕಾಣಿಸಿದ್ದು ಶಾಕಿಂಗ್ ದೃಶ್ಯ! ಏನದು?
ಮೃಗಾಲಯದಲ್ಲಿ ಅಸ್ವಸ್ಥಗೊಂಡ ಮೊಸಳೆ.. ಸ್ಕ್ಯಾನಿಂಗ್ ಮಾಡಿದ ವೈದ್ಯರಿಗೆ ಶಾಕ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 20, 2024 | 7:14 PM

Share

ಮೃಗಾಲಯದಲ್ಲಿ ವಾಸವಿದ್ದ 36 ವರ್ಷದ ಮೊಸಳೆಯ ಹೊಟ್ಟೆಯಲ್ಲಿತ್ತು ಬರೋಬ್ಬರಿ 70 ನಾಣ್ಯಗಳು (metal Coins)! ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೃಗಾಲಯದ ಅಧಿಕಾರಿಗಳು ಮತ್ತು ಪಶುವೈದ್ಯರು ಪ್ರಾಣಿಗಳನ್ನು ಇರಿಸುವ ಸ್ಥಳದಲ್ಲಿ ನಾಣ್ಯಗಳೇ ಆಗಲಿ ಏನೇ ವಸ್ತುಗಳನ್ನಾಗಲಿ ಎಸೆಯದಂತೆ ಜನರನ್ನು ವಿನಂತಿಸಿದ್ದಾರೆ. ಅಮೆರಿಕದ ಒಮಾಹಾದಲ್ಲಿರುವ ಹೆನ್ರಿ ಡೋರ್ಲಿ ಮೃಗಾಲಯ ಮತ್ತು ಅಕ್ವೇರಿಯಂನಲ್ಲಿ ( zoo in Omaha, USA) ಈ ಘಟನೆ ನಡೆದಿದೆ. ಥಿಯೋಡಾಕ್ಸ್ (Thibodaux ) ಎಂಬ 36 ವರ್ಷದ ಮೊಸಳೆ ಇತ್ತೀಚೆಗೆ ಪ್ರಯಾಸ ಮಟ್ಟು ಆಹಾರ ಸೇವನೆ ಮಾಡುತಿತ್ತು. ಒಮ್ಮೊಮ್ಮೆ ತಿನ್ನುವುದನ್ನೇ ನಿಲ್ಲಿಸಿತ್ತು. ಇದರಿಂದಾಗಿ ಮೃಗಾಲಯದ ಸಿಬ್ಬಂದಿ ಮೊಸಳೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ, ಸ್ಕ್ಯಾನಿಂಗ್ ವರದಿಯಲ್ಲಿ ಹಾವಿನ ಹೊಟ್ಟೆಯಲ್ಲಿ ನಾಣ್ಯಗಳು ಕಾಣಿಸಿಕೊಂಡಿವೆ. ವೈದ್ಯರು ತಕ್ಷಣವೇ ಮೊಸಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 70 ನಾಣ್ಯಗಳನ್ನು ಹೊರತೆಗೆದಿದ್ದಾರೆ. ಅದರಿಂದ ಆ ಮೊಸಳೆಯ ಜೀವ ಉಳಿಯುತು ಅನ್ನೀ!

ಈ ಕುರಿತು ಮಾತನಾಡಿದ ಹೆನ್ರಿ ಡೋರ್ಲಿ ಮೃಗಾಲಯದ ಪಶು ವೈದ್ಯಾಧಿಕಾರಿ, ಮೃಗಾಲಯಕ್ಕೆ ಬರುವವರು ಮೊಸಳೆಗಳು ಇರುವ ಕಡೆ ನಾಣ್ಯಗಳನ್ನು ಎಸೆಯುತ್ತಾರೆ. ಇದು ಅತ್ಯಂತ ಅಪಾಯಕಾರಿ ನಡೆ ಎಂದು ಹೇಳಿದರು. ಈ ರೀತಿ ಮಾಡುವುದರಿಂದ ಪ್ರಾಣಿಗಳ ಜೀವಕ್ಕೆ ಅಪಾಯ ಎದುರಾಗುತ್ತದೆ. ತಿನ್ನವುದನ್ನು ನಿಲ್ಲಿಸಿದ್ದ ಥಿಯೋಡಾಕ್ಸ್ ಮೊಸಳೆಗೆ ತಕ್ಷಣ ಸ್ಲ್ಯಾನಿಂಗ್ ಮಾಡಲಾಯಿತು. ಆಗ ದೇಹದೊಳಗೆ ನಾಣ್ಯಗಳು ಇರುವುದು ಪತ್ತೆಯಾಯಿತು ಎಂದು ಅವರು ಹೇಳಿದರು.

ಇದನ್ನೂ ಓದಿ: ನಿಮ್ಮ ನೆಚ್ಚಿನ ಡೋರೆಮಾನ್ ಕಾರ್ಟೂನ್ ಪಾತ್ರಗಳ ಹಿನ್ನೆಲೆ ಧ್ವನಿ ಈ ಸುಂದರಿಯದ್ದು

ಪ್ಲಾಸ್ಟಿಕ್ ಪೈಪ್ ಮೂಲಕ ಕ್ಯಾಮೆರಾವನ್ನು ಮೊಸಳೆ ಹೊಟ್ಟೆಯೊಳಕ್ಕೆ ಇಳಿಯಬಿಟ್ಟು ಪರಿಶೀಲಿಸಿದೆವು. ನಂತರ ನಾಣ್ಯಗಳನ್ನು ಯಶಸ್ವಿಯಾಗಿ ಹೊಡತೆಗೆಯಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಥಿಯೋಡಾಕ್ಸ್ ಮೊಸಳೆ ಚೇತರಿಸಿಕೊಂಡಿತು. ನಂತರ ಅದನ್ನು ಅದರ ವಾಸಸ್ಥಳ ಜೂಗೆ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ನಂತರ, ಮೃಗಾಲಯಕ್ಕೆ ಬರುವ ಜನರು ನಾಣ್ಯಗಳು ಮತ್ತಿತರ ವಸ್ತುಗಳನ್ನು ಮೃಗಾಲಯದ ಕಾರಂಜಿಗಳಲ್ಲಿ ಎಸೆಯದಂತೆ ಎಚ್ಚರಿಕೆ ನೀಡುವ ಫಲಕಗಳನ್ನು ಹಾಕಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Tue, 20 February 24

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ