ಮಹಾರಾಷ್ಟ್ರದ ಠಾಣೆಯ ಚಂದ್ರಶೇಖರ್ ದೇಸಾಯಿ ಎಂಬ ವ್ಯಕ್ತಿಗೆ ಅಂದು ಸ್ಥಳಿಯ ಪಾಲಿಕೆಯಿಂದ ದೂರವಾಣಿ ಕರೆ ಬಂತು. ಸಹಜವಾಗಿ ಫೋನ್ ಕರೆ ಸ್ವೀಕರಿಸಿದ ಅವರಿಗೆ ಆಚೆಯಿಂದ ಹೇಳಿದ ಮಾತುಗಳನ್ನು ಕೇಳಿ ಏನು ಹೇಳಬೇಕೆಂದೇ ತಿಳಿಯಲಿಲ್ಲ. ‘ಚಂದ್ರಶೇಖರ್ ದೇಸಾಯಿ ಅವರ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ. ದಯವಿಟ್ಟು ತೆಗೆದುಕೊಂಡು ಹೋಗಿ’ ಎಮದು ಸ್ವತಃ ಚಂದ್ರಶೇಖರ ದೇಶಾಯಿ ಅವರಿಗೇ ಪಾಲಿಕೆ ಸಿಬ್ಬಂದಿ ಫೋನ್ನಲ್ಲಿ ತಿಳಿಸಿದರು. ಆರಾಮಾಗಿ ಬದುಕಿದ್ದ ಅವರಿಗೆ ತಮ್ಮದೇ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ ಎಂಬ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯಿತು. ಈ ಅನೂಹ್ಯ ವಿದ್ಯಮಾನದ ಬಗ್ಗೆ ಸ್ಥಳೀಯ ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿದವು.
ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಿದ್ದಂತೆಯೇ ಠಾಣೆ ನಗರಸಭೆ ಪಾಲಿಕೆ ಎಚ್ಚೆತ್ತಿತು. ಸ್ವತಃ ಪಾಲಿಕೆಯ ಉಪ ಆಯುಕ್ತ ಸಂದೀಪ್ ಮಾಳ್ವಿ ಈ ಕುರಿತು ಗಮನಹರಿಸಿ ಮರಣಪತ್ರದ ದಾಖಲೆಗಳನ್ನು ಪರಿಶೀಲಿಸಿದರು. ಆನಂತರವೇ ತಿಳಿದಿದ್ದು, ಅದು ತಾಂತ್ರಿಕ ದೋಶವೆಂದು. ಈ ತಪ್ಪನ್ನು ಸರಿಪಡಿಸಲು ತಕ್ಷಣವೇ ತಮ್ಮ ತಂಡಕ್ಕೆ ಅವರು ಸೂಚಿಸಿದರು. ಆದರೆ ಅಷ್ಟು ಹೊತ್ತಿಗೆ ಟ್ವಿಟರ್ನಲ್ಲಿ ಈ ಸುದ್ದಿ ಬಹಳವೇ ಚಿತ್ರ ವಿಚಿತ್ರದ ಟ್ವೀಟ್ಗಳು ಹುಟ್ಟಲು ಕಾರಣವಾಗಿತ್ತು. ಅಂತಹ ಕೆಲವು ಟ್ವೀಟ್ಗಳು ಇಲ್ಲಿವೆ.
Maharashtra: Thane man receives a call from civic body to collect his death certificate
“I received a call from Thane Municipal Corporation to collect my death certificate,” Chandrashekhar Desai said pic.twitter.com/i9KX3ndhfx
— ANI (@ANI) July 1, 2021
We got this list from Pune office as we don’t prepare it. It was a technical error as his name appeared in the list of deaths. We’ve instructed our team to verify the list & then call people for follow-up: Dy Commissioner, Thane Municipal Corporation pic.twitter.com/VGA4RYk1x9
— ANI (@ANI) July 1, 2021
Man after visiting Thane Municipal pic.twitter.com/PYIGGk1xDr
— chacha monk (@oldschoolmonk) July 1, 2021
Man while collecting his death certificate- pic.twitter.com/lcKZXegjo7
— samosa (@soulsamosa) July 1, 2021
ಈ ತಪ್ಪನ್ನು ಸರಿಪಡಿಸಲು ತಕ್ಷಣವೇ ತಮ್ಮ ತಂಡಕ್ಕೆ ಅವರು ಸೂಚಿಸಿದರು. ಆದರೆ ಅಷ್ಟು ಹೊತ್ತಿಗೆ ಟ್ವಿಟರ್ನಲ್ಲಿ ಈ ಸುದ್ದಿ ಬಹಳವೇ ಚಿತ್ರ ವಿಚಿತ್ರದ ಟ್ವೀಟ್ಗಳು ಹುಟ್ಟಲು ಕಾರಣವಾಗಿತ್ತು. ಅಂತಹ ಕೆಲವು ಟ್ವೀಟ್ಗಳು ಇಲ್ಲಿವೆ.
ಇದನ್ನೂ ಓದಿ:
Viral Video: ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ಹೋಗಿ ಕಾಡಿಗೆ ಬಿಟ್ಟ ವೃದ್ಧ; ವಿಡಿಯೋ ವೈರಲ್!
ಲಾಕ್ಡೌನ್ ಮುಂದುವರಿಯುತ್ತಿದ್ದರೆ ಮಾನವರು ಹೇಗೆ ಕಾಣಿಸಬಹುದು? ವೈರಲ್ ಆಯ್ತು ಯುವತಿಯ ಫೋಟೋ
(Thane man told to receives death certificate of him by municipal corporation)
Published On - 7:19 pm, Sun, 4 July 21