Viral: ರಸ್ತೆ ಗುಡಿಸುತ್ತಿದ್ದ ವೇಳೆ ಸ್ವಚ್ಛತಾ ಸಿಬ್ಬಂದಿಗೆ ಗುದ್ದಿದ ಕಾರು, ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ಅಪಘಾತದ ದೃಶ್ಯ
ಸ್ವಚ್ಛತಾ ಸಿಬ್ಬಂದಿಯೊಬ್ಬರು ಡಿವೈಡರ್ ಬಳಿ ನಿಂತು ರಸ್ತೆ ಗುಡಿಸುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಆ ಮಹಿಳೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಅಲ್ಲೇ ಕುಸಿದು ಬಿದ್ದಿದ್ದು, ಈ ಭಯಾನಕ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡಿಕ್ಕಿ ಹೊಡೆದರೂ ಕಾರ್ ಚಾಲಕ ಮಹಿಳೆಯ ಸಹಾಯಕ್ಕೂ ಬಾರದೆ ಪರಾರಿಯಾಗಿದ್ದು, ಖೇದಕರ ಸಂಗತಿಯಾಗಿದೆ.
ಇತ್ತೀಚಿಗೆ ರಸ್ತೆ ಅಪಘಾತ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಇದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಸ್ವಚ್ಛತಾ ಸಿಬ್ಬಂದಿಯೊಬ್ಬರು ಡಿವೈಡರ್ ಬಳಿ ನಿಂತು ರಸ್ತೆ ಗುಡಿಸುತ್ತಿದ್ದ ವೇಳೆ ಸೈಡ್ ಅಲ್ಲಿ ಬಂದಂತಹ ಕಾರೊಂದು ಆ ಮಹಿಳೆಗೆ ಡಿಕ್ಕಿ ಹೊಡೆದಿದೆ. ಕಾರು ಗುದ್ದಿದ ಪರಿಣಾಮ ಆ ಮಹಿಳೆ ಅಲ್ಲೇ ಕುಸಿದು ಬಿದ್ದಿದ್ದಾರೆ. ಈ ಭಯಾನಕ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಕ್ಕಿ ಹೊಡೆದರೂ ಕಾರ್ ಚಾಲಕ ಮಹಿಳೆಯ ಸಹಾಯಕ್ಕೂ ಬಾರದೆ ಪರಾರಿಯಾಗಿದ್ದು, ನಿಜಕ್ಕೂ ಖೇದಕರ ಸಂಗತಿಯಾಗಿದೆ.
ಈ ಘಟನೆ ತೆಲಂಗಾಣದ ಹನುಮಕೊಂಡದಲ್ಲಿ ನಡೆದಿದ್ದು, ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಹಳೆ ಬಸ್ ಡಿಪೋಗೆ ಹೋಗುವ ರಸ್ತೆ ಮಾಗರ್ದಲ್ಲಿ ಡಿವೈಡರ್ ಬಳಿ ನಿಂತು ಕಸ ಗುಡಿಸುತ್ತಿದ್ದ ವೇಳೆ ವೇಗವಾಗಿ ಬಂದಂತಹ ಕಾರೊಂದು ಸ್ವಚ್ಛತಾ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಸೆಪ್ಟೆಂಬರ್ 7 ರಂದು ಸಂಜೆ 5.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮಹಿಳೆಗೆ ಗಂಭೀರವಾಗಿ ಗಾಯಗಳಾಗಿವೆ. ಮಹಿಳೆಯನ್ನು ರಾಮಂಚಿ ಸಮ್ಮಕ್ಕ ಎಂದು ಗುರುತಿಸಲಾಗಿದೆ. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ಭೀಕರ ಅಪಘಾತದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕ್ಸಿಡೆಂಟ್ ಮಾಡಿದ ಕಾರ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
రోడ్డుపై పనిచేస్తున్న పీహెచ్ వర్కర్ను ఢీకొట్టిన కారు.. ఆలస్యంగా వెలుగులోకి వచ్చిన ఘటన
హనుమకొండ – అంబేద్కర్ సర్కిల్ నుంచి ఓల్డ్ బస్ డిపో వెళ్లే రోడ్డులో పీహెచ్ వర్కర్ రామంచ సమ్మక్కను ఢీకొట్టిన కారు.
రామంచ సమ్మక్కకు తీవ్ర గాయాలు.
Video Credits – @gattu_ranjith pic.twitter.com/yjYtDECFfb
— Telugu Scribe (@TeluguScribe) September 9, 2024
ಈ ಕುರಿತ ವಿಡಿಯೋವನ್ನು TeluguScribe ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಡಿವೈಡರ್ ಬಳಿ ನಿಂತು ಕಸ ಗುಡಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ವೇಳೆ ವೇಗವಾಗಿ ಬಂದಂತಹ ಕಾರೊಂದು ಸೈಡ್ ಬಂದು ಮಹಿಳೆಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ನಂತರ ಸ್ಥಳೀಯರು ಇತರೆ ವಾಹನ ಸವಾರರು ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ.
ಇದನ್ನೂ ಓದಿ: ಹದಿಹರೆಯದ ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ಸೆಪ್ಟೆಂಬರ್ 9 ರಂದು ಹಂಚಿಕೊಳ್ಳಲಾದ ಈ ವಿಡಿಯೋ 54 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಆಕ್ಸಿಡೆಂಟ್ ಉದ್ದೇಶಪೂರ್ವಕವಾಗಿ ಮಾಡಿದಂತೆ ತೋರುತ್ತದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ಕಾರ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Tue, 10 September 24