Viral : ಹೆಣ್ಣೋ ಗಂಡೋ ಒಟ್ಟಿನಲ್ಲಿ ಆರಾಮಾದ ಮಗು ಜನಿಸಿದರೆ ಅದೇ ದೊಡ್ಡ ಸಮಾಧಾನ ಈವತ್ತು. ಸದ್ಯದ ಜೀವನಶೈಲಿಯಲ್ಲಿ ಮಗು ಸೂಸೂತ್ರವಾಗಿ ಹೊರಬಂದು ತಾಯಿಮಗು ಆರೋಗ್ಯವಾಗಿದ್ದರೆ ಸಾಕು ಎಂಬಂಥ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಹುಟ್ಟಿದ ಮಗುವಿಗೆ ಸಣ್ಣ ಏರುಪೇರಾಗಿದ್ದರೆ ಆ ಸಂಕಟ ಹೇಳತೀರದು. ಏನೇ ಆದರೂ ವೈದ್ಯಕೀಯ ಜಗತ್ತು ಅದಕ್ಕೊಂದು ಪರಿಹಾರ ಕೊಟ್ಟೇ ಕೊಡುತ್ತದೆ ಎನ್ನುವುದು ದೊಡ್ಡ ಭರವಸೆ.
ಮೆಕ್ಸಿಕೋದ ನ್ಯೂವೋ ಲಿಯೋನ್ ಆಸ್ಪತ್ರೆಯಲ್ಲಿ ಎರಡು ಇಂಚಿನ ಬಾಲದೊಂದಿಗೆ ಜನಿಸಿದ ಹೆಣ್ಣುಮಗುವಿನ ಫೋಟೋ ಇದೀಗ ವೈರಲ್ ಆಗಿದೆ. ಎರಡು ತಿಂಗಳ ಶಸ್ತ್ರಕ್ರಿಯೆಯ ಮೂಲಕ ಈ ಮಗು ಜನಿಸಿತ್ತು. ಬಾಲದೊಂದಿಗೆ ಹುಟ್ಟಿದ ಮಗುವನ್ನು ನೋಡಿದ ವೈದ್ಯರು, ನರ್ಸ್ಗಳು ಮತ್ತು ಪೋಷಕರು ಆರಂಭದಲ್ಲಿ ಆತಂಕ ಮತ್ತು ಆಘಾತಕ್ಕೆ ಒಳಗಾಗಿದ್ದರು. ಆದರೆ ಬಾಲವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದ ನಂತರ ಎಲ್ಲರೂ ನಿರಾಳವಾದರು. ಮಗುವಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂಬುದು ದೃಢಪಟ್ಟಿದೆ. ಈಗ ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ.
ಇದನ್ನೂ ಓದಿ : ಇದು ನಿಜವಾದ ಪ್ರೀತಿ ಎನ್ನುತ್ತಿದ್ದಾರೆ ನೆಟ್ಟಿಗರು, ನೋಡಿ ವೈರಲ್ ವಿಡಿಯೋ
ಈ ಮಗು ಗರ್ಭಾವಸ್ಥೆಯಲ್ಲಿದ್ಧಾಗ ಕೂಡ ಯಾವುದೇ ರೀತಿಯ ತೊಂದರೆಗಳು ಉಂಟಾಗಿರಲಿಲ್ಲ. ಮೃದು ಚರ್ಮ ಮತ್ತು ಕೂದಲಿನಿಂದ ಕೂಡಿದ ಬಾಲವು ಬೆನ್ನಿನ ಕೆಳಗೆ ಎಡಭಾಗದಲ್ಲಿ ಇತ್ತು. ಒಟ್ಟು 5.7 ಸೆಂ.ಮೀ ಉದ್ದವನ್ನು ಇದು ಹೊಂದಿತ್ತು. ಮಗುವಿನ ಬೆಳವಣಿಗೆಯಲ್ಲಿ ಸಹಜತೆ ಇತ್ತು, ತೂಕದಲ್ಲಿಯೂ ಹೆಚ್ಚಳವಾಗಿತ್ತು. ಎರಡು ತಿಂಗಳು ತುಂಬುತ್ತಿದ್ದಂತೆ ಸಣ್ಣ ಶಸ್ತ್ರಚಿಕಿತ್ಸೆಯ ಮೂಲಕ ಈ ಬಾಲವನ್ನು ಕತ್ತರಿಸಿ ತೆಗೆಯಲಾಯಿತು. ಅದೇ ದಿನ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಅದೇ ದಿನವೇ ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು.
ಬಾಲದೊಂದಿಗೆ ಹುಟ್ಟಿದ ಮಕ್ಕಳು ಅಪರೂಪ. 2017ರ ತನಕ ಇಂಥ ಮಕ್ಕಳ ಸಂಖ್ಯೆ 195ರಷ್ಟಿತ್ತು. 20 ಸೆಂ.ಮೀ. ಉದ್ದದ ಬಾಲವನ್ನು ಹೊಂದಿದ ಮಗುವೊಂದು ಜನಿಸಿತ್ತು. ಆ ಬಾಲಕ್ಕೆ ಮಾಂಸದಿಂದ ಕೂಡಿದ ಚೆಂಡಿನಂಥದ್ದೊಂದು ಅಂಟಿಕೊಂಡಿತ್ತು. ನೋಡಲು ಗದೆಯಂತೆ ಕಾಣುತ್ತಿತ್ತು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:28 am, Mon, 28 November 22