ನನ್ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ ಫ್ರೀ ಸಮೋಸಾ ಪಡೆಯಿರಿ; ಭರ್ಜರಿ ಆಫರ್‌ ನೀಡಿದ ವ್ಯಕ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 26, 2024 | 1:36 PM

ಯುಟ್ಯೂಬ್‌ ಚಾನೆಲ್‌ಗಳಲ್ಲಿ, ಫೇಸ್‌ಬುಕ್‌-ಇನ್ಸ್ಟಾಗ್ರಾಮ್‌ಗಳಲ್ಲಿ ಫಾಲೋವರ್ಸ್‌, ಸಬ್‌ಸ್ಕ್ರೈಬರ್ಸ್‌ಗಳನ್ನು ಗಿಟ್ಟಿಸಿಕೊಳ್ಳಲು ಜನ ಹಲವಾರು ಸರ್ಕಸ್‌ಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಸಮೋಸಾ ಅಂಗಡಿ ಮಾಲೀಕ ಯುಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬರ್ಸ್‌ ಸಂಖ್ಯೆ ಹೆಚ್ಚಿಸಲು ವಿಶಿಷ್ಟ ತಂತ್ರವನ್ನು ಅಳವಡಿಸಿದ್ದು, ನನ್‌ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಮಾಡುವವರಿಗೆ ಫ್ರೀ ಸಮೋಸಾ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ನನ್ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್ ಮಾಡಿ ಫ್ರೀ ಸಮೋಸಾ ಪಡೆಯಿರಿ; ಭರ್ಜರಿ ಆಫರ್‌ ನೀಡಿದ ವ್ಯಕ್ತಿ
ವೈರಲ್ ಪೋಸ್ಟ್
Follow us on

ಯುಟ್ಯೂಬ್‌ ಮನರಂಜನೆಯ ವೇದಿಕೆ ಮಾತ್ರವಾಗಿರದೆ ಹಣ ಗಳಿಸುವ ಉತ್ತಮ ಮಾರ್ಗವಾಗಿಯೂ ಇದು ಜನಪ್ರಿಯತೆಯನ್ನು ಪಡೆದಿದೆ. ಯುಟ್ಯೂಬ್‌ನಲ್ಲಿ ಚೆನ್ನಾಗಿ ಸಂಪಾದನೆ ಮಾಬಹುದು ಎಂದು ತಮ್ಮ ಕೆಲಸವನ್ನೇ ಬಿಟ್ಟು ವ್ಲಾಗ್‌ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರಿದ್ದಾರೆ. ಈ ಡಿಜಿಟಲ್‌ ಮಾಧ್ಯಮದಲ್ಲಿ ವೀವ್ಸ್‌ ಮತ್ತು ಸಬ್‌ಸ್ಕ್ರೈಬರ್ಸ್‌ಗಳನ್ನು ಗಿಟ್ಟಿಸಿಕೊಳ್ಳಲು ಯುಟ್ಯೂಬರ್ಸ್‌ ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಚಾನೆಲ್‌ಗೆ ಹೆಚ್ಚಿನ ಚಂದದಾರರನ್ನು ಗಳಿಸಲು ವಿಭಿನ್ನ ತಂತ್ರವನ್ನು ಅಳವಡಿಸಿದ್ದು, ನನ್‌ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಮಾಡುವವರಿಗೆ ಫ್ರೀ ಸಮೋಸಾ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ತೆಲಂಗಾಣದ ಹನುಮಕೊಂಡ ಜಿಲ್ಲೆಯ ವಡ್ಡೆಪಲ್ಲಿ ಎಂಬಲ್ಲಿನ ಸಮೋಸಾ ಕಾರ್ಟ್‌ ಮಾಲೀಕರೊಬ್ಬರು ತನ್ನ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಮಾಡುವವರಿಗೆ ಫ್ರೀ ಸಮೋಸಾ ನೀಡುವುದಾಗಿ ಬಂಪರ್‌ ಆಫರ್‌ ನೀಡಿದ್ದಾರೆ.

ಇದನ್ನೂ ಓದಿ: ಅಂಗಾಂಗ ದಾನಕ್ಕೂ ಜಿಎಸ್‌ಟಿ; ತಮಾಷೆಯಾಗಿ ವಿತ್ತ ಸಚಿವೆಯ ಕಾಲೆಳೆದ ಇನ್ಫ್ಲ್ಯುಯೆನ್ಸರ್

ಹೌದು ಆ ವ್ಯಕ್ತಿ ಸಮೋಸಾ ಸೆಂಟರ್‌ ಹೆಸರಿನ ಸಮೋಸಾ ಕಾರ್ಟ್‌ ಒಂದನ್ನು ನಡೆಸುತ್ತಿದ್ದು, ಆ ವ್ಯಕ್ತಿ ತನ್ನ ಗೂಡಂಗಡಿಯಲ್ಲಿ “Janmuounika@volg ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಮಾಡುವವರಿಗೆ ಫ್ರೀ ಸಮೋಸಾ ನೀಡಲಾಗುವುದು ಎಂಬ ಬ್ಯಾನರ್‌ ಒಂದನ್ನು ಹಾಕಿಸಿದ್ದಾರೆ. ಯುಟ್ಯೂಬ್‌ನಲ್ಲಿ ಸಬ್‌ಸ್ಕ್ರೈಬರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಆ ವ್ಯಕ್ತಿ ವಿಭಿನ್ನ ಟ್ರಿಕ್ಸ್‌ ಬಳಸಿದ್ದು, ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ