ತಂದೆ-ತಾಯಿ ಅದೆಷ್ಟೋ ಕನಸುಗಳನ್ನು ಹೊತ್ತು, ನಮ್ಮ ಮಗ ಅಥವಾ ಮಗಳು ಕೊನೆಗಾಲದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಕಷ್ಟಪಟ್ಟು ಮಕ್ಕಳನ್ನು ಸಾಕುತ್ತಾರೆ. ಆದ್ರೆ ಈ ಮಕ್ಕಳು ತಂದೆ ತಾಯಿಗೆ ವಯಸ್ಸಾಗುತ್ತಿದ್ದಂತೆ ಈ ಮುದಿ ಜೀವಗಳ ಸೇವೆ ಯಾರ್ ಮಾಡ್ತಾರೆ ಎಂದು ಹೆತ್ತವರ ಆಸ್ತಿಯನ್ನೆಲ್ಲಾ ತಮ್ಮ ಹೆಸರಿಗೆ ಬರೆಸಿಕೊಂಡು ಅವರನ್ನು ಆಶ್ರಮಕ್ಕೆ ಸೇರಿಸಿ ಬಿಡುತ್ತಾರೆ. ಇಲ್ಲವೇ ಚುಚ್ಚು ಮಾತುಗಳನ್ನಾಡುತ್ತಾ ಮನೆಯಲ್ಲಿಯೇ ಇರಿಸಿಕೊಳ್ಳುತ್ತಾರೆ. ಹೆತ್ತ ಮಕ್ಕಳಿಂದಲೇ ಕಷ್ಟ, ನೋವು ಅನುಭವಿಸಿದ ಹಿರಿ ಜೀವಗಳ ಅದೆಷ್ಟೋ ಕಥೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇದೀಗ ಅಂತಹದ್ದೇ ಅಮಾಯಕ ಹಿರಿ ಜೀವದ ಕಥೆಯೊಂದು ವೈರಲ್ ಆಗಿದೆ. ಹೆತ್ತವರು ಯಾರಿಗೆ ಬೇಕು ಅವರ ಅಸ್ತಿ ಇದ್ರೆ ಸಾಕು ಎಂದು ಮಕ್ಕಳು ಹೆತ್ತ ತಾಯಿಯ ಅಸ್ತಿಯನ್ನು ಕಬಳಿಸಿ, ಆಕೆಗೆ ಸರಿಯಾಗಿ ಊಟ ನೀಡದೆ ರಾಕ್ಷಸಿ ವರ್ತನೆಯನ್ನು ತೋರಿದ್ದಾರೆ. ಮಕ್ಕಳು ಕೊಡುವ ಕಷ್ಟವನ್ನು ಸಹಿಸಲಾರದೆ ಆ ತಾಯಿ ನಾಲ್ವರು ಪುತ್ರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ಅಳುಗುನೂರು ಗ್ರಾಮದಲ್ಲಿ ನಡೆದಿದ್ದು, ಮಕ್ಕಳು ಸರಿಯಾಗಿ ಊಟ ಕೊಡುತ್ತಿಲ್ಲವೆಂದು ವೃದ್ಧ ತಾಯಿ ಪುತ್ರರ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ನನ್ಗೆ ನಾಲ್ವರು ಪುತ್ರರಿದ್ದು ಅವರಿಗೆಲ್ಲಾ ಮದುವೆ ಮಾಡಿ, ನನ್ನ ಆಸ್ತಿಯನ್ನೆಲ್ಲಾ ಅವರ ಹೆಸರಿಗೆ ಬರೆದುಕೊಟ್ಟಿದ್ದೇನೆ. ಆದ್ರೆ ಅವರು ನನ್ನನ್ನು ಪುಟ್ಟ ಗುಡಿಸಲಿನಲ್ಲಿಟ್ಟು ಸರಿಯಾಗಿ ಊಟ ಕೂಡಾ ನೀಡುತ್ತಿಲ್ಲ ಎಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು Telugu Scribe ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಆಸ್ತಿಯನ್ನೆಲ್ಲಾ ಕಬಳಿಸಿ ಇದೀಗ ಊಟವನ್ನು ಕೊಡದೆ ಕಷ್ಟ ಕೊಡುತ್ತಿರುವ ನಾಲ್ವರು ಪುತ್ರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
కన్నతల్లి ఆస్తి మొత్తం లాక్కొని కనీసం అన్నం పెట్టని నలుగురు కొడుకులు.. పోలీస్ స్టేషన్లో ఫిర్యాదు చేసిన వృద్దురాలు
కరీంనగర్ – నా నలుగురు కొడుకులకు పెళ్లిళ్లు చేసి ఆస్తిని మొత్తం పంచేశాను.. నన్ను ఒక చిన్న గుడిసెలో ఉంచి చివరికి అన్నం కూడా పెట్టట్లేదు అంటూ.. పోలీస్ స్టేషన్లో… pic.twitter.com/XA1o9HaTZq
— Telugu Scribe (@TeluguScribe) August 26, 2024
ವೈರಲ್ ವಿಡಿಯೋದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧ ತಾಯಿ ಠಾಣೆಗೆ ಬಂದು ಸರಿಯಾಗಿ ಊಟ ಕೊಡದ ಪುತ್ರರ ವಿರುದ್ಧ ದೂರು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪಾರ್ಕಿನಲ್ಲಿ ಕುಳಿತಿದ್ದ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕನಿಗೆ ಕಪಾಳ ಮೋಕ್ಷ ಮಾಡಿದ ಇಸ್ಲಾಂ ವ್ಯಕ್ತಿಗಳು
ಇಂದು ಮಧ್ಯಾಹ್ನ ಹಂಚಿಕೊಳ್ಳಲಾದ ಈ ಪೋಸ್ಟ್ 12 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ತಾಯಿಯನ್ನು ನೋಡಿಕೊಳ್ಳಲಾಗದವರು ನಬದುಕಿದ್ದೂ ವ್ಯರ್ಥ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಇಂತಹ ನೀಚ ಮಕ್ಕಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ