Viral VIdeo: ಫುಟ್ಬಾಲ್​​​ ಪಂದ್ಯದಲ್ಲಿ ಸೋತ ವಿದ್ಯಾರ್ಥಿಗಳಿಗೆ ಒದ್ದು ಮನಬಂದಂತೆ ಥಳಿಸಿದ ದೈಹಿಕ ಶಿಕ್ಷಕ; ವಿಡಿಯೋ ವೈರಲ್

ದೈಹಿಕ ಶಿಕ್ಷಕ ಅಣ್ಣಾಮಲೈ ಎಂದು ಗುರುತಿಸಲಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿ ತಂಡ ತನಿಖೆ ನಡೆಸಿ, ಅಣ್ಣಾಮಲೈ ಅವರನ್ನು ಅಮಾನತುಗೊಳಿಸಿದೆ ಎಂದು ವರದಿಗಳು ತಿಳಿಸಿವೆ. ವೈರಲ್​ ವಿಡಿಯೋ ಇಲ್ಲಿದೆ ನೋಡಿ.

Viral VIdeo: ಫುಟ್ಬಾಲ್​​​ ಪಂದ್ಯದಲ್ಲಿ ಸೋತ ವಿದ್ಯಾರ್ಥಿಗಳಿಗೆ ಒದ್ದು ಮನಬಂದಂತೆ ಥಳಿಸಿದ ದೈಹಿಕ ಶಿಕ್ಷಕ; ವಿಡಿಯೋ ವೈರಲ್

Updated on: Aug 14, 2024 | 11:11 AM

ತಮಿಳುನಾಡು: ಫುಟ್ಬಾಲ್ ಆಟದಲ್ಲಿ ಕಳಪೆ ಪ್ರದರ್ಶನ ನೀಡಿ ಸೋತಿದ್ದಕ್ಕೆ ದೈಹಿಕ ಶಿಕ್ಷಕರೊಬ್ಬರು ವಿದ್ಯಾರ್ಥಿಗಳನ್ನು ಕಾಲಿನಲ್ಲಿ ಒದ್ದು ಮನಬಂದಂತೆ ಥಳಿಸಿರುವ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಶಾಲೆಯ ದೈಹಿಕ ಶಿಕ್ಷಕ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ ಮಾಡುತ್ತಾ ಮನಬಂದಂತೆ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ದೈಹಿಕ ಶಿಕ್ಷಕ ಅಣ್ಣಾಮಲೈ ಎಂದು ಗುರುತಿಸಲಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿ ತನಿಖೆ ಆರಂಭಿಸಿದ್ದು, ಅಣ್ಣಾಮಲೈ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವರದಕ್ಷಿಣೆಗಾಗಿ ಹೆಂಡತಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಹಿಂಸಿಸಿ ಕೊಂದ ಗಂಡ

@vani_mehrotra ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು ಸದ್ಯ ವಿಡಿಯೋ ಎಲ್ಲೆಡೆ ವೈರಲ್​​​ ಆಗುತ್ತಿದೆ. ವಿಡಿಯೊದಲ್ಲಿ, ಶಿಕ್ಷಕ ತಂಡದ ಗೋಲ್ ಕೀಪರ್ ವಿದ್ಯಾರ್ಥಿಗೆ, “ನೀನು ಗಂಡಸಾ ಅಥವಾ ಹೆಂಗಸಾ? ಎಂದು ಬೈದು ಎಲ್ಲರ ಮುಂದೆ ಹೊಡೆದು ಅವಮಾನಿಸುತ್ತಿರುವುದನ್ನು ಕಾಣಬಹುದು. ಈ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:45 am, Wed, 14 August 24