ಸಾಮಾನ್ಯವಾಗಿ ಹೆಬ್ಬಾವುಗಳಂತಹ ದೈತ್ಯ ಹಾವುಗಳು ದಟ್ಟಾರಣ್ಯಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆದ್ರೆ ಈಗೀಗ ಈ ದೈತ್ಯ ಹಾವುಗಳು ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಮೀನುಗಾರರು ಮೀನಿಗಾಗಿ ಬೀಸಿದ್ದಂತಹ ಬಲೆಯಲ್ಲಿ 15 ಅಡಿ ಉದ್ದದ ದೈತ್ಯ ಹೆಬ್ಬಾವೊಂದು ಸಿಕ್ಕಿಹಾಕಿಕೊಂಡಿದೆ. ಬಲೆ ತುಂಬಾ ಮೀನು ಸಿಕ್ರೆ ಸಾಕಪ್ಪಾ ಎಂದು ಜಲಾಶಯದಲ್ಲಿ ಮೀನುಗಾರರು ಬಲೆ ಬೀಸಿ ಹೋಗಿದ್ದು, ಮೀನಿನ ಬದಲಿಗೆ ಅಕಸ್ಮಾತ್ ಆಗಿ ಈ ಬಲೆಗೆ ದೈತ್ಯ ಹೆಬ್ಬಾವೊಂದು ಬಿದ್ದಿದೆ. ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದಂತ ಹಾವನ್ನು ಕಂಡು ಮೀನುಗಾರರು ಬೆಚ್ಚಿ ಬಿದ್ದಿದ್ದಾರೆ.
ಈ ಘಟನೆ ಭಾನುವಾರ (ಡಿ.22) ತೆಲಂಗಾಣದ ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮಂಡಲದಲ್ಲಿ ನಡೆದಿದ್ದು, ಜೊನ್ನಾಲಬಗಡ ಜಲಾಶಯದಲ್ಲಿ ಮೀನುಗಾರರು ಮೀನಿಗಾಗಿ ಬೀಸಿದ್ದ ಬಲೆಯಲ್ಲಿ ದೈತ್ಯ ಹೆಬ್ಬಾವೊಂದು ಸಿಕ್ಕಿಹಾಕಿಕೊಂಡಿದೆ.
ಇದನ್ನೂ ಓದಿ: ಗರ್ಲ್ಸ್ ಹಾಸ್ಟೆಲ್ ಬಳಿ ಕಾಣಿಸಿಕೊಂಡ 100 ಕೆಜಿ ತೂಕದ ದೈತ್ಯ ಹೆಬ್ಬಾವು; ರಕ್ಷಣಾ ಕಾರ್ಯ ಹೇಗಿತ್ತು ನೋಡಿ…
ರಾಶಿ ರಾಶಿ ಮೀನು ಸಿಕ್ರೆ ಭಾನುವಾರ ಒಳ್ಳೆಯ ವ್ಯಾಪಾರ ಆಗುತ್ತೆ ಅಂತ ಪ್ಲ್ಯಾನ್ ಮಾಡಿ ಮೀನುಗಾರರು ಶನಿವಾರ ರಾತ್ರಿ ಜಲಾಶಯದಲ್ಲಿ ಬಲೆ ಬೀಸಿ ಹೋಗಿದ್ದರು. ಮರುದಿನ ಮುಂಜಾನೆ ಬಲೆಯನ್ನು ಎಳೆದಾಗ ಬಲೆ ತುಂಬಾನೇ ಭಾರವಿದೆ, ಪಕ್ಕಾ ಇದರಲ್ಲಿ ರಾಶಿ ರಾಶಿ ಮೀನು ಇರಬಹುದು ಎಂದು ಮೀನುಗಾರರು ಬಹಳನೇ ಖುಷಿಯಲ್ಲಿದ್ದರು. ಆದ್ರೆ ಬಲೆಯಲ್ಲಿ ಮೀನಿನ ಬದಲಿಗೆ ಬೃಹತ್ ಹೆಬ್ಬಾವನ್ನು ಕಂಡು ಅವರೆಲ್ಲಾ ಫುಲ್ ಶಾಕ್ ಆಗಿದ್ದಾರೆ. ತಕ್ಷಣ ಮೀನುಗಾರರು ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಬಲೆಯಲ್ಲಿ ಸಿಕ್ಕ ಹೆಬ್ಬಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಬಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ