AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತಾಳಿ ಕಟ್ಟುವ ಪದ್ಧತಿ ಬದಲಿಗೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ ವಿಶಿಷ್ಟವಾಗಿ ಮದುವೆಯಾದ ನವ ಜೋಡಿ

ಸಾಮಾನ್ಯವಾಗಿ ತಾಳಿ ಕಟ್ಟುವ, ಸಪ್ತಪದಿ ತುಳಿಯುವ ಹೀಗೆ ಶಾಸ್ತ್ರೋಕ್ತವಾಗಿ ಮದುವೆಗಳು ನಡೆಯುತ್ತವೆ. ಆದ್ರೆ ಇಲ್ಲೊಂದು ಜೋಡಿ ಈ ಎಲ್ಲಾ ಶಾಸ್ತ್ರ ಸಂಪ್ರದಾಯಗಳನ್ನು ಬದಿಗಿಟ್ಟು ಡಾ. ಅಂಬೇಡ್ಕರ್‌ ಅವರ ಭಾವಚಿತ್ರದ ಮುಂದೆ ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ಸರಳವಾಗಿ ಮದುವೆಯಾಗಿದ್ದಾರೆ. ಈ ವಿಶಿಷ್ಟ ಮದುವೆಯ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral: ತಾಳಿ ಕಟ್ಟುವ ಪದ್ಧತಿ ಬದಲಿಗೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ ವಿಶಿಷ್ಟವಾಗಿ ಮದುವೆಯಾದ ನವ ಜೋಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Dec 23, 2024 | 12:19 PM

Share

ಸಾಮಾನ್ಯವಾಗಿ ಎಲ್ಲರೂ ತಾಳಿ ಕಟ್ಟುವ, ಸಪ್ತಪದಿ ತುಳಿಯುವ ಸಾಂಪ್ರದಾಯಿಕ ಆಚರಣೆಗಳು ಮತ್ತು ಶಾಸ್ತ್ರಗಳನ್ನು ಪಾಲಿಸುವ ಮೂಲಕ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಾರೆ. ಇನ್ನೂ ಕೆಲವರು ಯಾವುದೇ ಆಡಂಬರ ಬೇಡವೆಂದು ಮಂತ್ರಮಾಂಗಲ್ಯದ ಮೂಲಕ ಸರಳವಾಗಿ ವಿವಾಹವಾಗುವವರೂ ಇದ್ದಾರೆ. ಆದ್ರೆ ಇಲ್ಲೊಂದು ಜೋಡಿ ಮಾತ್ರ ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಈ ಜೋಡಿ ಶಾಸ್ತ್ರ ಸಂಪ್ರದಾಯಗಳನ್ನು ಬದಿಗಿಟ್ಟು ಡಾ. ಅಂಬೇಡ್ಕರ್‌ ಅವರ ಭಾವಚಿತ್ರದ ಮುಂದೆ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಮದುವೆಯಾಗಿದ್ದಾರೆ. ಈ ವಿಶಿಷ್ಟ ಮದುವೆಯ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಛತ್ತೀಸ್‌ಗಢದ ಕಾಪು ಗ್ರಾಮ ಜೋಡಿಯೊಂದು ಸಂವಿದಾನದ ಮೇಲೆ ಪ್ರಮಾಣ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶಾಸ್ತ್ರ, ಸಂಪ್ರದಾಯ, ಆಚರಣೆಗಳಿಗಿಂತ ಸಂವಿಧಾನದ ಮೇಲೆ ಹೆಚ್ಚಿನ ನಂಬಿಕೆಯನ್ನು ಹೊಂದಿರುವ ವರ ಎಮಾನ್‌ ಲಾಹ್ರೆ ಮತ್ತು ವಧು ಪ್ರತಿಮಾ ಲಾಹ್ರೆ ಅದ್ದೂರಿ ವೆಚ್ಚಗಳಿಗೆ ಕಡಿವಾಣ ಹಾಕಬೇಕೆನ್ನುವ ನಿಟ್ಟಿನಲ್ಲಿ ಡಾ. ಅಂಬೇಡ್ಕರ್‌ ಅವರ ಭಾವಚಿತ್ರದ ಮುಂದೆ ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: ಕ್ರಿಸ್‌ಮಸ್‌ ಪಾರ್ಟಿಯಲ್ಲಿ ಸ್ನೇಹಿತರಿಗೆ ತನ್ನ ಎದೆ ಹಾಲು ಕುಡಿಸಿದ ಮಹಿಳೆ; ವಿಡಿಯೋ ವೈರಲ್‌

ಇವರು ಹಣೆಗೆ ಸಿಂಧೂರ ಇಡುವ ಸಂಪ್ರದಾಯವನ್ನಾಗಲಿ ಅಥವಾ ತಾಳಿ ಕಟ್ಟುವಂತಹ ಪದ್ಧತಿಯನ್ನು ಪಾಲಿಸದೆ ಜೀವನ ಪರ್ಯಂತ ನಾವು ಒಬ್ಬರನ್ನೊಬ್ಬರು ಪರಸ್ಪರ ಬೆಂಬಲಿಸುತ್ತಾ ಜೊತೆಯಾಗಿರುತ್ತೇವೆ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡುವ ಮೂಲಕ ಹಾಗೂ ಡಾ. ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರದಕ್ಷಿಣೆ ಹಾಕುವ ಮೂಲಕ ವಿಶಿಷ್ಟ ರೀತಿಯಲ್ಲಿ ಮದುವೆಯಾಗಿದ್ದಾರೆ. “ಅದ್ದೂರಿ ಮದುವೆ ಹಾಗೂ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ನಾವು ಹೀಗೆ ಸರಳವಾಗಿ ಮದುವೆಯಾಗಿದ್ದೇವೆ” ಎಂದು ವರ ಲಾಹ್ರೆ ಹೇಳಿಕೆ ನೀಡಿದ್ದಾರೆ. ಈ ಮದುವೆಯ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ